ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ ಮಹಾ ಪೊಲೀಸ್: ಬೆಂಗಳೂರಿನ ಮೂವರು ಇನ್ಸ್​​​ಪೆಕ್ಟರ್​​​ಗಳ ತಲೆದಂಡ

ಮಹಾರಾಷ್ಟ್ರ ಪೊಲೀಸರು ಬಂದು ಬೆಂಗಳೂರಿನಲ್ಲಿದ್ದ ಡ್ರಗ್ಸ್ ಫ್ಯಾಕ್ಟರಿಯನ್ನು ಪತ್ತೆ ಮಾಡಿದ್ದಾರೆ. ಫ್ಯಾಕ್ಟರಿ ತಯಾರಿಸಲು ದಂಧೆಕೋರರು ಆಲ್ ಇಂಡಿಯಾ ಪ್ಲಾನ್ ಮಾಡಿದ್ದರಂತೆ. ಕೇವಲ 8 ಕಿ.ಮೀ ವ್ಯಾಪ್ತಿಯಲ್ಲಿ ದಂಧೆ ನಡೆಸಲು ಪಕ್ಕಾ ಸೆಟಪ್ ಮಾಡಿದ್ದರು. ಇದರ ಮಧ್ಯೆ ಡ್ರಗ್ಸ್ ದಂಧೆಯನ್ನು ಭೇದಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆ ಮೂವರು ಇನ್ಸ್​​ಪೆಕ್ಟರ್​​ಗಳನ್ನು ಅಮಾನತು ಮಾಡಲಾಗಿದೆ.

ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ ಮಹಾ ಪೊಲೀಸ್:  ಬೆಂಗಳೂರಿನ ಮೂವರು ಇನ್ಸ್​​​ಪೆಕ್ಟರ್​​​ಗಳ ತಲೆದಂಡ
ಪ್ರಾತಿನಿಧಿಕ ಚಿತ್ರ
Edited By:

Updated on: Dec 29, 2025 | 9:06 PM

ಬೆಂಗಳೂರು, (ಡಿಸೆಂಬರ್ 29): ಕರ್ನಾಟಕವನ್ನ ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕು ಎನ್ನುವ ಪೋಲಿಸರ ಕನಸು,ಸರ್ಕಾರದ ಯೋಜನೆಗೆ ಜನ ಶಬ್ಬಾಶ್ ಅಂದಿದ್ರು. ಆದರೆ, ಸಿಲಿಕಾನ್ ಸಿಟಿಯಲ್ಲೇ ಡ್ರಗ್ಸ್ ಫ್ಯಾಕ್ಟರಿ (drug manufacturing units) ಇರೋದನ್ನ ಪತ್ತೆ ಮಾಡಿದ್ದಾರೆ. ಹೌದು…ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿದ್ದ ಡ್ರಗ್ಸ್​ ಫ್ಯಾಕ್ಟರಿಯನ್ನು ಪತ್ತೆ ಮಾಡಿದ್ದು, ಈ ಸಂಬಂಧ ಇದೀಗ ಮೂವರು ಇನ್ಸ್​​ಪೆಕ್ಟರ್​ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರಿನ (Bengaluru) ಕೊತ್ತನೂರು, ಆವಲಹಳ್ಳಿ ಮತ್ತು ಬಾಗಲೂರು ಠಾಣೆಯ ಇನ್ಸ್​​ಪೆಕ್ಟರ್​​ಗಳನ್ನು ಅಮಾನತು ಮಾಡಿ ಕಮಿನಷರ್ ಆದೇಶ ಹೊರಡಿಸಿದ್ದಾರೆ.

ಮೂರು ಠಾಣೆಯ ಇನ್ಸ್​​​ಪೆಕ್ಟರ್​​​ಗಳ ಅಮಾನತು

ಬೆಂಗಳೂರಿನ ಕೊತ್ತನೂರು ಠಾಣೆ ಇನ್ಸ್​ಪೆಕ್ಟರ್ ಚೇತನ್ ಕುಮಾರ್, ಆವಲಹಳ್ಳಿ ಠಾಣೆಯ ಇನ್ಸ್ ಪೆಕ್ಟರ್ ರಾಮಕೃಷ್ಣ ರೆಡ್ಡಿ ಹಾಗೂ ಬಾಗಲೂರು ಠಾಣೆ ಇನ್ಸ್ ಪೆಕ್ಟರ್ ಶಬರೀಶ್ ಅವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮೂವರು ಇನ್ಸ್​​ಪೆಕ್ಟರ್​ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.‌

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಸೀಜ್ ಪ್ರಕರಣ; ಇದರ ಹಿಂದಿದ್ಯಾ ಕೆಮಿಕಲ್ ಎಂಜಿನಿಯರ್ ಮಾಸ್ಟರ್ ಮೈಂಡ್?

