ಇಂದು ಜಗತ್ತು ಭಾರತದ ಮಾತು ಕೇಳುತ್ತಿದೆ, ಕೆಂಪೇಗೌಡರ ಹಾದಿಯಲ್ಲಿ ಮೋದಿ ನಡೆಯುತ್ತಿದ್ದಾರೆ: ನಿರ್ಮಲಾನಂದನಾಥ ಸ್ವಾಮೀಜಿ
ಭಾರತ ಉಳಿದರೆ ಎಲ್ಲರೂ ಉಳಿತಾರೆ, ಭಾರತ ಅಳಿದರೆ ಯಾರೂ ಉಳಿಯುವುದಿಲ್ಲ ಎಂದು ವಿವೇಕಾನಂದರು ಹೇಳಿದ್ದರು. ನಾಡಪ್ರಭು ಕೆಂಪೇಗೌಡರು ಜನರ ಅನುಕೂಲಕ್ಕಾಗಿ ಶ್ರಮಿಸಿದ್ದರು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಭಾರತ ಉಳಿದರೆ ಎಲ್ಲರೂ ಉಳಿತಾರೆ, ಭಾರತ ಅಳಿದರೆ ಯಾರೂ ಉಳಿಯುವುದಿಲ್ಲ ಎಂದು ವಿವೇಕಾನಂದರು ಹೇಳಿದ್ದರು. ನಾಡಪ್ರಭು ಕೆಂಪೇಗೌಡರು ಜನರ ಅನುಕೂಲಕ್ಕಾಗಿ ಶ್ರಮಿಸಿದ್ದರು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 500 ವರ್ಷಗಳ ಹಿಂದೆ ನಾಡು ಕಟ್ಟುವಾಗ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿದ್ದರು. ಕೆಂಪೇಗೌಡರು ಆ ಕಾಲದಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಿಸಿದ್ದರು. ಒಂದು ದೇಶದ ಅತ್ಯುತ್ತಮ ಸಂಪನ್ಮೂಲವೆಂದರೆ ಮಾನವ ಸಂಪನ್ಮೂಲವೇ ಆಗಿದೆ. ಅದನ್ನು ನರೇಂದ್ರ ಮೋದಿ ಅವರು ಮನಗಂಡಿದ್ದಾರೆ.
ನರೇಂದ್ರ ಮೋದಿ ಅವರು ಸಹ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಗಮನ ಹರಿಸಿದ್ದಾರೆ. ಜನರಲ್ಲಿ ಕೌಶಲ ಅಭಿವೃದ್ಧಿಗಾಗಿ ಹಲವು ಕ್ರಮಗಳನ್ನು ಮೋದಿ ತೆಗೆದುಕೊಂಡಿದ್ದಾರೆ.
ನಮ್ಮ ನಾಡಪ್ರಭು ಕೆಂಪೇಗೌಡರು ಧರ್ಮಪ್ರಭುಗಳು. ಸಂಸ್ಕೃತಿ ರೂಢಿಸಿಕೊಂಡಿದ್ದರು. ಮೋದಿ ಅವರು ಸಹ ದೇಶದ ಅತ್ಯುತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ. ಹಿಂದೆ ಜಗತ್ತಿನ ಬೇರೆ ದೇಶಗಳು ತಮ್ಮನ್ನು ಕೇಳಿ ಅಧಿಕಾರ ಮಾಡಿ ಎನ್ನುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜಗತ್ತು ನಮ್ಮನ್ನು ಕೇಳುತ್ತಿದ್ದೆ. ಜ್ಞಾನಿ ದೇಶವನ್ನು ಆಳಬೇಕು ಎಂದು ಪ್ಲೇಟೊ ಹೇಳಿದ್ದರು. ಕೆಂಪೇಗೌಡರ ಮಾದರಿಯಲ್ಲಿ ಮೋದಿ ಸಹ ಕರ್ಮಜ್ಞಾನವು ಇರಬೇಕು ಎಂದು ತೋರಿಸಿಕೊಟ್ಟರು. ಕಾಯಕ ಜೊತೆಗೆ ಜ್ಞಾನವೂ ಇರಬೇಕು ಎಂಬುದನ್ನು ಮೋದಿ ತೋರಿಸಿಕೊಟ್ಟರು.
ಸಮಾವೇಶದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಆಶೀರ್ವಚನೆ ನೀಡಿದರು. ಪ್ರಗತಿಯ ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ.
ಇದು ಬಹುನಿರೀಕ್ಷಿತ ಕಾರ್ಯಕ್ರಮ. ಜನಪ್ರಿಯ ಪ್ರಧಾನಿ, ವಿಶ್ವನಾಯಕ ನರೇಂದ್ರ ಮೋದಿ ಅವರು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದರು. ಜೂನ್ 27, 2020ರಲ್ಲಿ ಕೊರೊನಾ ತುತ್ತತುದಿಯಲ್ಲಿತ್ತು.
ನಾಡಪ್ರಭು ಕೆಂಪೇಗೌಡರ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಬಿ.ಎಸ್.ಯಡಿಯೂರಪ್ಪ ಅವರು 108 ಅಡಿ ಎತ್ತರದ ಪ್ರತಿಮೆ ಸ್ಥಾಪನೆಗೆ ಭೂಮಿಪೂಜೆ ಮಾಡಿದರು. ಕೊರೊನಾ ಕಾರಣದಿಂದ ಜಗತ್ತು ಸ್ತಬ್ಧವಾದರೂ ‘ಪ್ರಗತಿಯ ಪ್ರತಿಮೆ’ಯ ಕೆಲಸ ನಿಲ್ಲಲಿಲ್ಲ ಎಂದರು.
Published On - 1:03 pm, Fri, 11 November 22