ಬೆಂಗಳೂರು: ಮಲ್ಲೇಶ್ವರಂನಲ್ಲಿ ಅತ್ಯಾಧುನಿಕ CATH ಪ್ರಯೋಗಾಲಯ ಸ್ಥಾಪಿಸಿದ ಮಣಿಪಾಲ್ ಆಸ್ಪತ್ರೆ

ಹಿರಿಯ ನಾಗರಿಕರಲ್ಲಿ ಹೆಚ್ಚುತ್ತಿರುವ ಹೃದಯ ಸಮಸ್ಯೆಗಳಿಗೆ ಪರಿಹಾರವಾಗಿ ಮಣಿಪಾಲ್ ಆಸ್ಪತ್ರೆ ಮಲ್ಲೇಶ್ವರಂ, ಅತ್ಯಾಧುನಿಕ CATH ಪ್ರಯೋಗಾಲಯವನ್ನು ಸ್ಥಾಪಿಸಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅನುಭವಿ ಹೃದ್ರೋಗ ತಜ್ಞರ ತಂಡವನ್ನು ಹೊಂದಿದೆ. ಈ ಸೌಲಭ್ಯವು ನಿಖರ ರೋಗನಿರ್ಣಯ ಮತ್ತು ತ್ವರಿತ ಚಿಕಿತ್ಸೆಯನ್ನು ಒದಗಿಸಲಿದೆ.

ಬೆಂಗಳೂರು: ಮಲ್ಲೇಶ್ವರಂನಲ್ಲಿ ಅತ್ಯಾಧುನಿಕ CATH ಪ್ರಯೋಗಾಲಯ ಸ್ಥಾಪಿಸಿದ ಮಣಿಪಾಲ್ ಆಸ್ಪತ್ರೆ
ಅತ್ಯಾಧುನಿಕ ಪ್ರಯೋಗಾಲಯ ಉದ್ಘಾಟಿಸಿದ ಗಣ್ಯರು

Updated on: May 14, 2025 | 7:16 AM

ಬೆಂಗಳೂರು, ಮೇ 14: ಹಿರಿಯ ವಯಸ್ಕರಲ್ಲಿ ಹೆಚ್ಚುತ್ತಿರುವ ವಿಶೇಷ ಹೃದಯ ಆರೈಕೆಯ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ, ನಗರದ ಮಲ್ಲೇಶ್ವರಂನಲ್ಲಿ ಮಣಿಪಾಲ್ ಆಸ್ಪತ್ರೆ  (Manipal Hospital’s) ಅತ್ಯಾಧುನಿಕ ಸಿಎಟಿಹೆಚ್​​ (CATH) ತಂತ್ರಜ್ಞಾನ ಲ್ಯಾಬ್​ ಸ್ಥಾಪಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರದ ಶಾಸಕ ಡಾ. ಅಶ್ವತ್ಥ ನಾರಾಯಣ್ ಸಿ ಎನ್ ಉದ್ಘಾಟಿಸಿದರು. ಹೃದಯ ಆರೈಕೆ ಮತ್ತು ರೋಗಿಗಳ ಯೋಗಕ್ಷೇಮವನ್ನು ಹೆಚ್ಚಿಸುವಲ್ಲಿ ನಿಟ್ಟಿನಲ್ಲಿ ದಿಟ್ಟ ಕ್ರಮಕೈಗೊಂಡ ಡಾ. ಸುದರ್ಶನ್ ಬಲ್ಲಾಳ್ ಮತ್ತು ತಂಡಕ್ಕೆ ಶಾಸಕ ಡಾ. ಅಶ್ವತ್ಥ ನಾರಾಯಣ್ ಸಿ ಎನ್ ಅಭಿನಂದನೆ ಸಲ್ಲಿಸಿದ್ದಾರೆ.

