ಕೃಷಿ ಇಲಾಖೆಯಲ್ಲಿ ಉದ್ಯೋಗಕ್ಕೆ ಕಾಯ್ತಿದ್ದವರಿಗೆ ಸಚಿವ ಚೆಲುವರಾಯಸ್ವಾಮಿ ಗುಡ್ ನ್ಯೂಸ್

ಕೃಷಿ ಮೇಳದಲ್ಲಿಯೇ ಬರೊಬ್ಬರಿ 150 ಕೋಟಿ ಮೌಲ್ಯದ 41 ಒಪ್ಪಂದಗಳು ಆಗಿದ್ದು, ಬರೊಬ್ಬರಿ 2.34 ಲಕ್ಷ ಫಲಾನುಭವಿಗಳಿಗೆ 484 ಕೋಟಿ ಸಹಾಯಧನ ನೀಡಲಾಗಿದೆ. ಸರಿಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಇಲ್ಲಿಯವರೆಗೆ 8,521 ರೈತರಿಗೆ 8.56 ಕೋಟಿಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ಜೊತೆಗೆ ನವ್ಯೋದ್ಯಮಗಳಿಗೆ ಉತ್ತೇಜನ ನೀಡಲು 10 ಕೋಟಿಗಳ ಅನುದಾನ ಒದಗಿಸಲಾಗಿದ್ದು, ನವೋದ್ಯಮಗಳಿಗೆ ಪ್ರೊತ್ಸಾಹಿಸಲು 20 ಲಕ್ಷದಿಂದ 50 ಲಕ್ಷದವರೆಗೆ ಆರ್ಥಿಕ ನೆರವು ನಿಡಲಾಗುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ಕೃಷಿ ಇಲಾಖೆಯಲ್ಲಿ ಉದ್ಯೋಗಕ್ಕೆ ಕಾಯ್ತಿದ್ದವರಿಗೆ ಸಚಿವ ಚೆಲುವರಾಯಸ್ವಾಮಿ ಗುಡ್ ನ್ಯೂಸ್
ಸಚಿವ ಚೆಲುವರಾಯಸ್ವಾಮಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 02, 2024 | 2:53 PM

ಬೆಂಗಳೂರು, ಮಾ.02: ನಮ್ಮ ಇಲಾಖೆಯಲ್ಲಿ ನೇಮಕಾತಿ ಒಂದು ಸಮಸ್ಯೆ ಇತ್ತು, ಇದೀಗ 750 ಜನರ ನೇಮಕಾತಿಗೆ ಅನುಮೋದನೆ ಕೊಟ್ಟಾಗಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ(Chaluvaraya Swamy) ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡ್ಮೂರು ಸಭೆ ಮಾಡಿದ್ದೇವೂ, ಇವತ್ತು ಕೂಡ ಇಲಾಖೆಯ ಅಧಿಕಾರಿಗಳ ಜೊತೆಯು ಸಭೆ ಮಾಡಿದ್ದೇವೆ. 100 ಕೃಷಿ ಅಧಿಕಾರಿಗಳು ಹಾಗೂ 650 ಸಹಾಯಕ ಕೃಷಿ ಅಧಿಕಾರಿಗಳನ್ನ‌ ನೇಮಕಾತಿ ಮಾಡಿಕೊಳ್ಳಲು ತಿರ್ಮಾನಿಸಿದ್ದೇವೆ. ಈಗಾಗಲೇ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಯಿಂದಲೂ ಅನುಮೋದನೆ ಕೊಡಲಾಗಿದೆ. ಜೊತೆಗೆ 582 ಹುದ್ದೆಗಳಿಗೆ ಮುಂಬಡ್ತಿ ಕೊಟ್ಟಿದ್ದು, ಈ ಮೂಲಕ ಅಧಿಕಾರಿಗಳಿಗೆ ಉತ್ಸಾಹ ತುಂಬಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

