ವಂದೇ ಭಾರತ್​​ ರೈಲಿಗೆ ಸಿಲುಕಿದ ಪ್ರೇಮಿಗಳು, ಸಿನಿಮಾ ಸ್ಟೈಲ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಜೋಡಿಹಕ್ಕಿ?

ವಂದೇ ಭಾರತ್‌ ರೈಲ್ವೆ ಹಳಿ ಮೇಲೆ ಪ್ರೇಮಿಗಳ ದೇಹ ಛಿದ್ರ ಛಿದ್ರವಾಗಿ ಬಿದ್ದಿದ್ದ ಘಟನೆ ಚಿಕ್ಕಬಾಣವಾರದಲ್ಲಿ ನಡೆದಿದೆ. ಸದ್ಯ ಈ ಘಟನೆ ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಮೃತರು ಕೇರಳ ಮೂಲದವರಾಗಿದ್ದು, ಖಾಸಗಿ ಕಾಲೇಜ್​​ನಲ್ಲಿ ಬಿಎಸ್‌ಸಿ ನರ್ಸಿಂಗ್‌ ಓದುತ್ತಿದ್ದರು.

ವಂದೇ ಭಾರತ್​​ ರೈಲಿಗೆ ಸಿಲುಕಿದ ಪ್ರೇಮಿಗಳು, ಸಿನಿಮಾ ಸ್ಟೈಲ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಜೋಡಿಹಕ್ಕಿ?
ಮೃತರು

Updated on: Nov 24, 2025 | 6:54 PM

ನೆಲಮಂಗಲ, ನವೆಂಬರ್​ 24: ಅವರಿಬ್ಬರು ಉನ್ನತ ಶಿಕ್ಷಣಕಾಗಿ ದೂರದ ಬೇರೆ ರಾಜ್ಯದಿಂದ ಬಂದಿದ್ದರು. ಜೋಡಿ ಹಕ್ಕಿತರ ಓಡಾಡಿಕೊಂಡಿದ್ದ ಪ್ರೇಮಿಗಳು (Lovers) ಮದುವೆಯಾಗುವ ಪ್ಲಾನ್ ಕೂಡ ಮಾಡಿದ್ದರು. ಭಾನುವಾರ ಬೆಳಿಗ್ಗೆ ಎಂದಿನಂತೆ ಚರ್ಚ್​ಗೆ ಹೋಗಿ ಪ್ರಾರ್ಥನೆ ಮುಗಿಸಿ ಪಿಜಿಗೆ ವಾಪಸ್​ ತೆರಳುತ್ತಿದ್ದರು. ಆದರೆ ಅದೇನಾಯಿತು ಏನೋ ರೈಲ್ವೆ ಹಳಿ ಮೇಲೆ ಇಬ್ಬರ ದೇಹ ಛಿದ್ರ ಛಿದ್ರವಾಗಿ (death) ಬಿದ್ದಿತ್ತು.

ವಂದೇ ಭಾರತ್ ರೈಲಿಗೆ ಸಿಲುಕಿ ಆತ್ಮಹತ್ಯೆ

19 ವರ್ಷದ ಸ್ಟೆರ್ಲಿನ್ ಎಲಿಜ ಶಾಜಿ ಮತ್ತು 20 ವರ್ಷದ ಜಸ್ಟಿನ್​​ ಮೃತ ಪ್ರೇಮಿಗಳು. ಇಬ್ಬರು ಸಹ ಕೇರಳ ಮೂಲದವರು. ಚಿಕ್ಕಬಾಣವರ ಬಳಿ ಇರುವ ಖಾಸಗಿ ಕಾಲೇಜ್​​ ಒಂದರಲ್ಲಿ ಬಿಎಸ್​​ಸಿ ನರ್ಸಿಂಗ್ ಓದುತ್ತಿದ್ದರು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಆದರೆ ಯಾರ ಕೆಟ್ಟ ದೃಷ್ಟಿ ಇವರ ಮೇಲೆ ಬಿತ್ತೋ ಗೊತ್ತಿಲ್ಲ, ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ವಂದೇ ಭಾರತ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಯುವತಿಯನ್ನ ಸ್ನೇಹಿತೆ ರೂಮಿಗೆ ಕರೆದೊಯ್ದು ಕೊಲೆಗೈದ ಯುವಕ, ಆಗಿದ್ದೇನು?

ಈ ಘಟನೆ ಮೊದಲಿಗೆ ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂದು ಸಾಕಷ್ಟು ಅನುಮಾನವನ್ನು ಸೃಷ್ಟಿಸಿತ್ತು. ವಂದೇ ಭಾರತ್ ಎಕ್ಸಪ್ರೆಸ್​ನ ಸಿಸಿಟಿವಿ ಗಮನಿಸಿದ ಅಧಿಕಾರಿಗಳು, ಈ ವೇಳೆ ಇಬ್ಬರು ಹಳಿ ಮೇಲೆ ನಿಂತಿರುವುದು ಸ್ಪಷ್ಟವಾಗಿದೆ. ಅಲ್ಲಿಗೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳವುದಕ್ಕಾಗಿಯೇ ಹಳಿ ಮೇಲೆ ನಿಂತಿರುವುದು ಎಂಬ ಮಾಹಿತಿ ರೈಲ್ವೆ ಪೊಲಿಸರಿಗೆ ಸಿಕ್ಕಿದೆ. ಆದರೆ ಅದು ನಿಜನಾ, ಸುಳ್ಳಾ ಎಂಬುವುದು ಅಧಿಕೃತ ಮಾಹಿತಿಯಿಂದ ತಿಳಿಯಲಿದೆ.

ಇನ್ನು ಘಟನೆ ನಡೆಯುತ್ತಿದ್ದಂತೆ ಅಲ್ಲಿದ್ದ ಕೆಲ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮಾಡಿದ್ದಾರೆ. ನಿನ್ನೆ ಭಾನುವಾರ ಆಗಿದ್ದರಿಂದ ಇಬ್ಬರು ಚರ್ಚ್​​ಗೆ ಹೋಗಿದ್ದರು. ಪ್ರೇಯರ್ ಮುಗಿಸಿ‌ ನಂತರ ವಾಪಸ್ ಆಗುವ ವೇಳೆ ಘಟನೆ ನಡೆದಿದೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: ದಂಪತಿ ಮಧ್ಯೆ ಗಲಾಟೆ: ಕಾಲುವೆಗೆ ಹಾರಿದ್ದ ಪತ್ನಿಯನ್ನ ರಕ್ಷಿಸಲು ಹೋಗಿ ಕೊಚ್ಚಿಹೋದ ಪತಿ ಸಾವು

ಸದ್ಯ ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ರೈಲ್ವೆ ಪೊಲೀಸರು, ಮೃತಪಟ್ಟವರವ ಮೊಬೈಲ್ ಪರಿಶಿಲಿಸಲು ಮುಂದಾಗಿದ್ದಾರೆ. ಆದರೆ ರೈಲಿಗೆ ಸಿಕ್ಕಿ ಮೊಬೈಲ್ ಕೂಡ ಛಿದ್ರವಾಗಿದೆ. ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಿ ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ತಿಳಿಯಬೇಕಿದೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:53 pm, Mon, 24 November 25

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us