ಆಸ್ಪತ್ರೆಯ ಪ್ರಸಿದ್ಧ ಹೃದ್ರೋಗ ಸೇವೆಗಳಿಗೆ ಅವಿಭಾಜ್ಯವಾಗಿರುವ ಪ್ರಯೋಗಾಲಯವು ರೋಗಿಗಳ ಹೆಚ್ಚುತ್ತಿರುವ ಬೇಡಿಕೆ ಮತ್ತು ಹೃದ್ರೋಗ ಪ್ರಕರಣಗಳಲ್ಲಿನ ಗಮನಾರ್ಹ ಏರಿಕೆಯನ್ನು ಪೂರೈಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ CATH ಪ್ರಯೋಗಾಲಯವು, ನಿಖರವಾದ ರೋಗನಿರ್ಣಯ ಮತ್ತು ಜೀವ ಉಳಿಸುವ ಸಹಕಾರಿಯಾಗಲಿದೆ. ಇದು ಮಣಿಪಾಲದ ವಿಶಿಷ್ಟ ಇಂಟರ್ವೆನ್ಷನಲ್ ಹೃದ್ರೋಗ ತಜ್ಞರ ತಂಡಕ್ಕೆ ಅಧಿಕ ಬಲ ನೀಡಿದೆ. ಈ ಸೌಲಭ್ಯವನ್ನು ವಿಕಸನಗೊಳ್ಳುತ್ತಿರುವ ಆರೋಗ್ಯ ರಕ್ಷಣಾ ಕ್ರಮಗಳು ಮತ್ತು ಆಸ್ಪತ್ರೆಯಲ್ಲಿ, ವಿಶೇಷವಾಗಿ ಹಿರಿಯ ವಯಸ್ಕರಲ್ಲಿ ಹೆಚ್ಚುತ್ತಿರುವ ಹೃದಯ ಪ್ರಕರಣಗಳಿಗೆ ಅನೂಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ತಮ್ಮ ಸುಧಾರಿತ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಮೂಲಕ, ಮಣಿಪಾಲ್ ಆಸ್ಪತ್ರೆ ಮಲ್ಲೇಶ್ವರಂ ರೋಗಿಗಳು ತಮ್ಮ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಸಕಾಲಿಕ, ಉತ್ತಮ ಗುಣಮಟ್ಟದ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

ಶಾಸಕ ಡಾ. ಅಶ್ವತ್ಥ ನಾರಾಯಣ್ ಸಿ ಎನ್ ಹೇಳಿದ್ದಿಷ್ಟು

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರದ ಶಾಸಕ ಡಾ. ಅಶ್ವತ್ಥ ನಾರಾಯಣ್ ಸಿ ಎನ್​ ಮಾತನಾಡಿ, ಆರೋಗ್ಯಕರ ಸಮುದಾಯವು ನಮ್ಮ ಜೀವನದ ಅವಿಭಾಜ್ಯ ಅಂಗ. ಉತ್ತಮ ಸೌಲಭ್ಯಗಳೊಂದಿಗೆ ಆರೋಗ್ಯವಂತ ಸಮುದಾಯವನ್ನು ನಿರ್ಮಿಸುವ ಗುರಿಯೊಂದಿಗೆ, ನಾವು ಬೆಂಗಳೂರಿನಲ್ಲಿರುವ ಹಿರಿಯ ವಯಸ್ಕರಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತಗೆದುಕೊಳ್ಳಲು ನಾವು ಸಜ್ಜಾಗಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಈ ದೇವಸ್ಥಾನದಲ್ಲಿ ಸಕ್ಕರೆ ಕಾಯಿಲೆ 5 ನಿಮಿಷದಲ್ಲಿ ವಾಸಿಯಾಗುತ್ತೆ! ಕಣ್ಣ ಮುಂದೆ ನಡೆಯುತ್ತೆ ಪವಾಡ