200 ಕೋಟಿ ವೆಚ್ಚದಲ್ಲಿ 10 ಸಾವಿರ ಕೃಷಿ ಹೊಂಡ

ಇನ್ನು 223 ತಾಲೂಕುಗಳನ್ನ ಬರಗಾಲ ಎಂದು ಘೋಷಣೆ ಮಾಡಿದಾಗ ರೈತರಿಗೆ ಕೃಷಿ ಇಲಾಖೆ ಸಹಾಯ ಮಾಡಲು ನಿಂತಿದೆ. 200 ಕೋಟಿ ವೆಚ್ಚದಲ್ಲಿ 10 ಸಾವಿರ ಕೃಷಿ ಹೊಂಡ ಮಾಡಿದ್ದೇವೆ. ಕೃಷಿಯಲ್ಲಿ ಯಾಂತ್ರಿಕತೆಯನ್ನು ಪ್ರೋತ್ಸಾಹಿಸಲು 63, 785 ಫಲಾನುಭವಿಗಳಿಗೆ 284.92 ಕೋಟಿ ರೂ. ಸಹಾಯಧನ ಕೊಟ್ಟಿದ್ದೇವೆ. ರೈತರಿಗೆ ಯಂತ್ರೋಪಕರಣ ಪಡೆದುಕೊಳ್ಳಲು ಸರ್ಕಾರ ಮುಂದಾಗಿದ್ದು, 100 ಹೈಟೆಕ್ ಹಾರ್ವೆಸ್ಟರ್ ಹಬ್​​ಗೆ 50 ಕೋಟಿಗಳ ಅನುದಾನ ಒದಗಿಸಲಾಗಿದೆ. ನಾನು ಮತ್ತು ಕೃಷ್ಣ ಬೈರೇಗೌಡರು ದೆಹಲಿಗೆ ಹೋಗಿ ಅಧಿಕಾರಿಗಳು, ಮಂತ್ರಿಗಳನ್ನ ಭೇಟಿ ಮಾಡಿದ್ದೇವೆ. ಇನ್ನು ನಮಗೆ ಕೇಂದ್ರದಿಂದ ಪ್ರತಿಫಲ ಸಿಕ್ಕಿಲ್ಲ, ಆದ್ದರಿಂದ ರೈತರಿಗೆ ಬೆಳೆ ವಿಮೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ.

ಇದನ್ನೂ ಓದಿ:LIC ಡೆವಲಪ್‌ಮೆಂಟ್ ಆಫೀಸರ್‌ ನೇಮಕಾತಿ 2024: ಖಾಲಿ ಹುದ್ದೆ, ಅರ್ಹತೆ, ಆಯ್ಕೆ ಪ್ರಕ್ರಿಯೆ ವಿವರಗಳು ಇಲ್ಲಿವೆ

ಕೃಷಿ ಮೇಳದಲ್ಲಿ 150 ಕೋಟಿ ಮೌಲ್ಯದ 41 ಒಪ್ಪಂದಗಳು ಆಗಿವೆ

2.34 ಲಕ್ಷ ಫಲಾನುಭವಿಗಳಿಗೆ 484 ಕೋಟಿ ಸಹಾಯಧನ ನೀಡಲಾಗಿದೆ. ಕೃಷಿ ಮೇಳದಲ್ಲಿಯೇ ಬರೊಬ್ಬರಿ 150 ಕೋಟಿ ಮೌಲ್ಯದ 41 ಒಪ್ಪಂದಗಳು ಆಗಿವೆ. ಸರಿಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಇಲ್ಲಿಯವರೆಗೆ 8,521 ರೈತರಿಗೆ 8.56 ಕೋಟಿಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ನವ್ಯೋದ್ಯಮಗಳಿಗೆ ಉತ್ತೇಜನ ನೀಡಲು 10 ಕೋಟಿಗಳ ಅನುದಾನ ಒದಗಿದಲಾಗಿದ್ದು, ನವೋದ್ಯಮಗಳಿಗೆ ಪ್ರೊತ್ಸಾಹಿಸಲು 20 ಲಕ್ಷದಿಂದ 50 ಲಕ್ಷದವರೆಗೆ ಆರ್ಥಿಕ ನೆರವು ನಿಡಲಾಗುತ್ತಿದೆ. ರೈತರಿಗೆ ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು 1800-425-3553 ಸಹಾಯವಾಣಿ ಕೇಂದ್ರವನ್ನು ಕೂಡ ಸ್ಥಾಪಿಸಲಾಗಿದೆ. ಮೇ ನಲ್ಲಿ ಒಳ್ಳೆ ಮಳೆ ಆಗುತ್ತದೆ ಎಂದು ಹೇಳಲಾಗಿದೆ. ಅದಕ್ಕೆ ಬಿತ್ತನೆ ಬಿಜ, ಗೊಬ್ಬರ ಪೂರೈಸಲು ಸಿದ್ದತೆ ನಡೆಸಿದ್ದೇವೆ. ಮಂಡ್ಯ ಜಿಲ್ಲೆಗೆ ಒಂದು ಕೃಷಿ ವಿಶ್ವವಿದ್ಯಾಲಯ ಬೇಕು ಎಂದು ಬೇಡಿಕೆ ಇಟ್ಟಿದ್ದೇವೆ ಸಿಎಂ ಅವರು ವರದಿ ತರಿಸಿಕೊಂಡು ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.

