ಜೂನ್ 30, ಜುಲೈ 1ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತ

ಜೂನ್ 30 ಮತ್ತು ಜುಲೈ 1ರಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸೋರಿಕೆ ತಡೆ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಹೀಗಾಗಿ ಎರಡೂ ದಿನ ನಗರದ ಬಹುತೇಕ ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.

ಜೂನ್ 30, ಜುಲೈ 1ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತ
ಬೆಂಗಳೂರು ಜಲಮಂಡಳಿ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 28, 2021 | 2:47 PM

ಬೆಂಗಳೂರು: ತೊರೆಕೊಂಡನಹಳ್ಳಿಯಿಂದ ನಗರಕ್ಕೆ ನೀರು ಸರಬರಾಜಾಗುವ ಪೈಪ್​ಲೈನ್​ನಲ್ಲಿ ಸೋರಿಕೆ ತಡೆ ಕಾಮಗಾರಿಯನ್ನು ಜೂನ್ 30 ಮತ್ತು ಜುಲೈ 1ರಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕೈಗೆತ್ತಿಕೊಳ್ಳಲಿದೆ. ಹೀಗಾಗಿ ಎರಡೂ ದಿನ ನಗರದ ಬಹುತೇಕ ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.

ನಗರದ ಶೆಟ್ಟಿಹಳ್ಳಿ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ.ದಾಸರಹಳ್ಳಿ, ಎಚ್​ಎಂಟಿ ವಾರ್ಡ್​, ಪೀಣ್ಯ 2-3-4 ಹಂತ, ರಾಜಗೋಪಾಲ ನಗರ, ಗಣಪತಿ ನಗರ, ಎಂಇಐ ಕಾಲೊನಿ, ಲಕ್ಷ್ಮೀದೇವಿ ನಗರ, ಬಿಎಚ್​ಸಿಎಸ್​ ಲೇಔಟ್, ಹ್ಯಾಪಿ ವ್ಯಾಲಿ, ಬಿಡಿಎ ಲೇಔಟ್, ಉತ್ತರಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಕೋರಮಂಗಲ 1-4-4ಸಿ-ಜೆ ಬ್ಲಾಕ್, ಮಿಲಿಟರಿ ಕ್ಯಾಂಪಸ್ ಎಎಸ್​ಸಿ ಸೆಂಟರ್, ಸಿದ್ಧಾರ್ಥ ಕಾಲೊನಿ, ವೆಂಕಟಾಪುರ.

ಟೀಚರ್ಸ್ ಕಾಲೊನಿ, ಜಕ್ಕಸಂದ್ರ ಮತ್ತು ಜಕ್ಕಸಂದ್ರ ಎಕ್ಸ್​ಟೆನ್​ಶನ್​, ಎಸ್​ಟಿ ಬೆಡ್ ಏರಿಯಾ, ಜಯನಗರ 4ನೇ ಟಿ ಬ್ಲಾಕ್, ಅರಸು ಕಾಲೊನಿ, ತಿಲಕ್ ನಗರ, ಎನ್​ಇಐ ಲೇಔಟ್, ಈಸ್ಟ್​ ಎಂಡ್ 4 ಮತ್ತು ಬಿ ಮುಖ್ಯರಸ್ತೆಗಳು, ಕೃಷ್ಣಪ್ಪ ಗಾರ್ಡನ್ ಮತ್ತು ಬಿಎಚ್​ಇಎಲ್ ಲೇಔಟ್, ಬಿಟಿಎಂ 2ನೇ ಹಂತ, ಮೈಕೊ ಲೇಔಟ್, ಎನ್​ಎಸ್ ಪಾಳ್ಯ, ಗುರಪ್ಪನಪಾಳ್ಯ, ಸುದ್ದಗುಂಟೆಪಾಳ್ಯ, ಬಿಸ್ಮಿಲ್ಲಾ ನಗರ, ಜೆಪಿ ನಗರ 4 ರಿಂದ 8ನೇ ಹಂತ, ಪುಟ್ಟೇನಹಳ್ಳಿ.