CATH ಪ್ರಯೋಗಾಲಯದ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸುವ ಮಣಿಪಾಲ್ ಆಸ್ಪತ್ರೆ ಮಲ್ಲೇಶ್ವರಂನ ನಿರ್ಧಾರವು ಸಮುದಾಯದ ಆರೋಗ್ಯ ಬೇಡಿಕೆಗಳಿಂದ ಬಂದಿದೆ. ತಮ್ಮ ಹೃದ್ರೋಗ ತಜ್ಞರ ಕೌಶಲ್ಯಗಳೊಂದಿಗೆ ಸುಧಾರಿತ ತಂತ್ರಜ್ಞಾನವನ್ನು ಸರಾಗವಾಗಿ ಸಂಯೋಜಿಸುವ ಸಾಮರ್ಥ್ಯದಿಂದಾಗಿ ಮಣಿಪಾಲ್ ಆಸ್ಪತ್ರೆ ಇಂದು ಆರೋಗ್ಯ ಸೇವಾಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹಿರಿಯ ನಾಗರಿಕರು ತಮ್ಮ ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ವಿಶೇಷ ಹೃದಯ ಹಸ್ತಕ್ಷೇಪದ ಅಗತ್ಯವಿರುವ ಕಾರಣ, ಆಸ್ಪತ್ರೆಯ ಈ ಬದ್ಧತೆಯು ಹಿರಿಯ ನಾಗರಿಕರಿಗೆ ವಿಶೇಷವಾಗಿದೆ.

ಪ್ರತಿಯೊಬ್ಬ ವ್ಯಕ್ತಿಗೂ ಸರಿಯಾದ ರೋಗನಿರ್ಣಯ ಮತ್ತು ಸಮಯೋಚಿತ ಸಲಹೆ ನೀಡುವುದು ನಮ್ಮ ಗುರಿಯಾಗಿದೆ. ರೋಗಿಯ ತೃಪ್ತಿಯು ಅವರ ಅವಶ್ಯಕತೆಗಳೊಂದಿಗೆ ನಮ್ಮನ್ನು ಇನ್ನಷ್ಟು ನುರಿತ ಉಪಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ ಎಂದು ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಎಚ್ ಸುದರ್ಶನ್ ಬಲ್ಲಾಳ್ ಹೇಳಿದರು.

ಇದನ್ನೂ ಓದಿ: ಬೇಸಿಗೆಯಲ್ಲಿ ಮೊಟ್ಟೆ ಸೇವನೆ ಬೇಡ, ಅಪ್ಪಿತಪ್ಪಿಯೂ ಈ ಸಮಸ್ಯೆ ಇರುವವರು ತಿನ್ನಲೇಬೇಡಿ

ನಾವೀನ್ಯತೆ, ಪರಿಣತಿ ಮತ್ತು ರೋಗಿ-ಕೇಂದ್ರಿತ ವಿಧಾನವನ್ನು ಸಂಯೋಜಿಸುವ ಮೂಲಕ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ವಿಭಾಗವು ರೋಗಿಗಳ ಆರೈಕೆಯಲ್ಲಿ ಉನ್ನತ ಮಾನದಂಡಗಳನ್ನು ಹೊಂದಿದೆ. ಆಸ್ಪತ್ರೆಯ ಹೃದಯ ಸೇವೆಗಳನ್ನು ಬಲಪಡಿಸುವ ಪ್ರಯತ್ನಗಳು ಮತ್ತು ರೋಗಿಗಳು ಅತ್ಯುನ್ನತ ಗುಣಮಟ್ಟದ ಆರೈಕೆ ನೀಡುವ ಕ್ರಮಗಳು ಮೂಲಕ ಮಣಿಪಾಲ್ ಆಸ್ಪತ್ರೆ ವಿಶ್ವಾಸಾರ್ಹ ಆರೋಗ್ಯ ಪೂರೈಕೆದಾರರಾಗಿ ತಮ್ಮ ಪಾತ್ರವನ್ನು ಖಚಿತಪಡಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:08 am, Wed, 14 May 25