ಅದ್ದೂರಿಯಾಗಿ ನೆರವೇರಿದ ಮಿಸ್‌ ಹಾಗೂ ಮಿಸೆಸ್‌ ಇಂಡಿಯಾ ಕರ್ನಾಟಕ 2024 ಆಡಿಷನ್‌

|

Updated on: Jun 25, 2024 | 7:39 PM

ಮಿಸ್‌ ಹಾಗೂ ಮಿಸೆಸ್‌ ಇಂಡಿಯಾ ಕರ್ನಾಟಕ 2024 ಆಡಿಷನ್‌ ಅನ್ನು ಇಂದು(ಮಂಗಳವಾರ) ಬೆಂಗಳೂರಿನಲ್ಲಿ ನಡೆಯಿತು. ನಗರದ ಟುಲಿಪ್‌ ಇನ್‌ ಹೋಟೆಲ್‌ನಲ್ಲಿ ಆಡಿಷನ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಮಹಿಳೆಯರು ಆಡಿಷನ್‌ನಲ್ಲಿ ಭಾಗವಹಿಸಿದ್ದರು. ಆಯೋಜಕರು ಸ್ಪರ್ಧಿಗಳಿಗೆ ಅದ್ದೂರಿಯಾಗಿ ಸ್ವಾಗತ ಕೋರಿ, ನಿಬಂಧನೆಗಳ ಬಗ್ಗೆ ವಿವರಣೆ ನೀಡಿದರು.

ಅದ್ದೂರಿಯಾಗಿ ನೆರವೇರಿದ ಮಿಸ್‌ ಹಾಗೂ ಮಿಸೆಸ್‌ ಇಂಡಿಯಾ ಕರ್ನಾಟಕ 2024 ಆಡಿಷನ್‌
ಅದ್ದೂರಿಯಾಗಿ ನೆರವೇರಿದ ಮಿಸ್‌ ಹಾಗೂ ಮಿಸೆಸ್‌ ಇಂಡಿಯಾ ಕರ್ನಾಟಕ 2024 ಆಡಿಷನ್‌
Follow us on

ಬೆಂಗಳೂರು, ಜೂ.25: ಪ್ರತಿಭಾನ್ವಿತ ಮಹಿಳೆಯರಿಗೆ ವೇದಿಕೆ ಒದಗಿಸುವ ಆಶಯದಿಂದ ನಡೆಸಲಾಗುವ  ‘ಮಿಸ್‌ ಮತ್ತು ಮಿಸೆಸ್‌ ಇಂಡಿಯಾ ಕರ್ನಾಟಕ ಫ್ಯಾಷನ್‌ ಶೋ’(Ms&Mrs india Karnataka Audition 2024)ದ 8ನೇ ಆವೃತ್ತಿಯ ಆಡಿಷನ್‌ ಕಾರ್ಯಕ್ರಮವು ಇಂದು(ಮಂಗಳವಾರ) ಬೆಂಗಳೂರಿನಲ್ಲಿ  ನಡೆಯಿತು. ನಗರದ ಟುಲಿಪ್‌ ಇನ್‌ ಹೋಟೆಲ್‌ನಲ್ಲಿ ಆಡಿಷನ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಮಹಿಳೆಯರು ಆಡಿಷನ್‌ನಲ್ಲಿ ಭಾಗವಹಿಸಿದ್ದರು. ಆಯೋಜಕರು ಸ್ಪರ್ಧಿಗಳಿಗೆ ಅದ್ದೂರಿಯಾಗಿ ಸ್ವಾಗತ ಕೋರಿ, ನಿಬಂಧನೆಗಳ ಬಗ್ಗೆ ವಿವರಣೆ ನೀಡಿದರು.

