ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ ಚಾಲನೆ ನೀಡಿದ ಸಚಿವ ಆರ್.ಅಶೋಕ್

ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ ಶನಿವಾರ ಕಂದಾಯ ಸಚಿವ ಆರ್.ಅಶೋಕ್ ಡೊಳ್ಳು ಬಾರಿಸುವ ಚಾಲನೆ ನೀಡಿದರು. ಸಂಗೀತ ಕಾರ್ಯಕ್ರಮಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.

ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ ಚಾಲನೆ ನೀಡಿದ ಸಚಿವ ಆರ್.ಅಶೋಕ್
ಪ್ರಾತಿನಿಧಿಕ ಚಿತ್ರImage Credit source: kannadaprabha.com
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 25, 2023 | 10:03 PM

ಬೆಂಗಳೂರು: ವಿಧಾನಸೌಧದ ಎದುರು ನಮ್ಮ ಬೆಂಗಳೂರು ಹಬ್ಬ-2023ಕ್ಕೆ (Namma Bengaluru Festival 2023) ಶನಿವಾರ ಕಂದಾಯ ಸಚಿವ ಆರ್.ಅಶೋಕ್ ಡೊಳ್ಳು ಬಾರಿಸುವ ಚಾಲನೆ ನೀಡಿದರು. ಸಂಗೀತ ಕಾರ್ಯಕ್ರಮಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಕಲರ್​ ಕಲರ್​ ಲೈಟ್​ಗಳಿಂದ ವಿಧಾನಸೌಧ ಕಂಗೊಳಿಸುತ್ತಿದೆ. ಹೆಸರಾಂತ ಗಾಯಕರಾದ ಅನನ್ಯ ಭಟ್, ನವೀನ್ ಸಜ್ಜು ಹಾಗೂ ಜನರ್ಧನ್​ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಚಿತ್ರಸಂತೆ ಮಾದರಿಯಲ್ಲಿ ಬೆಂಗಳೂರು ಹಬ್ಬ-2023 ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪರಿಷತ್ ಸಭಾಪತಿ ಹೊರಟ್ಟಿ, ನಂಜಾವಧೂತ ಸ್ವಾಮೀಜಿ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಮ್ಮ ಬೆಂಗಳೂರು ಹಬ್ಬ ನಡೆಯಲಿದೆ. ಹಂಪಿ ವಿಜಯನಗರ ಸಾಮ್ರಾಜ್ಯದ ಸ್ಟೇಜ್ ನಿರ್ಮಾಣ ಮಾಡಿದ್ದು, ಕಾರ್ಯಕ್ರಮ ವೀಕ್ಷಣೆಗೆ ಎಲ್ಲ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ವೀಕ್ ಎಂಡ್ ಹಿನ್ನಲೆ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದಾರೆ.

ಸಂಸ್ಕೃತಿಯನ್ನ ತಿಳಿಸುವ ಆಸೆಯಿಂದ ಬೆಂಗಳೂರು ಹಬ್ಬ: ಆರ್.ಅಶೋಕ್​

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್​ 2010 ರಿಂದ ಬೆಂಗಳೂರು ಹಬ್ಬ ಮಾಡಬೇಕು ಅಂದುಕೊಂಡಿದ್ದೆ. ಆದರೆ ಈ ಆಸೆ ಈಡೇರಿಸಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಬೇರೆ ಬೇರೆ ಭಾಗಗಳಿಂದ ಸಾಕಷ್ಟು ಜನ ಬಂದಿದ್ದಾರೆ. ಅವರಿಗೆ ಬೆಂಗಳೂರಿನ ಸಂಸ್ಕೃತಿಯನ್ನ ತಿಳಿಸುವ ಆಸೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಸಿಎಂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಯವರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: ಒಳ ಮೀಸಲಾತಿ ಚುನಾವಣಾ ಗಿಮಿಕ್‌ ಅಲ್ಲದೇ ಬೇರೆ ಏನೂ ಇಲ್ಲ: ಡಾ ಜಿ ಪರಮೇಶ್ವರ್‌

ಬೆಂಗಳೂರು ಪ್ರಾರಂಭವಾಗಿದ್ದು ಸಂಕ್ರಾಂತಿ ದಿನ. ಆದ್ದರಿಂದ ಮುಂದಿನ ವರ್ಷದಿಂದ ಸಂಕ್ರಾಂತಿ ಹಬ್ಬದ ಮೊದಲ ಶನಿವಾರ ಭಾನುವಾರ ಬೆಂಗಳೂರು ಹಬ್ಬ ಆಚರಿಸಲಾಗುತ್ತದೆ‌. ಪ್ರತಿ ವರ್ಷ ದಸರಾ ಮಾದರಿಯಲ್ಲಿ ಬೆಂಗಳೂರು ಹಬ್ಬ ಆಚರಣೆ ಮಾಡಲಾಗುವುದು. ಭಾರತ ದೇಶದ ಎಲ್ಲ ಸಂಸ್ಕೃತಿ ಕಲೆಯನ್ನ ಇಲ್ಲಿಗೆ ಬರಮಾಡಿಕೊಂಡು ನಮ್ಮ ಭಾಷೆ ಸಂಸ್ಕೃತಿಯನ್ನ ಕಲಿಸಬೇಕು. ಇಲ್ಲಿಯವರೆಗೆ ಸಾಕಷ್ಟು ರಾಜ್ಯಗಳಿಂದ IAS IPS ಆಫೀಸ್​ಗಳು ಬಂದಿದ್ದಾರೆ. ಅವರು ಯಾರು ಇಲ್ಲಿಯವರೆಗೆ ವಾಪಸ್ಸು ಹೋಗಿಲ್ಲ. ಬೇರೆ ರಾಜ್ಯಕ್ಕೆ ಹೋಗಿರುವ ಅಧಿಕಾರಿಗಳು ಬೆಂಗಳೂರಿಗೆ ವಾಪಸ್ಸು ಆಗಿದ್ದಾರೆ. ಇದು ಬೆಂಗಳೂರಿನ ಚೆಂದ ಅಂದ. ಗಲಾಟೆ ಇಲ್ಲದೆ ಯಾವುದಾದ್ರೂ ಒಂದು ನಗರ ಇದ್ರೆ ಅದು ಬೆಂಗಳೂರು ಎಂದು ಆರ್.ಅಶೋಕ್ ಹೇಳಿದರು.

