ಹಿಂದೂ ಧರ್ಮದಲ್ಲಿ ಆಶ್ವೀಜ ಮಾಸವನ್ನು ಹಬ್ಬಗಳ ಮಾಸ ಎಂದು ಕರೆಯಲಾಗುತ್ತದೆ. ಈ ವರ್ಷ ಆಶ್ವೀಜ ಮಾಸವು ಕೆಲವು ಕಾರಣಗಳಿಂದ ವಿಶೇಷವಾಗಿದೆ. ಈ ಮಾಸದಲ್ಲಿ ಶಾರದೀಯ ನವರಾತ್ರಿ, ದೀಪಾವಳಿ ಹಬ್ಬ, ಶೀಗೀ ಹುಣ್ಣಿಮೆ ಆಚರಿಸಲಾಗುತ್ತದೆ. ಈ ವರ್ಷದ ಹುಣ್ಣಿಮೆಯ ದಿನ ಚಂದ್ರಗ್ರಹಣ (Lunar Eclipse 2023) ಸಂಭವಿಸುತ್ತಿದೆ. ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವ ಎರಡು ಗ್ರಹಣಗಳು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರಲಿವೆ. ಆದರೆ ಮುಂಬರುವ ಚಂದ್ರ ಗ್ರಹಣ ನಾಲ್ಕು ರಾಶಿಗಳ ಜಾತಕದವರ ಮೇಲೆ ಸ್ವಲ್ಪ ಜಾಸ್ತಿಯೇ ಪರಿಣಾಮ ಬೀರಲಿದೆ.
ಭೂಮಿಯು ಸೂರ್ಯ ಮತ್ತು ಚಂದ್ರನ ಮುಂದೆ ಚಲಿಸಿದಾಗ ಮತ್ತು ಚಂದ್ರನ ಮೇಲೆ ತನ್ನ ನೆರಳನ್ನು ಬೀರಿದಾಗ, ಚಂದ್ರಗ್ರಹಣ ಸಂಭವಿಸುತ್ತದೆ. ಭಾಗಶಃ ಚಂದ್ರ ಗ್ರಹಣ ಅವಧಿಯು ಅಕ್ಟೋಬರ್ 28, 2023, 11:31 pm ರಿಂದ 02:24 pm ವರೆಗೆ. ಭಾಗಶಃ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಹಾದುಹೋಗುತ್ತದೆ. ಭೂಮಿಯ ನೆರಳಿನ ಕಾರಣದಿಂದಾಗಿ ಚಂದ್ರನ ಭಾಗವು ಭೂಮಿಗೆ ಎದುರಾಗಿರುವ ಭಾಗವು ಕಪ್ಪು ಬಣ್ಣದಲ್ಲಿ ಕಾಣುತ್ತದೆ.
ಅಕ್ಟೋಬರ್ 28, 2023 ರಂದು ಭಾರತವು ಭಾಗಶಃ ಚಂದ್ರಗ್ರಹಣವನ್ನು ನೋಡಲು ಸಾಧ್ಯವಾಗುತ್ತದೆ. ನವದೆಹಲಿಯಲ್ಲಿ ಚಂದ್ರಗ್ರಹಣವು ರಾತ್ರಿ 11:31 ಕ್ಕೆ ಪ್ರಾರಂಭವಾಗುತ್ತದೆ ಮತ್ತು 03:36ಕ್ಕೆ ಕೊನೆಗೊಳ್ಳುತ್ತದೆ. ಸುಮಾರು 15 ನಿಮಿಷಗಳ ಕಾಲ ಗ್ರಹಣ ಗೋಚರಿಸುತ್ತದೆ. ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೇರಿಕಾ, ಉತ್ತರ/ಪೂರ್ವ ದಕ್ಷಿಣ ಅಮೇರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಟಿಕಾದಲ್ಲಿ, ಸಮಯ ಮತ್ತು ದಿನಾಂಕದ ಪ್ರಕಾರ, ಭಾಗಶಃ ಚಂದ್ರಗ್ರಹಣದ ಒಂದು ಭಾಗವು ಗೋಚರಿಸುತ್ತದೆ.
ಇದನ್ನೂ ಓದಿ: Lunar Eclipse 2023: ವರ್ಷದ ಕೊನೆಯ ಚಂದ್ರ ಗ್ರಹಣ ಇಂದು, ಎಲ್ಲೆಲ್ಲಿ ಗೋಚರಿಸುತ್ತದೆ? ಯಾವ ರಾಶಿಗೆ ಎಫೆಕ್ಟ್?
ಈ ಕೆಳಗಿನ ಶ್ಲೋಕವನ್ನು ಗ್ರಹಣಕಾಲದಲ್ಲಿ ಪಠಿಸುವುದರಿಂದ ಶುಭವಾಗುವುದು.
ಶ್ಲೋಕ :
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಮಾಹಿತಿ: ವೇ!!ಶ್ರೀ!!ಕುಮಾರಸ್ವಾಮಿ
ಶ್ರೀ ಜ್ಯೋತಿಷ್ಯ ಸಲಹಾ ಕೇಂದ್ರ