ಈ ಬಾರಿ ಆಡಿಷನ್‌ನಲ್ಲಿ 16 ವರ್ಷ ಮೇಲ್ಪಟ್ಟ ಅವಿವಾಹಿತರಿಗಾಗಿ ಮಿಸ್‌ ಇಂಡಿಯಾ ಕರ್ನಾಟಕ ಹಾಗೂ ಮಿಸೆಸ್‌ ಇಂಡಿಯಾ ಕರ್ನಾಟಕಕ್ಕೆ ವಿವಿಧ ವಯೋಮಾನದ ಪ್ರತ್ಯೇಕ ಗುಂಪುಗಳನ್ನ ರೂಪಿಸಲಾಗಿದ್ದು, 22-40, 41-60 ಹಾಗೂ 60ರ ಮೇಲ್ಪಟ್ಟವರು ಪಾಲ್ಗೊಂಡಿದ್ದರು. ವಯೋಮಿತಿಯ ಆಧಾರದ ಮೇಲೆ ವೇದಿಕೆಯ ಮೇಲೆ ರ್ಯಾಂಪ್‌ ವಾಕ್‌ ಮಾಡುವ ಮೂಲಕ ಆಡಿಷನ್‌ ನಡೆಸಲಾಯಿತು. ರ್ಯಾಂಪ್‌ ವಾಕ್‌ನಲ್ಲಿ ಸೌಂದರ್ಯ ಸಾಮರ್ಥ್ಯ ಪ್ರದರ್ಶಿಸುವ ಜೊತೆಗೆ ತೀರ್ಪುಗಾರರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಇದನ್ನೂ ಓದಿ:‘ಕಾನ್​ ಅಂದ್ರೆ ಚಿತ್ರೋತ್ಸವವೇ ಹೊರತು ಫ್ಯಾಷನ್​ ಶೋ ಅಲ್ಲ’: ಚಾಟಿ ಬೀಸಿದ ವಿವೇಕ್​ ಅಗ್ನಿಹೋತ್ರಿ

ಆಡಿಷನ್​ಗೆ ಮುಖ್ಯ ಅಥಿತಿಯಾಗಿ ಬಿಗ್‌ಬಾಸ್‌ ಸ್ಪರ್ಧಿ ಅವಿನಾಶ್‌ ಆಗಮಿಸಿದ್ದರು. ಇದೊಂದು ಕೇವಲ ಸೌಂದರ್ಯ ಸ್ಪರ್ಧೆಯಲ್ಲ, ಮಹಿಳೆಯರು ಸಮಾಜದಲ್ಲಿ ಹೇಗಿರಬೇಕು ಎಂಬುದನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಿಸೆಸ್‌ ಇಂಟರ್‌ ನ್ಯಾಷನಲ್‌ ಮತ್ತು ಇಂಡಿಯಾ 2015 (ಮಿಸೆಸ್‌ ಇಂಡಿಯಾ – ಕರ್ನಾಟಕದ ನಿರ್ದೇಶಕಿ, ಮಿಸೆಸ್‌ ಇಂಡಿಯಾದ ಪ್ರಾದೇಶಿಕ ನಿರ್ದೇಶಕಿ) ಪ್ರತಿಭಾ ಸೌಂಶಿಮಠ ಮಾತನಾಡಿ, ‘ಮಿಸೆಸ್‌ ಇಂಡಿಯಾ-ಕರ್ನಾಟಕ ಕಾರ್ಯಕ್ರಮವು ವೈವಿಧ್ಯತೆಯಲ್ಲಿ ಸೌಂದರ್ಯವನ್ನು ಆಚರಿಸುವ ಏಕೈಕ ಸೌಂದರ್ಯ ಸ್ಪರ್ಧೆಯಾಗಿದೆ. ಕಳೆದ 7 ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಎಲ್ಲಾ ವಯೋಮಾನದ ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಒದಗಿಸಲಾಗಿದೆ ಎಂದರು.

