ಬೆಂಗಳೂರಿನಲ್ಲಿ ನಿಫಾ ಆತಂಕ: 41 ಜನರಿಗೆ ಹೋಮ್ ಕ್ವಾರಂಟೈನ್, ಓರ್ವರಲ್ಲಿ ನಿಫಾ ಗುಣಲಕ್ಷಣ ಪತ್ತೆ

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಹೋಂ‌ ಐಸೊಲೇಷನ್ ಮಾಡಲಾಗಿದೆ. 41 ಪ್ರಾಥಮಿಕ ಸಂಪರ್ಕಿತರ ಪತ್ತೆಯಾಗಿದ್ದು 41 ಜನರಿಗೂ ಕಡ್ಡಾಯ ಹೋಂ‌ ಐಸೊಲೇಷನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ನಿಫಾ ಆತಂಕ: 41 ಜನರಿಗೆ ಹೋಮ್ ಕ್ವಾರಂಟೈನ್, ಓರ್ವರಲ್ಲಿ ನಿಫಾ ಗುಣಲಕ್ಷಣ ಪತ್ತೆ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on: Sep 21, 2024 | 12:39 PM

ಬೆಂಗಳೂರು, ಸೆ.21: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಜನರೇ ಎಚ್ಚರ ಎಚ್ಚರ. ನೀವು ಕೊಂಚ ಯಾಮಾರಿದ್ರೂ ಮತ್ತೆ ಹೋಮ್ ಕ್ವಾರಂಟೈನ್ (Home Quarantine) ಆತಂಕ ಶುರುವಾಗಲಿದೆ. ಕೋವಿಡ್ ಟೈಮ್​ನಲ್ಲಿ ಕ್ವಾರಂಟೈನ್ ಜನರ ಜೀವ ಹಿಂಡಿತ್ತು. ಇದೀಗ ರಾಜ್ಯದಲ್ಲಿ ನಿಫಾ (Nipah Virus) ಜೊತೆಗೆ ಮಂಕಿಪಾಕ್ಸ್ ಆತಂಕ ಹೆಚ್ಚಾಗಿದ್ದು ಮತ್ತೆ ಹೋಮ್ ಕ್ವಾರಂಟೈನ್​ ಶುರುವಾಗಲಿದೆ. ತಮ್ಮನ್ನು ತಾವೇ ದಿಗ್ಬಂಧನಕ್ಕೆ ಒಳಗಾಗಬೇಕಾಗುವ ಸಮಯಬರಬಹುದು.

ಬೆಂಗಳೂರಿನಲ್ಲಿ ನಿಫಾ ಹಾಗೂ ಮಂಕಿಪಾಕ್ಸ್ ಆತಂಕ ಮತ್ತೆ ಶುರುವಾಗಿದೆ. ಕೊರೊನಾ ಬಳಿಕ ಮತ್ತೆ ನಿಫಾದಿಂದ ರಾಜಧಾನಿಯಲ್ಲಿ ಹೋಮ್ ಕ್ವಾರಂಟೈನ್ ಶುರುವಾಗಿದೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಹೋಂ‌ ಐಸೊಲೇಷನ್ ಮಾಡಲಾಗಿದೆ. 41 ಪ್ರಾಥಮಿಕ ಸಂಪರ್ಕಿತರ ಪತ್ತೆಯಾಗಿದ್ದು 41 ಜನರಿಗೂ ಕಡ್ಡಾಯ ಹೋಂ‌ ಐಸೊಲೇಷನ್ ಮಾಡಲಾಗಿದೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾವಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ನಿಫಾ ವೈರಸ್ ಭೀತಿ: ಅಂತ್ಯಸಂಸ್ಕಾರಕ್ಕೆ ಕೇರಳಕ್ಕೆ ತೆರಳಿದ್ದ ಸ್ನೇಹಿತರಿಂದ ಸೋಂಕು ಹರಡುವ ಆತಂಕ

41 ಸಂಪರ್ಕಿತರ ಪೈಕಿ ಒಬ್ಬರಿಗೆ ನಿಫಾ ಗುಣಲಕ್ಷಣ ಕಂಡು ಬಂದಿದ್ದು ಗುಣಲಕ್ಷಣಗಳಿರುವ ವ್ಯಕ್ತಿಯ ರಕ್ತ ಮತ್ತು ಸೆರಂ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸದ್ಯ ಕೋವಿಡ್​ನಲ್ಲಿ ಭಯ ಹುಟ್ಟಿಸಿದ್ದ ಕ್ವಾರಂಟೈನ್ ಈಗ ಮತ್ತೆ ನಿಫಾ ಹೆಸರಲ್ಲಿ ಶುರುವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಬಿ ಅಲರ್ಟ್ ಅಂತಿದ್ದಾರೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ.

ಸದ್ಯ ರಾಜ್ಯದಲ್ಲಿ ಯಾವ ನಿಫಾ ಕೇಸ್ ಕೂಡ ದಾಖಲಾಗಿಲ್ಲ. ಕೇರಳಕ್ಕೆ ಹೋಗಿದ್ದ ಸ್ನೇಹಿತರು ಹಾಗೂ ಸಿಬ್ಬಂದಿಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮುಂದಿನ ಎರಡು ದಿನಗಳ ಬಳಿಕ ಲಕ್ಷಣ ಕಂಡು ಬರದಿದ್ದರೆ ಆತಂಕ ಕಡಿಮೆ ಆಗಲಿದೆ. ಕ್ವಾರಂಟೈನ್ ನಿಂದ ಸ್ನೇಹಿತರು ಹಾಗೂ ಕಾಲೇಜು ಸಿಬ್ಬಂದಿ ಪರದಾಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