ಪ್ರಭಾರಿ ಇನ್ಸ್ ಪೆಕ್ಟರ್ ಗಳ ನೇಮಕ

ಇನ್ನು ಅಮನತುಗೊಂಡಿರುವ ಮೂರು ಠಾಣೆಯ ಇನ್ಸ್​ಪೆಕ್ಟರ್​​ ಜಾಗಕ್ಕೆ ಹೊಸದಾಗಿ ಮೂವರು ಪ್ರಭಾರ ಇನ್ಸ್​​​​ಪೆಕ್ಟರ್​​ಗಳನ್ನು ನೇಮಿಕ ಮಾಡಲಾಗಿದೆ. ಶಾನ್ಯ ವಿಭಾಗ ಮಹಿಳಾ ಪೊಲೀಸ್ ಠಾಣೆ ಪಿಐ ವೆಂಕಟೇಶ್ ಅವರನ್ನು ಬಾಗಲೂರು ಠಾಣೆಗೆ ಪ್ರಭಾರ ಇನ್ಸ್ ಪೆಕ್ಟರ್ ಆಗಿ ನೇಮಿಸಲಾಗಿದೆ. ಸದ್ಯ ಕೆ.ಆರ್ ಪುರಂ ಠಾಣೆ ಇನ್ಸ್ ಪೆಕ್ಟರ್ ಆಗಿರುವ ರಾಮಮೂರ್ತಿ ಅವರನ್ನು ಆವಲಹಳ್ಳಿ ಠಾಣೆಗೆ ಪ್ರಾಭಾರಿಯಾಗಿ ನೇಮಕ ಮಾಡಲಾಗಿದೆ. ಇನ್ನು ಪ್ರಸ್ತುತ ಸಂಪಿಗೆಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರನ್ನ ಕೊತ್ತನೂರು ಠಾಣೆಗೆ ಪ್ರಭಾರಿ ಇನ್ಸ್​​ಪೆಕ್ಟರ್​​ ಆಗಿ ನೇಮಿಸಲಾಗಿದೆ.

ಕ್ರೆಡಿಟ್ ವಾರ್

ಇದೆಲ್ಲ ಒಂದು ಕಡೆಯಾದ್ರೆ ಬೆಂಗಳೂರು ಪೋಲಿಸರು ಕ್ರೆಡಿಟ್ ವಾರ್ ಗೆ ಇಳಿದಿದ್ದಾರೆ. ಡ್ರಗ್ಸ್ ಬೇಟೆಯಲ್ಲಿ ಮಹಾರಾಷ್ಟ್ರ ಪೊಲೀಸರ ಜೊತೆ ಬೆಂಗಳೂರು ಪೊಲೀಸರು, NCB ಅಧಿಕಾರಿಗಳ ಕೂಡ ಇದ್ರು ಎಂದಿದ್ದಾರೆ. ಅಷ್ಟಲ್ಲದೇ, ದಾಳಿ ವೇಳೆ ಕಾರ್ಖಾನೆ ಪತ್ತೆಯಾಗಿಲ್ಲ. MD ಡ್ರಗ್ಸ್ ಸಂಬಂಧಿಸಿದ ವಿಶೇಷ ಪರೀಕ್ಷೆಗಳಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಆದರೆ ದಾಳಿ ವೇಳೆ 1.2 ಕೋಟಿ ರೂ. ಮೌಲ್ಯದ 4.2 ಕಿಲೋಗ್ರಾಂ MD ಮಾತ್ರ ವಶಕ್ಕೆ ಪಡೆಯಲಾಗಿದೆ. ಹಾಗೆ 17 ಕೆಜಿ ಕಚ್ಚಾ ವಸ್ತು ವಶಕ್ಕೆ ಪಡೆಯಲಾಗಿದ್ರು, ಕಚ್ಚಾ ವಸ್ತುಗಳ ಒಟ್ಟು ಮೌಲ್ಯ ಇನ್ನೂ ಗೊತ್ತಾಗಿಲ್ವಂತೆ‌‌. ಆದರೆ ಮಹಾರಾಷ್ಟ್ರ ಪೊಲೀಸರು ಸುಮಾರು 55 ಕೋಟಿ ರೂ. ಮೌಲ್ಯದ ಡ್ರಗ್ಸ್ ಎಂದಿರೋದರ ಬಗ್ಗೆ ಅಧಿಕೃತ ಸ್ಪಷ್ಟಿಕರಣ ಪಡೆಯಲಾಗುತ್ತಿದೆ ಎಂದು ಬೆಂಗಳೂರು ಪೊಲೀಸರ ಮಾಹಿತಿ ನೀಡಿದ್ದಾರೆ. ಸದ್ಯ ಡ್ರಗ್ಸ ಪತ್ತೆ ಬಗ್ಗೆ ನಾವು ಕೂಡ ತನಿಖೆ ಮಾಡುತ್ತಿದ್ದು. ಯಾವ ಅಧಿಕಾರಿಗಳ ನಿರ್ಲಕ್ಷ ಇದೆಯೋ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕಮೀಷನರ್ ಎಚ್ಚರಿಕೆ ಕೊಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.