ಮುಂದಿನ ತಿಂಗಳು ಪುನೀತ್ ಹೃದಯ ಜ್ಯೋತಿ ಯೋಜನೆ ಜಾರಿ; ಸಚಿವ ದಿನೇಶ್ ಗುಂಡೂರಾವ್
ಹೃದಯಾಘಾತ ಆದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಬೇಕು. ಸರಿಯಾಗಿ ಚಿಕಿತ್ಸೆ ಸಿಕ್ಕಿದ್ರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ರಾಜ್ಯದ 75 ತಾಲೂಕು ಆಸ್ಪತ್ರೆಗಳಲ್ಲಿ SPOK ಹಬ್ ಮಾಡಲಾಗಿದೆ. ಕ್ರಿಟಿಕಲ್ ಆಗಿದ್ದರೆ ಟೆನೆಕ್ಟೆಪ್ಲೇಸ್ (Tenecteplase )ಇಂಜೆಕ್ಷನ್ ಕೊಡಲಾಗುತ್ತದೆ. ಇದು ಹಠಾತ್ ಹೃದಯಾಘಾತ ಆಗುವುದನ್ನು ತಡೆಯುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರು, ಅ.31: ಮುಂದಿನ ತಿಂಗಳು ಹೃದಯ ಜ್ಯೋತಿ ಯೋಜನೆ ಜಾರಿಯಾಗಲಿದೆ ಎಂದು ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಹೇಳಿದರು. ಸಿಎಂ ಸಿದ್ದರಾಮಯ್ಯ ಅವರು ಪುನೀತ್ ಹೃದಯ ಜ್ಯೋತಿ ಯೋಜನೆ ಘೋಷಣೆ ಮಾಡಿದ್ದರು, ಅದರಂತೆ ಮುಂದಿನ ತಿಂಗಳಿನಿಂದ ಈ ಯೋಜನೆ ಜಾರಿಯಾಗಿಲಿದ್ದು, ಎಮರ್ಜೆನ್ಸಿ ಇದ್ದಾಗ ಜನರು ಈ ಸೇವೆ ಬಳಸಬಹುದು. ಈ ಕಾರ್ಯಕ್ರಮವನ್ನು ಮುಂದಿನ ತಿಂಗಳು ಮುಖ್ಯಮಂತ್ರಿ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದರು.
‘ಹೃದಯಾಘಾತ ಆದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಬೇಕು. ಸರಿಯಾಗಿ ಚಿಕಿತ್ಸೆ ಸಿಕ್ಕಿದ್ರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ರಾಜ್ಯದ 75 ತಾಲೂಕು ಆಸ್ಪತ್ರೆಗಳಲ್ಲಿ SPOK ಹಬ್ ಮಾಡಲಾಗಿದೆ. ಕ್ರಿಟಿಕಲ್ ಆಗಿದ್ದರೆ ಟೆನೆಕ್ಟೆಪ್ಲೇಸ್ (Tenecteplase )ಇಂಜೆಕ್ಷನ್ ಕೊಡಲಾಗುತ್ತದೆ. ಇದು ಹಠಾತ್ ಹೃದಯಾಘಾತ ಆಗುವುದನ್ನು ತಡೆಯುತ್ತದೆ. ಈ Tricog ಸಂಸ್ಥೆ ಎಐ ಮೂಲಕ ಕ್ರಿಟಿಕಲ್ ಇದೆಯಾ? ಇಲ್ಲವಾ ಎನ್ನುವುದನ್ನು ನೋಡಲಾಗುತ್ತದೆ. ಬಳಿಕ ಜಿಲ್ಲಾ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿದರು.
ಇದನ್ನೂ ಓದಿ:ಮನೆ ಮನೆಗೆ ಬರಲಿದೆ ಕ್ಲಿನಿಕ್, ಉಚಿತ ಔಷಧಿ; ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಪ್ಲಾನ್
ಸರ್ಕಾರಿ ಸಾರಿಗೆ ಚಾಲಕರಲ್ಲಿ ಹೃದಯಾಘಾತ ಹೆಚ್ಚಳ
ಸರ್ಕಾರಿ ಸಾರಿಗೆ ಚಾಲಕರಲ್ಲಿ ಹೃದಯಾಘಾತ ಹೆಚ್ಚಳ ವಿಚಾರ ‘ ಒತ್ತಡದಲ್ಲಿ ಕೆಲಸ ಮಾಡುವವರಿಗೆ ಹೃದಯಾಘಾತ ಹೆಚ್ಚಿರುತ್ತದೆ. ಈ ಡ್ರೈವರ್ಸ್ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ವ್ಯಾಯಾಮ ಎನು ಇರಲ್ಲ, ಹೀಗಾಗಿ ಹೃದಯಾಘಾತ ಹೆಚ್ಚಿರಬಹುದು ಎಂದರು. ಇದೆ ವೇಳೆ ಕೋವಿಡ್ ಬಂದವರು ಹೆಚ್ಚು ಶ್ರಮದ ಕೆಲಸ ಮಾಡಬಾರದು ಎಂಬ ಕೇಂದ್ರ ಆರೋಗ್ಯ ಸಚಿವರ ಹೇಳಿಕೆ ವಿಚಾರ ‘ಅವರು ಯಾವ ಆಧಾರದ ಮೇಲೆ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ. ಇದಕ್ಕೆ ಯಾವ ವೈಜ್ಞಾನಿಕ ಆಧಾರ ಇಲ್ಲ, ನನಗೂ ಕೋವಿಡ್ ಬಂದಿತ್ತು. ಕೋವಿಡ್ ಬಂದವರು ಶ್ರಮದ ಕೆಲಸ ಮಾಡಬಾರದು ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