ಬೆಂಗಳೂರು: ಸಂಸದೆ ಸುಮಲತಾ(Sumlatha Ambareesh) ಬಿಜೆಪಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ(LR Shivarame Gowda) ಅವರು ಬಿಜೆಪಿ ಪಕ್ಷಕ್ಕೆ(BJP Karnataka) ಬೆಂಬಲ ಘೋಷಿಸಿದ್ದಾರೆ. ಬೆಂಗಳೂರಿನ ನಾಗಮಂಗಲ ನಿವಾಸಿಗಳ ಸಮಾವೇಶದಲ್ಲಿ ಸಚಿವ ಮುನಿರತ್ನ(Munirathna) ಸಮ್ಮುಖದಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲೇ ಅಧಿಕೃತವಾಗಿ ಶಿವರಾಮೇಗೌಡ ಬಿಜೆಪಿ ಸೇರ್ಪಡೆ ಆಗಲಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, ನಾಗಮಂಗಲ ಬಿಜೆಪಿಯಿಂದ ದೂರ ಉಳಿದಿತ್ತು. ನಾಗಮಂಗಲಕ್ಕೆ ಬಿಜೆಪಿ ಅತ್ಯಗತ್ಯವಾಗಿ ಬೇಕು. ಬಿಜೆಪಿ ಪಕ್ಷ ಈ ರಾಜ್ಯಕ್ಕೆ, ರಾಷ್ಟ್ರಕ್ಕೆ ಬೇಕು. ಬಿಎಸ್ ಯಡಿಯೂರಪ್ಪ ಸಿಎಂ ಇದ್ದಾಗ ನನಗೆ ಲೋಕಸಭೆಗೆ ಬಿ ಫಾರಂ ಕೊಟ್ಟಿದ್ದರು. 1.67 ಮತ ಪಡೆದು ಆಗ ನಾನು ಸೋತೆ. ಬಳಿಕ ನಾನು ಜೆಡಿಎಸ್ಗೆ ಬಂದೆ ಜೆಡಿಎಸ್ ನಲ್ಲಿ ನನ್ನನ್ನು ಬಳಸಿಕೊಂಡರು. ಹೆಚ್ಡಿ ದೇವೇಗೌಡರು, ಹೆಚ್ಡಿ ಕುಮಾರಸ್ವಾಮಿ ಅವರು ನನ್ನನ್ನು ಬಳಸಿಕೊಂಡರು ಎಂದು ಶಿವರಾಮೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: ನೆಲಮಂಗಲ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಮನೆಯ ಕಾಂಪೌಂಡ್ ಧ್ವಂಸ ಮಾಡಿಸಿದ ಬಿಜೆಪಿ ಮುಖಂಡ
ಈ ದೇಶವನ್ನು ಕಳಂಕರಹಿತವಾಗಿ ಮೋದಿಯವರು ಆಳ್ತಿದಾರೆ. ಮಂಡ್ಯದಲ್ಲಿ ಬಿಜೆಪಿ ಬೇರೂರಬೇಕು. ಮಂಡ್ಯದಲ್ಲಿ ಕಮಲ ಅರಳಿಸಬೇಕು. ನನ್ನನ್ನೂ ಬಿಜೆಪಿಯಿಂದ ಆಹ್ವಾನಿಸಲಾಗಿದೆ. ಸುಮಲತಾ ಅವರೂ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ನಾಗಮಂಗಲ ಸೇರಿ ಏಳೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸ್ತೇವೆ. ಮುನಿರತ್ನ ಸೋಲಿಲ್ಲದ ಸರದಾರ. ಮುಂದಿನ 20 ವರ್ಷ ಮುನಿರತ್ನರನ್ನು ಸೋಲಿಸೋ ಗಂಡು ಹುಟ್ಟಲ್ಲ. ನಾನು ಸಿದ್ದರಾಮಯ್ಯ, ಕುಮಾರಸ್ವಾಮಿ ಆಳ್ವಿಕೆ ನೋಡಿದವನು. ನಾಗಮಂಗಲದ ಜನರ ಮತ ಕೇಳುವ ಹಕ್ಕು ಚೆಲುವರಾಯಸ್ವಾಮಿ, ಸುರೇಶ್ ಗೌಡರಿಗೆ ಇಲ್ಲ. ನಾನು ಬಿಜೆಪಿ ಸೇರುತ್ತೇನೆ ಎಂದು ಶಿವರಾಮೇಗೌಡ ಘೋಷಿಸಿದರು.
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಸಂಸದ ಜಿ.ಮಾದೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿ ಜೆಡಿಎಸ್ನಿಂದ ಉಚ್ಚಾಟನೆಗೊಂಡಿದ್ದರು. ಉಚ್ಚಾಟನೆಗೊಂಡ ಒಂದು ವರ್ಷದ ಬಳಿಕ ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