ಬೆಂಗಳೂರು: ಸ್ವಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡುವ ಬಗ್ಗೆ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (MB Patil), ರಾಜ್ಯದಲ್ಲಿ ಹೋರಾಟ ಮಾಡಿ ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಬಿಎಸ್ವೈನ ಮೂಲೆಗುಂಪು ಮಾಡಿದ್ದಾರೆ. ಪೂರ್ಣಾವಧಿ ಅಧಿಕಾರ ಮಾಡಲು ಬಿಎಸ್ವೈಗೆ ಅವಕಾಶ ಕೊಡಬೇಕಿತ್ತು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್ವೈ ಕಾರಣ. ಕೆಳ ಮಟ್ಟದಿಂದ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದ್ದಾರೆ ಎಂದು ಹೇಳಿದರು.
ಬಿಎಸ್ವೈ ರಾಜ್ಯ ಕಂಡ ವಿಶೇಷ ರಾಜಕಾರಣಿ. ಮಾಜಿ ಸಿಎಂ ಯಡಿಯೂರಪ್ಪನವರ ಬಗ್ಗೆ ವಿಶೇಷ ಗೌರವ ಇದೆ. ಬಿಜೆಪಿಯಲ್ಲಿ ಬಿಎಸ್ವೈ ಮಾಸ್ ಲೀಡರ್. ಎಲ್ಲಾ ಸಮುದಾಯಗಳು ಈಗ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ ಎಂದು ಎಂಬಿ ಪಾಟೀಲ್ ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಮತದಾರರಿಗೆ ಉಡುಗೊರೆ ಹಂಚುವ ಕಾರ್ಯವನ್ನು ಪಕ್ಷಗಳು ಈಗಾಗಲೇ ಆರಂಭಿಸಿವೆ
ಕಾಂಗ್ರೆಸ್ನಲ್ಲಿ ವ್ಯಕ್ತಿ ಪೂಜೆ ನಡೆಯಲ್ಲ, ಪಕ್ಷ ಪೂಜೆಯಾಗಬೇಕು ಎಂದು ಮಾತನಾಡಿದ ಪಾಟೀಲ್, ವ್ಯಕ್ತಿ ಆಗಲಿ, ಶಾಲಾ-ಕಾಲೇಜು ಅಥವಾ ಸಂಸ್ಥೆಗಳು ಆಗಿರಲಿ, 50 ವರ್ಷ ಅಥವಾ 75 ವರ್ಷ ಆದಾಗ ಇಂತಹ ಆಚರಣೆ ಮಾಡುತ್ತಾರೆ. ಸಿದ್ದರಾಮಯ್ಯ 5 ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಸಿದ್ದರಾಮಯ್ಯ 75ನೇ ಹುಟ್ಟುಹಬ್ಬ ಆಗಿರುವ ಹಿನ್ನೆಲೆ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದಲ್ಲಿ ಸ್ವಂತ ಬಲದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಹೀಗಾಗಿ ನಾವೇನೇ ಆಸೆಪಟ್ಟರೂ ಹೈಕಮಾಂಡ್ ನಿರ್ಧಾರಕೈಗೊಳ್ಳುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Yasin Malik: ನ್ಯಾಯಯುತ ವಿಚಾರಣೆಗೆ ಒತ್ತಾಯಿಸಿ ತಿಹಾರ್ ಜೈಲಿನಲ್ಲಿ ಯಾಸಿನ್ ಮಲಿಕ್ ಉಪವಾಸ ಸತ್ಯಾಗ್ರಹ
Published On - 12:15 pm, Sat, 23 July 22