ಬಿಬಿಎಂಪಿ ಮಾಡಿದ ತಪ್ಪಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳಿಗೆ ಹಾನಿ, ಬಿಬಿಎಂಪಿ ಕಾಮಗಾರಿಗಳಲ್ಲೂ ಪರ್ಸೆಂಟೇಜ್ ಪ್ರತಿಧ್ವನಿ

‘ಕೇವಲ ಅಧಿಕಾರದಲ್ಲಿರುವವರು ಮಾತ್ರವಲ್ಲ, ಅಧಿಕಾರದಲ್ಲಿ ಇಲ್ಲದವರೂ ಕಮಿಷನ್​​ಗಾಗಿ ಪೀಡಿಸುತ್ತಿದ್ದಾರೆ’ ಎಂದು ಗುತ್ತಿಗೆದಾರರ ಸಂಘ ಆರೋಪ ಮಾಡಿದೆ.

ಬಿಬಿಎಂಪಿ ಮಾಡಿದ ತಪ್ಪಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳಿಗೆ ಹಾನಿ, ಬಿಬಿಎಂಪಿ ಕಾಮಗಾರಿಗಳಲ್ಲೂ ಪರ್ಸೆಂಟೇಜ್ ಪ್ರತಿಧ್ವನಿ
ಬೆಂಗಳೂರಿನಲ್ಲಿ ಮಳೆಯಿಂದ ಮರ ಉರುಳಿದೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 17, 2022 | 1:40 PM

ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳು ನೀರುಪಾಲಾಗಿವೆ. ಕಾಮಕ್ಯ ಥಿಯೇಟರ್ ಸಮೀಪದ ಎಸ್​.ಕೆ.ಎಂಟರ್​ಪ್ರೈಸಸ್ ಮೆಡಿಸಿನ್ ದಾಸ್ತಾನು ಕೇಂದ್ರಕ್ಕೆ ಮಳೆ ನೀರು ನುಗ್ಗಿ ಅನಾಹುತವೇ ಸಂಭವಿಸಿದೆ. ಸಿರಿಂಜ್, ಗ್ಲೂಕೋಸ್ ಬಾಟಲಿ, ಇಂಜೆಕ್ಷನ್, ಗ್ಲಾಸ್, ಮಾಸ್ಕ್, ಪೇಷೆಂಟ್ ಏಪ್ರಾನ್, ಪಿಪಿಇ ಕಿಟ್, ಸ್ಟಿಚರ್, ಕಾಟನ್, ಸರ್ಜನ್ ಗ್ಲೌಸ್, ಡಯಾಪರ್ಸ್​ ಸೇರಿದಂತೆ ಸಾಕಷ್ಟು ಔಷಧಿಗಳು ಮತ್ತು ವೈದ್ಯಕೀಯ ಉತ್ಪನ್ನಗಳು ಹಾಳಾಗಿವೆ. ರಾಜಕಾಲುವೆ ಬಳಿ ಬಿಬಿಎಂಪಿ ಅರ್ಧಂಬರ್ಧ ಕಾಮಗಾರಿ ಮಾಡಿದ್ದರಿಂದಲೇ ಈ ಸಮಸ್ಯೆ ಎದುರಾಯಿತು. ಹಾಳಾಗಿರುವ ಉತ್ಪನ್ನಗಳ ಒಟ್ಟು ಮೌಲ್ಯ ಸುಮಾರು ₹ 20 ಲಕ್ಷ ಎಂದು ಅಂದಾಜಿಸಲಾಗಿದೆ. ಕಂಪ್ಯೂಟರ್, ಲ್ಯಾಪ್​ಟಾಪ್ ಸಹ ಮಳೆಯಿಂದ ಹಾಳಾಗಿದೆ. ಬಿಲ್ ಮಾಡಲು ಸಾಧ್ಯವಿಲ್ಲದೆ, ಆಸ್ಪತ್ರೆಗಳಿಗೆ ಕಿಟ್ ಸಹ ಒದಗಿಸಲು ಆಗದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಟಿವಿ9 ಬಳಿ ಅಳಲು ತೋಡಿಕೊಂಡ ಮಾಲೀಕ ಚೇತನ್, ನಾವು ಇಲ್ಲಿ ಕಳೆದ 6 ವರ್ಷಗಳಿಂದ ಔಷಧಿ ವಿತರಣೆ ಕೆಲಸ ಮಾಡುತ್ತಿದ್ದೇನೆ. ಕಳೆದ 30 ವರ್ಷಗಳಲ್ಲಿ ಎಂದಿಗೂ ಮಳೆಯಿಂದ ಸಮಸ್ಯೆ ಸೃಷ್ಟಿಯಾಗಿರಲಿಲ್ಲ. ಆದರೆ ಕಳೆದ 2 ವರ್ಷಗಳಿಂದ ರಾಜಕಾಲುವೆಗೆ ತಡೆಗೋಡೆ ಕಟ್ಟುವ ಕಾಮಗಾರಿ ನಡೆಯುತ್ತಿದೆ. ತಡೆಗೋಡೆಗೆ ಬಳಸುವ ಶೀಟ್​ಗಳು ಡ್ರೈನೇಜ್ ರಿಂರ್​ಗೆ ಸಿಲುಕಿದ ಕಾರಣ ನೀರಿನ ಸಂಚಾರಕ್ಕೆ ತಡೆಯಾಯಿತು. ಬ್ಲಾಕ್ ಆದ ನೀರು ನಮ್ಮ ಮಳಿಗೆಗೆ ನುಗ್ಗಿ ಅನಾಹುತ ಸೃಷ್ಟಿಸಿದೆ. ಇದರಿಂದ ನನಗೆ ಸುಮಾರು ₹ 20 ಲಕ್ಷ ನಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಬಿಬಿಎಂಪಿ ನೇರ ಹೊಣೆ ಎಂದು ದೂರಿದರು.

