Refugees and Migrants Health: ನಿರಾಶ್ರಿತರು ಮತ್ತು ವಲಸಿಗರು ಎದುರಿಸುತ್ತಿರುವ ಸಮಸ್ಯೆಗಳ ಸುತ್ತ
ನಿರಾಶ್ರಿತರು ಹಾಗೂ ವಲಸಿಗರ ಪಾಡಂತೂ ಯಾರಿಗೂ ಬೇಡ, ಯುದ್ಧ ಹಾಗೂ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ನಿರಾಶ್ರಿತರು ಹಾಗೂ ವಲಸಿಗರ ಪಾಡಂತೂ ಯಾರಿಗೂ ಬೇಡ, ಯುದ್ಧ ಹಾಗೂ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಲ್ಲೂ ಸಲ್ಲ ಇಲ್ಲೂ ಸಲ್ಲವೆಂಬಂತೆ ಯಾವ ಊರುಗಳಿಗೆ ತೆರಳಿದರೂ ಜನರು ಅವರನ್ನು ಅಸ್ಪೃಷ್ಯರಂತೆ ಕಾಣುತ್ತಾರೆ, ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ಕುರಿತು ಯುಕೆಯ ಪ್ರಸಿದ್ಧ ವೈದ್ಯರಾದ ವಹೀದ್ ಏರಿಯನ್ ಅವರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. ವಹೀದ್ ಏರಿಯನ್ ಎಂಬುವವರು ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ತುರ್ತು ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಹೀದ್ ಅವರು 1980ರ ದಶಕದಲ್ಲಿ ಸೋವಿಯತ್-ಆಫ್ಘನ್ ಯುದ್ಧದ ಸಂದರ್ಭದಲ್ಲಿ ಅವರು ಕಾಬೂಲ್‌ನಲ್ಲಿ ಜನಿಸಿದರು. ಯುದ್ಧದ ಸಂದರ್ಭದಲ್ಲಿ ನಡೆಯುತ್ತಿದ್ದ ರಾಕೆಟ್ ಹಾಗೂ ಬಾಂಬ್ ದಾಳಿಯಿಂದ ರಕ್ಷಣೆ ಪಡೆಯಲು ನಾಲ್ಕೈದು ವರ್ಷಗಳ ಕಾಲ ನೆಲ ಮಾಳಿಗೆಯಲ್ಲಿ ಜೀವನ ನಡೆಸಿದರು.
ಜೀವನವು ಸುಲಭವಾಗಿರಲಿಲ್ಲ: ವಹೀದ್ ಅವರ ಕುಟುಂಬದ ಆರ್ಥಿಕತೆ ಅಷ್ಟು ಚೆನ್ನಾಗಿಲ್ಲದ ಕಾರಣ, ಆಹಾರ,ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಇತ್ತು, ಅದೇ ಸಂದರ್ಭದಲ್ಲಿ ಅವರ ಸಹೋದರರು ನಾಯಿಕೆಮ್ಮು ರೋಗದಿಂದ ಬಳಲುತ್ತಿದ್ದರು.
ಅಫ್ಘಾನಿಸ್ತಾನದಲ್ಲಿದ್ದರೆ ಅಪಾಯಕಾರಿ ಎಂದು ತಿಳಿದು ಕುಟುಂಬವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದರು. ಗಡಿಗಳನ್ನು ಮುಚ್ಚಿರುವುದರಿಂದ, ಅಲ್ಲಿಗೆ ಹೋಗಲು ಏಕೈಕ ಮಾರ್ಗವೆಂದರೆ ಅಪಾಯಕಾರಿ ಪರ್ವತ ಮಾರ್ಗ, ಅವರು ಕತ್ತೆಗಳು ಮತ್ತು ಕುದುರೆಗಳ ಬೆನ್ನಿನ ಮೇಲೆ ಪ್ರಯಾಣಿಸಿದರು.
ಆ ಸಂದರ್ಭದಲ್ಲಿ ಮಲೇರಿಯಾ ಹಾಗೂ ಕ್ಷಯ ರೋಗಗಳ ಅಪಾಯ ಹೆಚ್ಚಿತ್ತು. ಏರಿಯನ್ ಸೇರಿದಂತೆ ಅವರ ಕುಟುಂಬದ ಅನೇಕ ಸದಸ್ಯರಿಗೆ ಮಲೇರಿಯಾ ಬಂದಿತ್ತು. 1980ರ ಇಸವಿಗೆ ಹೋಲಿಸಿದರೆ ಈ 40 ವರ್ಷಗಳಲ್ಲಿ ಪರಿಸ್ಥಿತಿ ಸ್ವಲ್ಪ ಬದಲಾಗಿದೆ.
ಬಾಂಬ್‌ಗಳಿಂದ ಸುರಕ್ಷಿತವಾಗಿದ್ದರೂ ದೈಹಿಕವಾಗಿ ಸುರಕ್ಷಿತವಾಗಿಲ್ಲ “ನಾವು ಈಗ ಪ್ರಪಂಚದ ವಿವಿಧ ಭಾಗಗಳಲ್ಲಿ ನಿರಾಶ್ರಿತರ ಶಿಬಿರಗಳನ್ನು ನಾವು ನೋಡುತ್ತಿದ್ದೇವೆ, ನಾವು ಬಾಂಬ್‌ಗಳಿಂದ ಸುರಕ್ಷಿತವಾಗಿದ್ದರೂ, ನಾವು ದೈಹಿಕವಾಗಿ ಸುರಕ್ಷಿತವಾಗಿರಲಿಲ್ಲ, ನಾವು ಸಾಮಾಜಿಕವಾಗಿ ಸುರಕ್ಷಿತವಾಗಿರಲಿಲ್ಲ, ಮತ್ತು ನಾವು ಮಾನಸಿಕವಾಗಿ ಸುರಕ್ಷಿತವಾಗಿರಲಿಲ್ಲ” ಎಂದು ಏರಿಯನ್ ಹೇಳಿದರು.
ಅಂತಿಮವಾಗಿ 15ನೇ ವಯಸ್ಸಿನಲ್ಲಿ ಏರಿಯನ್ ಅವರನ್ನು ಯುಕೆಗೆ ಕಳುಹಿಸಲಾಯಿತು. ಆ ಸಂದರ್ಭದಲ್ಲಿ ಅವರು ಅಸ್ವಸ್ಥತೆ ಅಥವಾ PTSD ಯಿಂದ ಬಳಲುತ್ತಿದ್ದರು.
ವಲಸೆ ಹೋದಾಗ ಅಲ್ಲಿ ಪ್ರತಿಯೊಂದು ವಿಚಾರಕ್ಕೂ ತಾರತಮ್ಯವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.