ಆಡಿಷನ್‌ನ ತೀರ್ಪುಗಾರರಾದ ಅಂತರಾಷ್ಟ್ರೀಯ ಡಾಗ್‌ ಬ್ರೀಡರ್‌ ಹಾಗೂ ಕಡಬಮ್‌ ಪ್ರತಿಷ್ಠಾನದ ಸಿಇಒ ಸತೀಶ್‌ ಕಡಬಮ್ ಮಾತನಾಡಿ, ‘ಯಾವುದೇ ತಾರತಮ್ಯ, ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೆ ನಡೆಯುವ ಕಾರ್ಯಕ್ರಮ ಇದಾಗಿದೆ. ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡು ಸೂಕ್ತ ಪ್ರತಿಭೆಯನ್ನು ಗುರುತಿಸುವುದು ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ:ಡೆನಿಮ್ ಫ್ಯಾಷನ್​: ವೆರೈಟಿಯೂ ಇದೆ, ತೊಡೋ ಸ್ಟೈಲ್​ ಕೂಡ ಚೇಂಜ್ ಆಗಿದೆ!

ಇದೇ ಮಾತನಾಡಿದ ಆಡಿಷನ್‌ನ ತೀರ್ಪುಗಾರರಾದ ಮಿಸ್‌ ಕೆನಡಾ ಸೌತ್‌ ಏಶಿಯಾ, ಮಿಸ್‌ ಇಂಡಿಯಾ ಗ್ಲೋಬಲ್‌ ವಿಜೇತರಾದ ಪೂರ್ಣಿಮಾ ರಮೇಶ್‌, ‘ವಿವಾಹಿತ ಮಹಿಳೆಯರನ್ನು ಮುನ್ನೆಲೆಗೆ ತರುವ ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ ಎಂದರು. ಮತ್ತೋರ್ವ ತೀರ್ಪುಗಾರರಾದ ಅನಿತಾ ಹರೀಶ್‌ (ಆಕ್ಸಿಸ್‌ ಬ್ಯಾಂಕ್‌ ಉಪಾಧ್ಯಕ್ಷರು) ಮಾತನಾಡಿ, ಇದೊಂದು ಸಂಪೂರ್ಣವಾಗಿ ಮಹಿಳೆಗೆ ಆದ್ಯತೆ ನೀಡುವ ವೇದಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಿಸೆಸ್‌ ಇಂಡಿಯಾ- ಕರ್ನಾಟಕ ಕಾರ್ಯಕ್ರಮವು ವಿವಾಹಿತ ಮಹಿಳೆಯರಿಗೆ ತಮ್ಮ ಸೌಂದರ್ಯ, ಪ್ರತಿಭೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲು ಅತಿದೊಡ್ಡ ವೇದಿಕೆಯಾಗಿದೆ. ಈ ಕಾರ್ಯಕ್ರಮವು ಕೇವಲ ರೂಪದರ್ಶಿಗಳ ಹುಡುಕಾಟದ ಬದಲಿಗೆ ಆದರ್ಶ ಮಹಿಳೆಯರನ್ನು ಸೃಷ್ಪಿಸಲಿದೆ.  ತೀರ್ಪುಗಾರರು ಅರ್ಹ ಸ್ಪರ್ಧೆಗಳನ್ನ ಮಾತ್ರ ಮಿಸ್‌ ಹಾಗೂ ಮಿಸೆಸ್‌ ಇಂಡಿಯಾ ಕರ್ನಾಟಕ ಅಂತಿಮ ಸ್ಪರ್ಧೆಗೆ ಆಯ್ಕೆ ಮಾಡುತ್ತಾರೆ. ಆಗಸ್ಟ್‌ ನಲ್ಲಿ ನಡೆಯುವ ಗ್ರಾಂಡ್‌ ಫೈನಲ್‌ ಸ್ಪರ್ಧೆಗೆ ಈಗ ಆಯ್ಕೆ ಮಾಡಿದವರು ತಯಾರಿ ನಡೆಸುತ್ತಾರೆ. ಅಲ್ಲಿ ಬೇರೆ, ಬೇರೆ ವಿಭಾಗಗಳಲ್ಲಿ ವಿಜೇತರನ್ನ ಆಯ್ಕೆ ಮಾಡುವ ಮೂಲಕ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕಳುಹಿಸಿ ಕೊಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