AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಸ್ನೇಹಿಯತ್ತ ಬೆಂಗಳೂರು ಪೊಲೀಸರ ಮತ್ತೊಂದು ಹೆಜ್ಜೆ: ವಿಡಿಯೋ ಜೊತೆ ಆಡಿಯೋ ರೆಕಾರ್ಡಿಂಗ್ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

ಜನಸ್ನೇಹಿಯತ್ತ ಬೆಂಗಳೂರು ಪೊಲೀಸರು ಮತ್ತೊಂದು ಹೆಜ್ಜೆಯಿಟ್ಟಿದ್ದು, ಈವರೆಗೂ ಸಿಸಿಟಿವಿಗಳಲ್ಲಿ ಕೇವಲ ದೃಶ್ಯಗಳು ಮಾತ್ರ ಸೆರೆಯಾಗುತ್ತಿದ್ದವು. ಇನ್ಮುಂದೆ ಠಾಣೆಯ ಸಿಸಿಟಿವಿಗಳಲ್ಲಿ ವಿಡಿಯೋ ಜೊತೆ ಆಡಿಯೋ ಸಹ ರೆಕಾರ್ಡ್ ಆಗುವ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ ನಡೆಸಲಾಗುತ್ತಿದೆ.

ಜನಸ್ನೇಹಿಯತ್ತ ಬೆಂಗಳೂರು ಪೊಲೀಸರ ಮತ್ತೊಂದು ಹೆಜ್ಜೆ: ವಿಡಿಯೋ ಜೊತೆ ಆಡಿಯೋ ರೆಕಾರ್ಡಿಂಗ್ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ
ಪ್ರಾತಿನಿಧಿಕ ಚಿತ್ರ
Jagadisha B
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 13, 2023 | 3:32 PM

Share

ಬೆಂಗಳೂರು: ಈವರೆಗೂ ಸಿಸಿಟಿವಿಗಳಲ್ಲಿ ಕೇವಲ ದೃಶ್ಯಗಳು ಮಾತ್ರ ಸೆರೆಯಾಗುತ್ತಿದ್ದವು. ಇನ್ಮುಂದೆ ವಿಡಿಯೋ ಜೊತೆ ಆಡಿಯೋ ಸಹ ರೆಕಾರ್ಡ್ ಆಗುವ ಕ್ರಮಕೈಗೊಳ್ಳಲಾಗುತ್ತಿದೆ. ಠಾಣೆಯ ಸಿಸಿಟಿವಿಗಳಲ್ಲಿ ಆಡಿಯೋ ರೆಕಾರ್ಡಿಂಗ್ ತಂತ್ರಜ್ಞಾನ (technology) ಅಳವಡಿಕೆ ಚಿಂತನೆ ಮಾಡಲಾಗುತ್ತಿದೆ. ಆ ಮೂಲಕ ಬೆಂಗಳೂರು ಪೊಲೀಸರ ಜನಸ್ನೇಹಿಯತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ.

ಈಗಾಗಲೇ ಅಳವಡಿಸಿರುವ ಸಿಸಿಟಿವಿಗಳಿಗೆ ಆಡಿಯೋ ಬರುವ ಹಾಗೆ ಕ್ರಮಕ್ಕೆ ಚಿಂತನೆ ನಡೆದಿದ್ದು, ಪೊಲೀಸರ ಕಾರ್ಯವೈಖರಿಯಲ್ಲಿ ಸುಧಾರಣೆ ತರಲು ಪೊಲೀಸ್ ಕಮಿಷನರ್ ದಯಾನಂದ ಮುಂದಾಗಿದ್ದಾರೆ. ನಗರದ ಎಲ್ಲಾ ಕಾನೂನು ಸುವ್ಯವಸ್ಥೆ ಮತ್ತು ಸಂಚಾರಿ ಠಾಣೆಗಳಲ್ಲಿ ಈ ನೂತನ ಕ್ರಮ ಸಾಧ್ಯತೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಷತೆ ಆರೋಪ ಸಮರ್ಥಿಸಲು ತಜ್ಞ ವೈದ್ಯರ ಅಭಿಪ್ರಾಯ ಅಗತ್ಯ; ಹೈಕೋರ್ಟ್

