MLA Salary: ಶಾಸಕರ ವೇತನ ಪರಿಷ್ಕರಣೆ; ತಿಂಗಳಿಗೆ 2 ಲಕ್ಷ ದಾಟಿತು ಎಂಎಲ್ಎಗಳ ವೇತನ
ಬೆಂಗಳೂರು: ಕರ್ನಾಟಕ ಶಾಸಕರ ವೇತನ/ಭತ್ಯೆಗಳ (MLA Salary / Allownace) ಮೊತ್ತವನ್ನು ಹೆಚ್ಚಿಸಲಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಯಾಗಿದ್ದು, ಏಪ್ರಿಲ್ನಿಂದ ಶಾಸಕರ ವೇತನದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಶಾಸಕರಿಗೆ ತಿಂಗಳ ವೇತನ/ಭತ್ಯೆಗಳು ₹ 2 ಲಕ್ಷ (2,05,000 ರೂಪಾಯಿ) ದಾಟಿದೆ. ಈ ಪೈಕಿ ಮೂಲವೇತನ ₹ 40 ಸಾವಿರ, ಕ್ಷೇತ್ರ ಭತ್ಯೆ ₹ 60 ಸಾವಿರ, ಚುನಾವಣೆ ಕ್ಷೇತ್ರದ ಪ್ರಯಾಣ ಭತ್ಯೆ ₹ 60 ಸಾವಿರ, ಆಪ್ತ ಸಹಾಯಕರು ಮತ್ತು ಕೊಠಡಿ ಸೇವಕರ ಭತ್ಯೆ ₹ […]
ಬೆಂಗಳೂರು: ಕರ್ನಾಟಕ ಶಾಸಕರ ವೇತನ/ಭತ್ಯೆಗಳ (MLA Salary / Allownace) ಮೊತ್ತವನ್ನು ಹೆಚ್ಚಿಸಲಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಯಾಗಿದ್ದು, ಏಪ್ರಿಲ್ನಿಂದ ಶಾಸಕರ ವೇತನದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಶಾಸಕರಿಗೆ ತಿಂಗಳ ವೇತನ/ಭತ್ಯೆಗಳು ₹ 2 ಲಕ್ಷ (2,05,000 ರೂಪಾಯಿ) ದಾಟಿದೆ. ಈ ಪೈಕಿ ಮೂಲವೇತನ ₹ 40 ಸಾವಿರ, ಕ್ಷೇತ್ರ ಭತ್ಯೆ ₹ 60 ಸಾವಿರ, ಚುನಾವಣೆ ಕ್ಷೇತ್ರದ ಪ್ರಯಾಣ ಭತ್ಯೆ ₹ 60 ಸಾವಿರ, ಆಪ್ತ ಸಹಾಯಕರು ಮತ್ತು ಕೊಠಡಿ ಸೇವಕರ ಭತ್ಯೆ ₹ 20 ಸಾವಿರ, ದೂರವಾಣಿ ಭತ್ಯೆ 20 ಸಾವಿರ ರೂ, ಅಂಚೆ ವೆಚ್ಚ ₹ 5 ಸಾವಿರ ನಿಗದಿಪಡಿಸಲಾಗಿದೆ.
ವಿಧಾನಮಂಡಲದ ಬಜೆಟ್ ಅಧಿವೇಶನಕ್ಕೂ ಮೊದಲೇ ಶಾಸಕರ ವೇತನ, ಪಿಂಚಣಿ, ಭತ್ಯೆ (ತಿದ್ದುಪಡಿ) ಕಾಯ್ದೆಯನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ಗಳಲ್ಲಿ ಅಂಗೀಕರಿಸಲಾಗಿತ್ತು. ಈ ಮೊದಲು ಶಾಸಕರು ಪಡೆಯುತ್ತಿದ್ದ ವೇತನ / ಭತ್ಯೆಗಳಿಗೆ ಹೋಲಿಸಿದರೆ ಪರಿಷ್ಕೃತ ಮೊತ್ತದಿಂದ ಶೇ 50ರಷ್ಟು ಏರಿಕೆ ಕಂಡಂತೆ ಆಗಿದೆ. ಏಪ್ರಿಲ್ 1, 2022ರಿಂದ ಪರಿಷ್ಕೃತ ವೇತನವನ್ನು ಶಾಸಕರು ಪಡೆಯುತ್ತಾರೆ.
ಕೊರೊನಾ ಪಿಡುಗಿನಿಂದ ರಾಜ್ಯದ ಆರ್ಥಿಕತೆ ಸಂಕಷ್ಟದಲ್ಲಿ ಸಿಲುಕಿರುವಾಗ ಶಾಸಕರ ವೇತನ / ಭತ್ಯೆ ಹೆಚ್ಚಿಸಿದ್ದು ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡಿದೆ. ಅದರಲ್ಲಿಯೂ ದೂರವಾಣಿ ವೆಚ್ಚವೆಂದು ₹ 20,000 ನಿಗದಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ತಿಂಗಳಿಗೆ ₹ 500 ಕೊಟ್ಟರೆ ಅನ್ಲಿಮಿಟೆಡ್ ಕಾಲ್ ಮತ್ತು ಇಂಟರ್ನೆಟ್ ಸೌಕರ್ಯ ಸಿಗುವ ಸಂದರ್ಭದಲ್ಲಿ ಶಾಸಕರಿಗೆ ದೂರವಾಣಿ ವೆಚ್ಚವೆಂದು ₹ 20,000 ನಿಗದಿಪಡಿಸಿದ ಔಚಿತ್ಯವೇನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