AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಿಂದ ಬೆಂಗಳೂರಿಗೆ ವಾಪಸ್; ಶನಿವಾರ, ಭಾನುವಾರ ಯಾವ ED ಕಚೇರಿ ತೆರೆದಿರುತ್ತೆ ಎಂದ ಜಮೀರ್

ನಿನ್ನೆ ಡಿಕೆ ಶಿವಕುಮಾರ್ ಭೇಟಿ ನಂತರ ದೆಹಲಿಗೆ ಹಾರಿದ್ದ ಜಮೀರ್ ಇಂದು ಮಧ್ಯಾಹ್ನ 4 ಗಂಟೆ ವಿಮಾನದಲ್ಲಿ ವಾಪಸ್ ಆಗಲಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ವಾಪಸ್; ಶನಿವಾರ, ಭಾನುವಾರ ಯಾವ ED ಕಚೇರಿ ತೆರೆದಿರುತ್ತೆ ಎಂದ ಜಮೀರ್
ಶಾಸಕ ಜಮೀರ್ ಅಹ್ಮದ್ ಖಾನ್
Follow us
TV9 Web
| Updated By: ಆಯೇಷಾ ಬಾನು

Updated on: Aug 22, 2021 | 1:38 PM

ಬೆಂಗಳೂರು: ಇಂದು ಸಂಜೆ ನಾನು ಬೆಂಗಳೂರಿಗೆ ವಾಪಸಾಗುತ್ತೇನೆ ಎಂದು ಟಿವಿ9ಗೆ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ನಾನು ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದೆ. ದೆಹಲಿಯಲ್ಲಿ ಯಾವ ವಕೀಲರನ್ನೂ ಭೇಟಿಯಾಗಿಲ್ಲ. ಇಂದು ಸಂಜೆ‌ ಬೆಂಗಳೂರಿಗೆ ವಾಪಸ್ ಆಗುತ್ತಿದ್ದೇನೆ. ಶನಿವಾರ, ಭಾನುವಾರ ಯಾವ ED ಕಚೇರಿ ತೆರೆದಿರುತ್ತೆ ಹೇಳಿ. ಊಹಾಪೋಹಗಳಿಗೆ ಆಸ್ಪದ ಬೇಡ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.

ನಿನ್ನೆ ಡಿಕೆ ಶಿವಕುಮಾರ್ ಭೇಟಿ ನಂತರ ದೆಹಲಿಗೆ ಹಾರಿದ್ದ ಜಮೀರ್ ಇಂದು ಮಧ್ಯಾಹ್ನ 4 ಗಂಟೆ ವಿಮಾನದಲ್ಲಿ ವಾಪಸ್ ಆಗಲಿದ್ದಾರೆ.

ಶಾಸಕ ಜಮೀರ್ಗೆ ಕಾಡ್ತಿದ್ಯಾ ಇ.ಡಿ. ಬಂಧನ ಭೀತಿ? ಎರಡು ದಿನಗಳ‌ ಹಿಂದೆ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದ ಜಮೀರ್, ನಿನ್ನೆ ದಿಢೀರ್ ದೆಹಲಿಗೆ ಆಗಮಿಸಿದ್ದಾರೆ. ಅಕ್ರಮ‌ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿರುವ ಡಿ.ಕೆ‌ ಶಿವಕುಮಾರ್ ಜಮೀರ್ ಅಹಮದ್ ಅವರಿಗೆ ಒಂದಷ್ಟು ಟಿಪ್ಸ್ ನೀಡಿದ್ದಾರೆನ್ನಲಾಗಿದೆ. ದೆಹಲಿಯಲ್ಲಿ ಹಿರಿಯ ವಕೀಲರನ್ನು ಭೇಟಿಯಾಗಿ ಸಲಹೆ ಪಡೆಯುವಂತೆ ಜಮೀರ್ ಅಹ್ಮದ್ಗೆ ಡಿ.ಕೆ‌ ಶಿವಕುಮಾರ್ ಸಲಹೆ ನೀಡಿದ್ದಾರಂತೆ.

ಡಿ.ಕೆ ಶಿವಕುಮಾರ್ ಭೇಟಿ ಮಾಡಿ ಒಂದು ರಾತ್ರಿ ಕಳೆಯೋದ್ರೊಳಗೆ ದೆಹಲಿಗೆ ಆಗಮಿಸಿರುವ ಜಮೀರ್ ಅಹ್ಮದ್ ವಕೀಲರನ್ನು ಭೇಟಿಯಾಗುವ ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ. ಇಂದು ಕೂಡ ಹಿರಿಯ ವಕೀಲರನ್ನು ಭೇಟಿಯಾಗಿ ಇ.ಡಿ. ಕೇಸ್ ವಿಚಾರವಾಗಿ ಮಾತಾಡುವ ಸಾಧ್ಯತೆ ಇದೆ. ಜಮೀರ್‌ ಅಹ್ಮದ್‌ ಕಟ್ಟಿಸಿರುವ ಮನೆಯ ವಿಚಾರಕ್ಕಾಗಿಯೇ ಇ.ಡಿ. ದಾಳಿ ನಡೆಸಿದೆ ಅಂತಾ ಶಾಸಕರು ಹೇಳುತ್ತಿದ್ರೂ ಕೈ ನಾಯಕರೇ ಇದನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ.

ಇ.ಡಿ. ನೋಟಿಸ್ ಕೊಟ್ಟೇ ಇಲ್ಲ ಎಂದ ಜಮೀರ್ ಅಹ್ಮದ್ ಆದರೆ ಇಡಿ ನೋಟಿಸ್ ಕೊಟ್ಟಿದೆ ಅನ್ನೋ ವಿಚಾರವನ್ನು ಜಮೀರ್‌ ಅಹ್ಮದ್ ನಿರಾಕರಿಸಿದ್ದಾರೆ. ನಿನ್ನೆ ದೆಹಲಿಯಲ್ಲಿ ಮಾತನಾಡಿರುವ ಜಮೀರ್, ನಾನು ದೆಹಲಿಗೆ ಹೊಸದಾಗಿ ಬರುತ್ತಿಲ್ಲ. ಬಂದಿರೋದು ವೈಯಕ್ತಿಕ ಕೆಲಸಕ್ಕಷ್ಟೇ. ಇಡಿ ತನಗೆ ಯಾವುದೇ ನೊಟೀಸ್‌ ಕೊಟ್ಟಿಲ್ಲ, ನೊಟೀಸ್ ಕೊಟ್ಟಿದ್ರೆ ಮಾಧ್ಯಮದವರಿಗೆ ತೋರಿಸಿ ಬರ್ತಿದ್ದೆ ಅಂದ್ರು.

ಇದನ್ನೂ ಓದಿ: ಜಮೀರ್ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಜಮೀರ್ ಅಹ್ಮದ್ ನಿವಾಸದಲ್ಲಿ ಸಿದ್ದರಾಮಯ್ಯ