ಸಾಂಸ್ಕೃತಿಕ ನಗರಿಯಾಗಿ ಆಚರಣೆ ಮಾಡುವಲ್ಲಿ ಇಂದು ಯಶಸ್ವಿಯಾಗಿದೆ: ನಿರ್ಮಾಲನಂದನಾಥ ಸ್ವಾಮಿಜಿ

ನಿರ್ಮಾಲನಂದನಾಥ ಸ್ವಾಮಿಜಿ ಮಾತನಾಡಿ, ಸಾಮ್ರಾಟ್ ಎಂದು ಬಾಲಗಂಗಾಧರ ನಾಥ ಗುರೂಜಿ ಆರ್ ಅಶೋಕ್​ರನ್ನು ಕರೆಯುತಿದ್ದರು. ಬೆಂಗಳೂರು ಟೆಕ್ನಿಕಲ್ ಸೇರಿದಂತೆ ಹಲವು ಹೆಸರುಗಳಲ್ಲಿ ಕರೆಯಲಾಗುತಿತ್ತು. ನಗರವನ್ನು ಸಾಂಸ್ಕೃತಿಕ ನಗರಿಯಾಗಿ ಆಚರಣೆ ಮಾಡುವಲ್ಲಿ ಇಂದು ಯಶಸ್ವಿಯಾಗಿದ್ದಾರೆ. ಐದನೂರು ವರ್ಷದ ಹಿಂದೆ ನಾಡು ಕಟ್ಟಿದರು. ತಾವು ಬೆಳೆಯೊದರ ಜೊತೆಗೆ ಎಲ್ಲ ಧರ್ಮಗಳ ಜನಾಂಗದವರನ್ನು ಬೆಳೆಸಿದರು. ಹೀಗಾಗೆ ನಗರದಲ್ಲಿ 64 ಪೇಟೆಗಳನ್ನು ಕಟ್ಟಿ ಹೊಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮುನಿಯಪ್ಪಗೆ ದೇವನಹಳ್ಳಿ ಟಿಕೇಟ್ ಘೋಷಣೆ: ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಿದ ಬೆಂಬಲಿಗರು

ಒಂದೊಂದು ಪೇಟೆಯೂ ಜನಾಂಗಗಳ ಅವರವರ ಕೌಶಲ್ಯ ಆಧರಿತ ಪೇಟೆಗಳನ್ನು ಕಟ್ಟಿಕೊಟ್ಟಿದ್ದಾರೆ. ಆರು ತಿಂಗಳ ಹಿಂದೆಯೇ ವಿಧಾನಸೌಧ ಮುಂದೆ ಕೆಂಪೇಗೌಡರ ಪ್ರತಿಮೆ ಇಡುವ ಬಗ್ಗೆ ಚರ್ಚೆಯಾಗಿತ್ತು. ಆರ್ ಅಶೋಕ್ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದರು. ಅದರಂತೆ ನಾಳೆ ಬಸವಣ್ಣ ಹಾಗೂ ಕೆಂಪೆಗೌಡರ ಪ್ರತಿಮೆ ಅನಾವರಣವಾಗಲಿದೆ ಎಂದು ಹೇಳಿದರು.

ವಿಶ್ವವೇ ತಿರುಗುನೊಡುವಂತೆ ಬೆಂಗಳೂರು ಹಬ್ಬವಾಗಲಿ: ನಂಜಾವದೂತ ಸ್ವಾಮೀಜಿ 

ನಂಜಾವದೂತ ಸ್ವಾಮೀಜಿ ಮಾತನಾಡಿ, ಬೆಂಗಳೂರು ಹಬ್ಬವನ್ನು ನಮ್ಮ ಕೆಂಪೇಗೌಡರ ಬೆಂಗಳೂರು ಹಬ್ಬ ಎಂದು ಮಾಡಬೇಕೆಂದು ಕೇಳಿಕೊಂಡಿದ್ದೇನೆ‌. ಕೆಲವರೇ ಟ್ರವಲ್ ಶೂಟರ್​ನಲ್ಲಿ ಅಶೋಕ್ ಒಬ್ಬರು. ಬಹಳ ಸಮಸ್ಯೆಯಾದಗ ಇವರನ್ನು ಬಿಡುತ್ತಾರೆ. ಅಂತ ಸಂದರ್ಭದಲ್ಲೂ ಎಲ್ಲರಿಗೂ ನ್ಯಾಯಾ ಕೊಡಿಸುವ ಕೆಲಸ ಅಶೋಕ್ ಮಾಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರು ದಸರಾ ಹಬ್ಬದಂತೆ ವಿಶ್ವವೇ ತಿರುಗುನೊಡುವಂತೆ ಕೆಂಪೇಗೌಡರ ಬೆಂಗಳೂರು ಹಬ್ಬ ಆಗಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:03 pm, Sat, 25 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