ಪತ್ನಿ ಜೊತೆ ಕಿರಿಕ್ ಮಾಡಿಕೊಂಡು ಪತಿ ಆತ್ಮಹತ್ಯೆ.. ಲೈವ್ ಸೂಸೈಡ್ ದೃಶ್ಯ ಮೊಬೈಲ್​ನಲ್ಲಿ ಸೆರೆ

ಮುಂಬೈನಲ್ಲಿದ್ದ ಪತ್ನಿ ಜತೆ ಜಗಳವಾಡಿಕೊಂಡಿದ್ದ ಅನಿಲ್ ಮದ್ಯದ ಅಮಲಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕೃತ್ಯದ ವಿಡಿಯೋವನ್ನು ನೆರೆಮನೆಯವರು ಸೆರೆ ಹಿಡಿದಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ನೆರೆಮನೆಯವರು ಎಷ್ಟೇ ಕಿರುಚಿಕೊಂಡರು, ಬೇಡವೆಂದರೂ ಯಾರ ಮಾತು ಕೇಳದೆ ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದೃಶ್ಯಗಳನ್ನು ನೆರೆಮನೆಯವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನೆರೆಮನೆಯವರು ಬಾಗಿಲು ಮುರಿದು ಒಳಬರುವಷ್ಟರಲ್ಲಿ ಅನಿಲ್​ನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ಜೊತೆ ಕಿರಿಕ್ ಮಾಡಿಕೊಂಡು ಪತಿ ಆತ್ಮಹತ್ಯೆ.. ಲೈವ್ ಸೂಸೈಡ್ ದೃಶ್ಯ ಮೊಬೈಲ್​ನಲ್ಲಿ ಸೆರೆ
ಆಯೇಷಾ ಬಾನು Edited By:

Updated on: Oct 16, 2026 | 10:54 PM

ಬೆಂಗಳೂರು: ಪತ್ನಿಯ ಜತೆ ಜಗಳವಾಡಿಕೊಂಡು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರದ ಮಂಜುನಾಥ ನಗರದಲ್ಲಿ ನಡೆದಿದೆ. 28 ವರ್ಷದ ಅನಿಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಮುಂಬೈನಲ್ಲಿದ್ದ ಪತ್ನಿ ಜತೆ ಜಗಳವಾಡಿಕೊಂಡಿದ್ದ ಅನಿಲ್ ಮದ್ಯದ ಅಮಲಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಈ ವೇಳೆ ಅನುಮಾನ ಬಂದು ಅನಿಲ್ ಮನೆ ಬಳಿ ಧಾವಿಸಿದ ಅಕ್ಕ ಪಕ್ಕದ ಮನೆಯವರು ಕಿಟಕಿ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಅನಿಲ್​​ನನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ.

ಆದ್ರೆ ನೆರೆಮನೆಯವರು ಎಷ್ಟೇ ಕಿರುಚಿಕೊಂಡರು, ಬೇಡವೆಂದರೂ ಯಾರ ಮಾತು ಕೇಳದೆ ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದೃಶ್ಯಗಳನ್ನು ನೆರೆಮನೆಯವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನೆರೆಮನೆಯವರು ಬಾಗಿಲು ಮುರಿದು ಒಳಬರುವಷ್ಟರಲ್ಲಿ ಅನಿಲ್​ನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 8:10 am, Tue, 19 January 21

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us