ಜರಗನಹಳ್ಳಿ, ಆರ್​ಬಿಐ ಲೇಔಟ್, ಪಾಂಡುರಂಗ ನಗರ, ಅರಕೆರೆ, ಮೈಕೊ ಲೇಔಟ್, ದೊರೆಸಾನಿ ಪಾಳ್ಯ, ಕೊತ್ತನೂರು ದಿಣ್ಣೆ, ವೆಂಕಟಾದ್ರಿ ಲೇಔಟ್, ಚುಂಚಘಟ್ಟ, ಕೋಣನಕುಂಟೆ, ಎಸ್​ಬಿಬೈ ಲೇಔಟ್, ಸುಪ್ರೀಂ ರೆಸಿಡೆನ್ಸಿ ಲೇಔಟ್, ಲೇಕ್ ಸಿಟಿ, ನಂದಮ್ಮ ಲೇಔಟ್, ರೋಟರಿ ನಗರ, ಕೋಡಿಚಿಕ್ಕನಹಳ್ಳಿ, ಎಚ್​ಎಸ್​ಆರ್ ಲೇಔಟ್​ನ 1ರಿಂದ 7ನೇ ಸೆಕ್ಟರ್​ಗಳು, ಅಗರ ಗ್ರಾಮ.

ಮಂಗಮ್ಮನಪಾಳ್ಯ, ಮದೀನ ನಗರ, ಐಟಿಐ ಲೇಔಟ್, ಹೊಸಪಾಳ್ಯ, ಬಂಡೇಪಾಳ್ಯ, ಚಂದ್ರ ಲೇಔಟ್, ಬಿಇಎಂಎಲ್ ಲೇಔಟ್ 1ರಿಂದ 5ನೇ ಹಂತ, ನಾಗರಬಾವಿ, ಅನ್ನಪೂರ್ಣೇಶ್ವರಿ ನಗರ, ವಿಶ್ವೇಶ್ವರಯ್ಯ ಲೇಔಟ್​ನ ಎಲ್ಲ ಸ್ಟೇಜ್​ಗಳು, ಬಿಇಎಲ್ ಲೇಔಟ್​ನ ಎಲ್ಲ ಸ್ಟೇಜ್​ಗಳು, ಮಲ್ಲತ್ತಹಳ್ಳಿ, ಉಲ್ಲಾಳ, ಡಿ ಗ್ರೂಪ್ ಲೇಔಟ್, ರೈಲ್ವೆ ಲೇಔಟ್, ಬ್ಯಾಡರಹಳ್ಳಿ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ 6ನೇ ಬ್ಲಾಕ್, ಬಸವೇಶ್ವರ ನಗರ, ಮಂಜುನಾಥ ನಗರ, ನಂದಿನಿ ಲೇಔಟ್, ಗೊರಗುಂಟೆ ಪಾಳ್ಯ, ಶಂಕರ ನಗರ, ಪ್ರಕಾಶ್​ ನಗರ, ಕುರುಬರಹಳ್ಳಿ, ಶಂಕರಮಠ, ಕಮಲಾ ನಗರ, ಕಾಮಾಕ್ಷಿಪಾಳ್ಯ, ಬಿಇಎಂಎಲ್ ಲೇಔಟ್, ಕೆಚ್​ಬಿ ಕಾಲೊನಿ, ಶಿವನಗರ, ಅಗರ ದಾಸರಹಳ್ಳಿ, ಪಾಪಯ್ಯ ಗಾರ್ಡನ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯತ್ಯಯಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

(No Water Supply in Many Parts of Bengaluru on June 30 and July 1)

ಇದನ್ನೂ ಓದಿ: ಬೆಂಗಳೂರು: ಕೊಳಚೆ ನೀರು ತುಂಬಿ ಪಾಚಿಗಟ್ಟಿದ ಕೈಕೊಂಡರಹಳ್ಳಿ ಕೆರೆಗೆ ಬೇಕಿದೆ ಕಾಯಕಲ್ಪ

ಇದನ್ನೂ ಓದಿ: ಕಳೆದ ವಾರ ಬೆಂಗಳೂರು ದಕ್ಷಿಣದಲ್ಲಿ ನೀರು ಬಿಡಲಿಲ್ಲ ಜಲಮಂಡಳಿ; ಈ ಬಾರಿ ಪಶ್ಚಿಮ ವಲಯದಲ್ಲಿ 2 ದಿನ ನೀರು ಬರಲ್ಲಾ!

Published On - 2:45 pm, Mon, 28 June 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