ಬೆಂಗಳೂರು: ಮನೆಯೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆ ಆದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಗ್ರಾಮದ ಸೂರ್ಯಸಿಟಿಯ ರಾಮಯ್ಯ ಬಡಾವಣೆಯಲ್ಲಿ ನಡೆದಿದೆ. ತವರು ಮನೆಯಲ್ಲಿ ಕಾವ್ಯ, ಮತ್ತೊಬ್ಬ ವ್ಯಕ್ತಿಯ ಶವ ಪತ್ತೆ ಆಗಿದೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರು: ರಾತ್ರಿ ಅಪರಿಚತನ ಪುಂಡಾಟ; ಮನೆಯವರಿಂದ ದೂರು
ಅಪರಿಚಿತನ ಪುಂಡಾಟಕ್ಕೆ ಕುಟುಂಬ ಸದಸ್ಯರು ಹೈರಾಣಾದ ಘಟನೆಯೊಂದು ಬೆಂಗಳೂರಿನ ಹೆಬ್ಬಾಳ ಸರ್ಕಲ್ನಲ್ಲಿ ತಡರಾತ್ರಿ ನಡೆದಿದೆ. ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಪರಿಚಿತನೊಬ್ಬ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಅಪರಿಚಿತನ ಹುಚ್ಚಾಟಕ್ಕೆ ದೀಪಾ ಶ್ರೀಕುಮಾರ್ ಎಂಬವರು ಕಂಗಾಲಾಗಿದ್ದಾರೆ. ದೀಪಾ ಶ್ರೀಕುಮಾರ್ ಕುಟುಂಬದವರು ಸಂಬಂಧಿಕರ ಮನೆಗೆ ತೆರಳಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಗೆ ತೆರಳಿದ್ದರು. ರಾತ್ರಿ 2ರ ಸುಮಾರಿಗೆ ಪುತ್ರಿ, ಪುತ್ರನ ಜತೆ ಹಿಂದಿರುಗುತ್ತಿದ್ದರು. ಈ ವೇಳೆ, ಹೆಬ್ಬಾಳದ ಬಳಿ ದೀಪಾ ಕಾರಿನ ಟೈರ್ ಪಂಕ್ಚರ್ ಆಗಿತ್ತು. ಟೈರ್ ಬದಲಿಸುವಾಗ ಪಕ್ಕದಲ್ಲಿ ಅಪರಿಚಿತ ಒಬ್ಬ ಬಂದು ನಿಂತಿದ್ದ. DL 10, CG 5396 ಸಂಖ್ಯೆ ಕಾರಿನಲ್ಲಿ ಬಂದಿದ್ದ ಅಪರಿಚಿತ ದೀಪಾ ಶ್ರೀಕುಮಾರ್ ಪುತ್ರಿಗೆ ಅಸಭ್ಯವಾಗಿ ಸನ್ನೆ ಮಾಡಿದ್ದ ಎಂದು ಹೇಳಲಾಗಿದೆ.
ಆದರೆ, ಅದನ್ನು ಕೇರ್ ಮಾಡದೆ ಬೈದು ಕಾರಿನಲ್ಲಿ ದೀಪಾ ಕುಟುಂಬ ತೆರಳಿದ್ದರು. ಅದನ್ನೂ ಮೀರಿ ಗೊರಗುಂಟೆಪಾಳ್ಯದವರೆಗೂ ಹಿಂಬಾಲಿಸಿ ಬಂದು ಆತ ಹುಚ್ಚಾಟ ತೋರಿದ್ದ. ಈ ವೇಳೆ, ದೀಪಾ ಶ್ರೀಕುಮಾರ್ ಕುಟುಂಬದವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಗೊರಗುಂಟೆಪಾಳ್ಯ ತಲುಪುವಷ್ಟರಲ್ಲಿ ಹೊಯ್ಸಳ ಸಿಬ್ಬಂದಿ ಬಂದಿದ್ದರು. ಹೊಯ್ಸಳ ಪೊಲೀಸ್ ಸಿಬ್ಬಂದಿ ಕಂಡು ಪುಂಡ ಪರಾರಿಯಾಗಿದ್ದ. ಹೆದರಿದ ದೀಪಾ ಶ್ರೀಕುಮಾರ್, ಮಕ್ಕಳು ಠಾಣೆಯಲ್ಲಿ ಆಶ್ರಯ ಪಡೆದಿದ್ದರು. ಬೆಳಗಾಗುವರೆಗೆ ದೀಪಾ, ಮಕ್ಕಳು RMC ಯಾರ್ಡ್ ಠಾಣೆಯಲ್ಲಿದ್ದರು. ಇದೀಗ ಘಟನೆ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಚಾಮರಾಜನಗರ: ಶಾರ್ಟ್ಸರ್ಕ್ಯೂಟ್ನಿಂದ 5 ಎಕರೆ ಕಬ್ಬು, 15 ತೆಂಗಿನ ಮರ ಭಸ್ಮ
ಶಾರ್ಟ್ಸರ್ಕ್ಯೂಟ್ನಿಂದ 5 ಎಕರೆ ಕಬ್ಬು, 15 ತೆಂಗಿನ ಮರ ಭಸ್ಮವಾದ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಬೂದಿತಿಟ್ಟು ಗ್ರಾಮದ ಬಳಿ ನಡೆದಿದೆ. ಇಲ್ಲಿ ಕಬ್ಬು ಬೆಳೆ ಸಂಪೂರ್ಣ ಬೆಂಕಿಗಾಹುತಿ ಆಗಿದೆ. ರೈತರಾದ ಮರಿಸ್ವಾಮಿ, ಬಸವಣ್ಣ, ಪುಟ್ಟಸ್ವಾಮಿಗೆ ಸೇರಿದ ಕಬ್ಬು ಬೆಳೆ ನಾಶವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ನಗರದ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್ಗಿರಿ; ನಾಲ್ವರು ಆರೋಪಿಗಳ ಬಂಧನ
ಇದನ್ನೂ ಓದಿ: ನೆಲಮಂಗಲ: ಹಣಕಾಸಿನ ವಿಚಾರಕ್ಕೆ ಬೆಟ್ಟದ ಮೇಲಿನಿಂದ ತಳ್ಳಿ ಕೊಲೆ ಮಾಡಿದ ಆರೋಪ; ಸ್ನೇಹಿತನನ್ನು ವಶಕ್ಕೆ ಪಡೆದ ಪೊಲೀಸರು