ಠಾಣೆಗೆ ಬರುವ ದೂರುದಾರರ ದೂರು ಸ್ವೀಕಾರಕ್ಕೆ ಪೊಲೀಸರಿಂದ ವಿಳಂಬ, ಕೆಲ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಆರೋಪ ಸಹ ಕೇಳಿ ಬರುತ್ತಿದೆ. ಹಾಗಾಗಿ ತ್ವರಿತ ಗತಿಯಲ್ಲಿ ನ್ಯಾಯಕಲ್ಪಿಸುವ ಹಾಗೂ ದಕ್ಷತೆ ತೊರದವರ ಮೇಲೆ ನಿಗಾ ವಹಿಸಲು ಸಿಸಿಟಿವಿಯಲ್ಲಿ ಸುಧಾರಣೆಯ ಚಿಂತನೆ ಮಾಡಲಾಗುತ್ತಿದೆ.

ದೂರು ನೀಡಲು ಬಂದವರ ಜೊತೆ ಸಂಯಮದ ವರ್ತನೆ, ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರ ಮೂಗು ತೂರಿಸುವ ಕೆಲಸಕ್ಕೆ ಬ್ರೇಕ್​ ಬೀಳಲಿದೆ. ಜೊತೆಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಮೇಲೆ ಕಣ್ಣಿಡಲು ನಿರ್ಧರಿಸಲಾಗುತ್ತಿದೆ.

ಇದನ್ನೂ ಓದಿ: ಸರ್ಕಾರದ ಫ್ರೀ ಸ್ಕೀಮ್​ಗೆ ಅಪ್ಲಿಕೇಶನ್ ಹಾಕುವಾಗ ಎಚ್ಚರ; ಪ್ಲೇ ಸ್ಟೋರ್‌ನಲ್ಲಿ ತಲೆ ಎತ್ತಿವೆ ನಕಲಿ ಆ್ಯಪ್ಸ್

ಈ ಮೂಲಕ ಕೇಳಿ ಬರುವ ಆರೋಪದ ಬಗ್ಗೆ ಆಡಿಯೋ ವಿಡಿಯೋ ಸಹಿತ ಸಿಸಿಟಿವಿ ಪರಿಶೀಲನೆ ಸಾಧ್ಯತೆ ಇದ್ದು, ತಪ್ಪಿತಸ್ತರ ಪತ್ತೆ ಹಚ್ಚಲು ನೂತನ ಕ್ರಮಕ್ಕೆ ಆಯುಕ್ತ ದಯಾನಂದ್​ ಚಿಂತನೆ ನಡೆಸಿದ್ದಾರೆ.

ಪ್ರತಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಸಿಸಿ ಕ್ಯಾಮರಾಗಳು

ಠಾಣೆಗಳಲ್ಲಿ ನಾಲ್ಕು ಸಿಸಿಟಿವಿ ಕ್ಯಾಮಾರಗಳಿರುತ್ತವೆ. ಠಾಣೆಯ ಸ್ವಾಗತ ವಿಭಾಗ, ಠಾಣೆಯ ಮುಂದೆ, ವಿರುದ್ಧ ದಿಕ್ಕು ಹಾಗೂ ಠಾಣೆಯ ಒಳಭಾಗದಲ್ಲಿ. ಇವೆಲ್ಲದರಲ್ಲೂ ಸಹ ಆಡಿಯೋ ರೆಕಾರ್ಡ್ ಮಾಡುವ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತಿದೆ. ಜೊತೆಗೆ ಒಂದು ವರ್ಷ ರೆಕಾರ್ಡ್​ಗಳಿರುವ ಬಗ್ಗೆ ಕ್ರಮ ಕೈಗೊಳ್ಳುವ ನಿರ್ಧಾರದ ಬಗ್ಗೆ ಚಿಂತನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