ಸವಾರರೇ ಎಚ್ಚರ! ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ‘ಪಂಕ್ಚರ್ ಮಾಫಿಯಾ’; ಹೆಬ್ಬಾಳ ರಸ್ತೆಯಲ್ಲಿ ಮೊಳೆಗಳ ರಾಶಿ!

ಬೆಂಗಳೂರಿನ ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯ ನಡುವಿನ ರಸ್ತೆಗಳಲ್ಲಿ ವಾಹನ ಸವಾರರು 'ಪಂಕ್ಚರ್ ಮಾಫಿಯಾ'ದ ಸಂಚಿಗೆ ಬಲಿಯಾಗುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಹರಡಿ, ಸಮೀಪದ ಪಂಕ್ಚರ್ ಅಂಗಡಿಗಳು ದುಬಾರಿ ಹಣ ವಸೂಲಿ ಮಾಡುತ್ತಿವೆ. ಇದು ಕೇವಲ ಆರ್ಥಿಕ ಸುಲಿಗೆಯಲ್ಲದೆ, ವೇಗದ ವಾಹನಗಳಿಗೆ ಪ್ರಾಣಾಪಾಯವನ್ನೂ ತಂದೊಡ್ಡುತ್ತಿದೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿ, ಈ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಸವಾರರೇ ಎಚ್ಚರ! ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ಪಂಕ್ಚರ್ ಮಾಫಿಯಾ; ಹೆಬ್ಬಾಳ ರಸ್ತೆಯಲ್ಲಿ ಮೊಳೆಗಳ ರಾಶಿ!
ಪಂಕ್ಚರ್ ಮಾಫಿಯಾ'

Updated on: Apr 28, 2026 | 5:54 PM

ಬೆಂಗಳೂರು, ಏ.28: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಈಗ ಹೊಸದೊಂದು ಆತಂಕ ಎದುರಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಹೆಬ್ಬಾಳ (Hebbal) ಮತ್ತು ಗೊರಗುಂಟೆಪಾಳ್ಯ (Goraguntepalya) ನಡುವಿನ ಸಂಚಾರ ಈಗ ಪಂಕ್ಚರ್ ದಂಧೆಕೋರರ ಸಂಚಿನಿಂದಾಗಿ ಪ್ರಾಣಾಪಾಯಕಾರಿಯಾಗುತ್ತಿದೆ. ಈ ಹಿಂದೆ ಪ್ಲೈಓವರ್​​​ಗಳಲ್ಲಿ ಇಂತಹ ಸಂಚುಗಳನ್ನು ಮಾಡಿ. ಹಣ ವಸೂಲಿ ಮಾಡುತ್ತಿದ್ದರು. ಇದೀಗ ನಗರ ಪ್ರದೇಶದಲ್ಲಿ ಪ್ರಮುಖ ರಸ್ತೆಗಳಲ್ಲೂ ಈ ದಂಧೆ ಬಂದಿದೆ. ಈ ಬಗ್ಗೆ ವಿಡಿಯೋವೊಂದನ್ನು @KarnatakaPortfolio ಎಂಬ ಎಕ್ಸ್​​ ಖಾತೆ ಹಂಚಿಕೊಂಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ಕೆಲವು ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಸರಣಿ ಪಂಕ್ಚರ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಶಯಗೊಂಡು ಪರಿಶೀಲಿಸಿದಾಗ ರಸ್ತೆಯ ಮೇಲೆ ಉದ್ದೇಶಪೂರ್ವಕವಾಗಿ ನೂರಾರು ಮೊಳೆಗಳನ್ನು ಹರಡಿರುವುದು ಪತ್ತೆಯಾಗಿದೆ. ಇದು ಕೇವಲ ಕಾಕತಾಳೀಯವಲ್ಲ, ಬದಲಾಗಿ ವಾಹನ ಸವಾರರನ್ನು ಸುಲಿಗೆ ಮಾಡಲು ನಡೆಸುತ್ತಿರುವ ವ್ಯವಸ್ಥಿತ ಸಂಚು ಎಂಬುದು ಸ್ಪಷ್ಟವಾಗಿದೆ.

ಇಲ್ಲಿದೆ ನೋಡಿ ವಿಡಿಯೋ:


ಈ ಕೃತ್ಯದ ಹಿಂದೆ ಬಲವಾದ ಅನುಮಾನಗಳು ಸೃಷ್ಟಿಯಾಗಿದೆ. ಮೊಳೆಗಳು ಬಿದ್ದಿರುವ ಜಾಗದ ಕೆಲವೇ ಮೀಟರ್‌ಗಳ ಅಂತರದಲ್ಲಿ ಪಂಕ್ಚರ್ ರಿಪೇರಿ ಅಂಗಡಿಗಳು ಇರುವುದು ಈ ಸಂಶಯಕ್ಕೆ ಪುಷ್ಟಿ ನೀಡಿದೆ. ವಾಹನ ಸವಾರರು ಅಸಹಾಯಕರಾದಾಗ ಅವರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಉದ್ದೇಶದಿಂದ ಈ ರೀತಿ ಮೊಳೆಗಳನ್ನು ರಸ್ತೆಗೆ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹೋದರರ ಫೈಟ್​​: ಕಲ್ಲಿಂದ ಜಜ್ಜಿ ತಮ್ಮನನ್ನೇ ಕೊಂದ ಅಣ್ಣ!

ವೇಗವಾಗಿ ಚಲಿಸುವ ವಾಹನಗಳ ಟೈರ್ ಏಕಾಏಕಿ ಪಂಕ್ಚರ್ ಆದರೆ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಲಾಭಕ್ಕಾಗಿ ಜನರ ಪ್ರಾಣದ ಜೊತೆ ಆಟವಾಡುತ್ತಿರುವ ಈ ‘ಪಂಕ್ಚರ್ ಮಾಫಿಯಾ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಬೆಂಗಳೂರಿನಂತಹ ಐಟಿ ಹಬ್‌ನಲ್ಲಿ ಇಂತಹ ಕೀಳುಮಟ್ಟದ ದಂಧೆಗಳು ನಡೆಯುತ್ತಿರುವುದು ನಗರದ ಘನತೆಗೆ ಧಕ್ಕೆ ತರುತ್ತಿದೆ. ಪೊಲೀಸರು ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಜೈಲಿ ಹಾಕಬೇಕು ಎಂದು ಎಕ್ಸ್​​ನಲ್ಲಿ ಅಕ್ರೋಶ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us