ಬೆಂಗಳೂರಿನಲ್ಲಿ ಇನ್ಮುಂದೆ ಪ್ರತಿಭಟನೆಗೆ ಹೊಸ ರೂಲ್ಸ್; ಹೈಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು

| Updated By: preethi shettigar

Updated on: Oct 29, 2021 | 11:48 AM

ಸರ್ಕಾರದಿಂದ ಅನುಮೋದನೆ ಪಡೆಯಲು ನಗರ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದ್ದು, ಯಾವುದೇ ಪ್ರತಿಭಟನೆಗೆ ಕೇವಲ 20 ಜನರಿಗೆ ಮಾತ್ರ ಅವಕಾಶ. 20ಕ್ಕೂ ಹೆಚ್ಚು ಜನರಿದ್ದರೆ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಸೂಚನೆ.

ಬೆಂಗಳೂರಿನಲ್ಲಿ ಇನ್ಮುಂದೆ ಪ್ರತಿಭಟನೆಗೆ ಹೊಸ ರೂಲ್ಸ್; ಹೈಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಪ್ರತಿಭಟನೆ ವಿಚಾರವಾಗಿ ಸುಖಾಸುಮ್ಮನೆ ರಸ್ತೆಗಿಳಿಯುವ ಮುನ್ನ ಎಚ್ಚರ ವಹಿಸಿ. ಏಕೆಂದರೆ ಬೆಂಗಳೂರಿನಲ್ಲಿ ಇನ್ಮುಂದೆ ಪ್ರತಿಭಟನೆಗೆ ಹೊಸ ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಪ್ರತಿಭಟನೆ, ಜಾಥಾಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ಹಿನ್ನೆಲೆ ಹೈಕೋರ್ಟ್ ಸೂಚನೆ ನೀಡಿದ್ದು, ಈ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ಪೊಲೀಸರು ಕರ್ನಾಟಕ ಪೊಲೀಸ್ ಌಕ್ಟ್ ಅಡಿ ನಿಬಂಧನೆ ವಿಧಿಸಲು ಸಿದ್ಧತೆ ನಡೆಸಿದೆ.

ಸರ್ಕಾರದಿಂದ ಅನುಮೋದನೆ ಪಡೆಯಲು ನಗರ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದ್ದು, ಯಾವುದೇ ಪ್ರತಿಭಟನೆಗೆ ಕೇವಲ 20 ಜನರಿಗೆ ಮಾತ್ರ ಅವಕಾಶ. 20ಕ್ಕೂ ಹೆಚ್ಚು ಜನರಿದ್ದರೆ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಸೂಚನೆ. ಫ್ರೀಡಂಪಾರ್ಕ್‌ನಲ್ಲೂ 500ಕ್ಕೂ ಹೆಚ್ಚು ಜನ ಇರುವಂತಿಲ್ಲ. 500ಕ್ಕೂ ಹೆಚ್ಚು ಜನರಿದ್ದರೆ ಮಾದಾವರದ ಬಳಿಯ ಬಿಐಇಸಿಯಲ್ಲಿ ಧರಣಿಗೆ ಅವಕಾಶ.

ಪೊಲೀಸ್ ಌಕ್ಟ್ ಅಡಿ ನಿಬಂಧನೆ

ಹೊಸ ನಿಯಮದಲ್ಲಿ ಏನಿದೆ?

1. ಪ್ರತಿಭಟನೆ ವೇಳೆ ಲಾಠಿ, ಬಾರುಕೋಲು ಬಳಸುವಂತಿಲ್ಲ.

2. ಪ್ರತಿಭಟನೆಗೆ ಆಯೋಜಕರು ಒಪ್ಪಿಗೆಯನ್ನು ಪಡೆದಿರಬೇಕು

3. ಪೊಲೀಸರು ಸೂಚಿಸಿದ ಸ್ಥಳದಲ್ಲೇ ಪಾರ್ಕಿಂಗ್ ಮಾಡಬೇಕು

4. ಷರತ್ತು ಉಲ್ಲಂಘಿಸಿದರೆ ಆಯೋಜಕರ ವಿರುದ್ಧ ಶಿಸ್ತುಕ್ರಮ

5. ಧರಣಿ ಸ್ಥಳದಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ

6. ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಧ್ವನಿವರ್ಧಕ ಬಳಕೆಗೆ ಅವಕಾಶ

7. ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಜಾಥಾಗೆ ಸಂಪೂರ್ಣ ನಿಷೇಧ

ಕೋರ್ಟ್ ಸೂಚನೆಯಂತೆ ಸರ್ಕಾರದ ಅನುಮೋದನೆ ಪಡೆಯಲು ನಿಬಂಧನೆಗಳ ಪಟ್ಟಿ ತಯಾರಿಸಲಾಗಿದೆ. ಸರ್ಕಾರ ಈ ನಿಬಂಧನೆಗಳ ಪಟ್ಟಿಗೆ ಅನುಮೋದನೆ ಕೊಟ್ಟರೆ ಶೀಘ್ರದಲ್ಲೇ ಪ್ರತಿಭಟನೆಗೆ ಸಂಬಂಧಿಸಿದಂತೆ ಹೊಸ ನಿಯಮ ಕಾರ್ಯರೂಪಕ್ಕೆ ಬರಲಿದೆ.

ಇದನ್ನೂ ಓದಿ:

ರೈತರು ಪ್ರತಿಭಟನೆ ನಡೆಸುತ್ತಿದ್ದ ಜಾಗದಲ್ಲಿ ಭೀಕರ ಅಪಘಾತ; ಟ್ರಕ್​ ಹರಿದು ಮೂವರು ರೈತ ಮಹಿಳೆಯರ ದುರ್ಮರಣ

ರಾಯಚೂರಿನ ಮಾನ್ವಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೂವರು ಶಂಕಿತ ಡೆಂಘೀ ರೋಗಕ್ಕೆ ಬಲಿಯಾದ ಆರೋಪ, ಕುಟುಂಬಸ್ಥರ ಪ್ರತಿಭಟನೆ

 

Published On - 11:28 am, Fri, 29 October 21