ಜಾತಿ ಗಣತಿ ವರದಿಯಲ್ಲಿನ ಲೋಪದೋಷಗಳು ಇದ್ರೆ, ಸಿಎಂ ಸರಿಪಡಿಸ್ತಾರೆ ಎಂಬ ವಿಶ್ವಾಸವಿದೆ

ಇನ್ನು ಜಾತಿ ಗಣತಿ ವಿಚಾರ, ‘ಈ ವರದಿಯನ್ನ ತೆಗದುಕೊಳ್ಳಬೇಡಿ ಎಂದು ನಾವು ಹೇಳಿಲ್ಲ, ಸಿಎಂ ಅವರಿಗೆ ಮನೆ ಮನೆಗೆ ಹೋಗಿ ವರದಿ ಮಾಡಿಲ್ಲ, ಈ ರೀತಿ ಆಗಿರುವಂತ ಲೋಪದೋಷಗಳನ್ನು ಸರಿ ಪಡಿಸುವಂತೆ ಸ್ವಾಮೀಜಿಗಳು ಹಾಗೂ ನಮ್ಮ ಸಮುದಾಯದ ಮುಖಂಡರು ಮನವಿ ಕೊಟ್ಟಿದ್ದರು. ಈ ಕುರಿತಾಗಿ ಮುಖ್ಯಮಂತ್ರಿಗಳು ‘ವರದಿ ಬರಲಿ, ವ್ಯತ್ಯಾಸಗಳು ಇದ್ದರೆ ಸರಿಪಡಿಸೋಣ ಎಂದು ಹೇಳಿದ್ದಾರೆ. ಅದಕ್ಕೆ ವರದಿಯಲ್ಲಿನ ಲೋಪದೋಷಗಳು ಇದ್ರೆ ಸರಿಪಡಿಸುತ್ತಾರೆ ಎಂಬ ವಿಶ್ವಾಸ ನಮಗೆಲ್ಲ ಇದೆ ಎಂದು ಹೇಳಿದರು.

ಇದನ್ನೂ ಓದಿ:ರಾಷ್ಟ್ರೀಯ ನಿರ್ಮಾಣ ನಿಗಮದಲ್ಲಿ NBCC ನೇಮಕಾತಿ ಪ್ರಕಟಣೆ -93 ಹುದ್ದೆಗಳು, ಅರ್ಹತೆ, ಶುಲ್ಕ, ಆಯ್ಕೆ ಪ್ರಕ್ರಿಯೆ ಇಲ್ಲಿದೆ

ಬಳಿಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ‘ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬ್ಯುಸಿನೆಸ್​ಗೂ ಆಗಿರಬಹುದು, ಬಿಜೆಪಿಯವರಿಗೆ ಕೇವಲ ಹಿಂದೂ, ಮುಸ್ಲಿಮರು ಮಾತ್ರ ಕಾಣುತ್ತಿದ್ದಾರೆ. ಈ ಹಿಂದೆ ನಡೆದ ಹಲವು ಘಟನೆಗಳಲ್ಲಿ ಬಿಜೆಪಿಯವರ ಕೈವಾಡ ಇದೆ. ಆದರೆ, ರಾಮೇಶ್ವರಂ ಕೆಫೆ ಸ್ಫೋಟ ಕೇಸ್​​ನಲ್ಲಿ ಬಿಜೆಪಿ ಕೈವಾಡ ಎಂದು ಹೇಳಲ್ಲ. ಈ ಹಿಂದೆ ಇಂತಹದ್ದೇ ಘಟನೆಗಳಾದಾಗ ಬಿಜೆಪಿಯ ಕೈವಾಡ ಇತ್ತು. ಇದು ತನಿಖೆಯಲ್ಲಿ ಸಾಬೀತು ಕೂಡ ಆಗಿದೆ ಎಂದು ಹೊಸ ಬಾಂಬ್​ ಹಾಕಿದ್ದಾರೆ. ಇನ್ನು ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರುತ್ತದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು