ಬೆಂಗಳೂರು ಎಂಎಸ್ ಬಿಲ್ಡಿಂಗ್ ಹಿಂಭಾಗದ ಸಂಪ್ನಲ್ಲಿ ಬೆತ್ತಲೆ ಮೃತ ದೇಹ ಪತ್ತೆ: ಹಲವು ಆಯಾಮದಲ್ಲಿ ತನಿಖೆ

ಎಂಎಸ್ ಬಿಲ್ಡಿಂಗ್ ನ ಹಿಂಭಾಗದ ಆವರಣದ ಅಗ್ನಿಶಾಮಕ ಇಲಾಖೆ ಬಳಸುವ ಸಂಪ್ ಒಂದರಲ್ಲಿ ಸುಮಾರು 35 ವರ್ಷದ ವ್ಯಕ್ತಿಯ ಬೆತ್ತಲೆ ಮೃತ‌ದೇಹ‌ ಪತ್ತೆಯಾಗಿದೆ. ಇಂದು ಅಗ್ನಿಶಾಮಕ ಸಿಬ್ಬಂದಿ ಸಂಪ್ ನಲ್ಲಿ ನೀರಿನ ಪ್ರಮಾಣ ಪರೀಕ್ಷಿಸಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು ಎಂಎಸ್ ಬಿಲ್ಡಿಂಗ್ ಹಿಂಭಾಗದ ಸಂಪ್ನಲ್ಲಿ ಬೆತ್ತಲೆ ಮೃತ ದೇಹ ಪತ್ತೆ: ಹಲವು ಆಯಾಮದಲ್ಲಿ ತನಿಖೆ
ಬೆಂಗಳೂರು ಎಂಎಸ್ ಬಿಲ್ಡಿಂಗ್ ಹಿಂಭಾಗದ ಸಂಪ್ನಲ್ಲಿ ಬೆತ್ತಲೆ ಮೃತ ದೇಹ ಪತ್ತೆ: ಹಲವು ಆಯಾಮದಲ್ಲಿ ತನಿಖೆ
Follow us
TV9 Web
| Updated By: ಆಯೇಷಾ ಬಾನು

Updated on: Aug 18, 2022 | 7:30 PM

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ(Vidhana Soudha) ಪಕ್ಕದಲ್ಲೇ ಇರುವ ಎಂಎಸ್ ಬಿಲ್ಡಿಂಗ್(MS Building) ಆವರಣದ ಸಂಪ್ನಲ್ಲಿ ಕೊಳೆತ ಶವವೊಂದು(Dead Body Found) ಪತ್ತೆಯಾಗಿದೆ. ವಿಧಾನಸೌಧ, ವಿಕಾಸ ಸೌಧ ಹಾಗೂ ಎಂಎಸ್ ಬಿಲ್ಡಿಂಗ್ ನ್ನ ಸಚಿವಾಲಯದ ಅವರಣ ಎನ್ನಲಾಗುತ್ತೆ. ವಿವಿಧ ಸಚಿವಾಲಯಗಳಿಗೆ ಸೇರಿದ ವಿವಿಧ ಕಚೇರಿಗಳು ಈ ಮೂರು ಬಿಲ್ಡಿಂಗ್ ನಲ್ಲಿ ಇವೆ. ಹೀಗಾಗಿಯೇ ಇದನ್ನ ಸಚಿವಾಲಯದ ಅವರಣ ಎನ್ನಲಾಗುತ್ತೆ. ಆದರೆ ಇಂತಹ ಜಾಗದಲ್ಲೇ ಶವವೊಂದು ಪತ್ತೆಯಾಗಿದೆ.

ಎಂಎಸ್ ಬಿಲ್ಡಿಂಗ್ ನ ಹಿಂಭಾಗದ ಆವರಣದ ಅಗ್ನಿಶಾಮಕ ಇಲಾಖೆ ಬಳಸುವ ಸಂಪ್ ಒಂದರಲ್ಲಿ ಸುಮಾರು 35 ವರ್ಷದ ವ್ಯಕ್ತಿಯ ಬೆತ್ತಲೆ ಮೃತ‌ದೇಹ‌ ಪತ್ತೆಯಾಗಿದೆ. ಇಂದು ಅಗ್ನಿಶಾಮಕ ಸಿಬ್ಬಂದಿ ಸಂಪ್ ನಲ್ಲಿ ನೀರಿನ ಪ್ರಮಾಣ ಪರೀಕ್ಷಿಸಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಆದರೆ ಸಂಪ್ ನಲ್ಲಿ ಸಿಕ್ಕಿರುವ ಸತ್ತಿರುವ ವ್ಯಕ್ತಿ ಯಾರು ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಚಿವಾಲಯದ ಅವರಣದಲ್ಲಿ ಈ ರೀತಿಯ ಘಟನೆ ಆಗಿರುವುದು ಹತ್ತು ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ.

ಸದ್ಯ ಘಟ‌ನೆ ಸಂಬಂಧಿಸಿದಂತೆ ವಿಧಾನ ಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