ಬಿಬಿಎಂಪಿಯಲ್ಲೂ ಪರ್ಸೆಂಟೇಜ್ ಭೂತ

ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಮಾಡಿದ್ದ ಗುತ್ತಿಗೆದಾರರೊಬ್ಬರ ಅನುಮಾನಾಸ್ಪದ ಸಾವಿನ ನಂತರ ವ್ಯಾಪಕವಾಗಿ ಗಮನ ಸೆಳೆದಿದ್ದ ಸರ್ಕಾರಿ ಕಾಮಗಾರಿಗಳಲ್ಲಿ ನಡೆಯುವ ಭಷ್ಟಾಚಾರದ ವಿಚಾರ ಇದೀಗ ಬೆಂಗಳೂರಿನಲ್ಲಿಯೂ ಪ್ರತಿಧ್ವನಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿಯೂ (ಬಿಬಿಎಂಪಿ) ಪರ್ಸೆಂಟೇಜ್ ಸಮಸ್ಯೆ ವ್ಯಾಪಕವಾಗಿದೆ ಎಂದು ಗುತ್ತಿಗೆದಾರರ ಸಂಘ ನೇರ ಅರೋಪ ಮಾಡಿದೆ. ‘ಕೇವಲ ಅಧಿಕಾರದಲ್ಲಿರುವವರು ಮಾತ್ರವಲ್ಲ, ಅಧಿಕಾರದಲ್ಲಿ ಇಲ್ಲದವರೂ ಕಮಿಷನ್​​ಗಾಗಿ ಪೀಡಿಸುತ್ತಿದ್ದಾರೆ’ ಎಂದು ಗುತ್ತಿಗೆದಾರರ ಸಂಘ ಆರೋಪ ಮಾಡಿದೆ.

ಅಧಿಕಾರದಲ್ಲಿ ಇರದ ಮಾಜಿ ಕಾರ್ಪೋರೇಟರ್​ಗೂ ಇಂತಿಷ್ಟು ಎಂದು ಪರ್ಸೆಂಟೇಜ್ ನಿಗದಿಯಾಗಿದೆ. ಬೆಂಗಳೂರಿನ ಮೂವರು ಮಾಜಿ ಕಾರ್ಪೊರೇಟರ್​ಗಳು ಇಂದಿಗೂ ಪರ್ಸೆಂಟೇಜ್ ಪಡೆಯುತ್ತಿದ್ದಾರೆ ಎನ್ನುವ ಅಂಶವನ್ನು ಗುತ್ತಿಗೆದಾರರು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್ ಗಂಭೀರ ಆರೋಪ ಮಾಡಿದರು. ಆ ಮೂವರು ಮಾಜಿ ಕಾರ್ಪೋರೇಟರ್​ಗಳು ಯಾರು ಎಂದು ಹೆಸರು ಬಹಿರಂಗಪಡಿಸುವುದಿಲ್ಲ. ಪರ್ಸೆಂಟೇಜ್​ಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ದೂರು ಕೊಟ್ಟಿಲ್ಲ. ಆದರೆ ಶೀಘ್ರದಲ್ಲಿಯೇ ಸರ್ಕಾರಕ್ಕೆ ಬರೆದು ಎಲ್ಲ ಮಾಹಿತಿ ನೀಡಲಾಗುವುದು ಎಂದರು.

ಬಿಬಿಎಂಪಿಯಲ್ಲಿ 40 ಪರ್ಸೆಂಟ್ ಅಲ್ಲ, 50 ಪರ್ಸೆಂಟ್ ಕೊಡಬೇಕಿದೆ. ರಾಜ್ಯದ ಇತರೆಡೆಗಿಂತಲೂ ಹೆಚ್ಚು ಅವ್ಯವಹಾರ ಇಲ್ಲಿ ನಡೆಯುತ್ತಿದೆ. ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿ ಪರ್ಸೆಂಟೇಜ್ ಜಾರಿಯಲ್ಲಿದೆ. ಅಧಿಕಾರಿಗಳು, ಕಾರ್ಪೋರೇಟರ್​ಗಳು, ಎಂಎಲ್​ಗಳಿಗೂ ಪರ್ಸೆಂಟೇಜ್ ಹೋಗತ್ತಿದೆ. ಪರ್ಸೆಂಟೇಜ್ ಪಡೆಯುವವರ ಹೆಸರು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ.

ಇದನ್ನೂ ಓದಿ: ಪರ್ಸೆಂಟೇಜ್ ಭೂತ! ಮಾಮೂಲು ನೀಡುವಂತೆ ಪಿಡಿಒಗಳಿಗೆ EO ಕಿರುಕುಳ? ಪರ್ಸೆಂಟೇಜ್ ಕೇಳುವ ವಿಡಿಯೋ ವೈರಲ್

ಇದನ್ನೂ ಓದಿ: ದಶಕಗಳಿಂದ ವರ್ಕ್​ ಆರ್ಡರ್ ಇಲ್ಲದೆ ಕಾಮಗಾರಿಗಳು ನಡೆಯುತ್ತಿವೆ ಎಂದರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್