ವಾಟ್ಸಾಪ್‌ ಮೂಲಕ ನೋಟಿಸ್ ನೀಡುವಂತಿಲ್ಲ: ಆಡುಗೋಡಿ ಪೊಲೀಸರು ನೀಡಿದ್ದ ನೋಟಿಸ್ ರದ್ಧು ಮಾಡಿದ ಹೈಕೋರ್ಟ್

ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ನೀಡುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆ ಮೂಲಕ ತಮಿಳುನಾಡಿನ ಪವನ್ ಕುಮಾರ್ ಅವರಿಗೆ ಆಡುಗೋಡಿ ಪೊಲೀಸರು ವಾಟ್ಸಾಪ್ ಮೂಲಕ ನೀಡಿದ್ದ ನೋಟಿಸ್ ರದ್ದುಗೊಳಿಸಿದೆ. ಐಟಿ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್‌ನ ಸತೇಂದರ್ ಕುಮಾರ್ ಆಂಟಿಲ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ನ್ಯಾಯಾಲಯ ಆದೇಶ ನೀಡಿದೆ.

ವಾಟ್ಸಾಪ್‌ ಮೂಲಕ ನೋಟಿಸ್ ನೀಡುವಂತಿಲ್ಲ: ಆಡುಗೋಡಿ ಪೊಲೀಸರು ನೀಡಿದ್ದ ನೋಟಿಸ್ ರದ್ಧು ಮಾಡಿದ ಹೈಕೋರ್ಟ್
ವಾಟ್ಸಾಪ್‌ ಮೂಲಕ ನೋಟಿಸ್ ನೀಡುವಂತಿಲ್ಲ: ಆಡುಗೋಡಿ ಪೊಲೀಸರು ನೀಡಿದ್ದ ನೋಟಿಸ್ ರದ್ಧು ಮಾಡಿದ ಹೈಕೋರ್ಟ್
Edited By:

Updated on: Feb 28, 2025 | 8:35 PM

ಬೆಂಗಳೂರು, ಫೆಬ್ರವರಿ 28: ವಾಟ್ಸಾಪ್‌ ಮೂಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಕರ್ನಾಟಕ ಹೈಕೋರ್ಟ್ (High Court) ಆದೇಶ ಹೊರಡಿಸಿದೆ. ಆ ಮೂಲಕ ತಮಿಳುನಾಡಿನ ಪವನ್ ಕುಮಾರ್ ಎಂಬಾತನಿಗೆ ನೀಡಿದ್ದ ವಾಟ್ಸಾಪ್‌ ನೋಟಿಸ್ ರದ್ದುಪಡಿಸಿ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರ ಪೀಠ ಶುಕ್ರವಾರ ಆದೇಶ ಹೊರಡಿಸಿದೆ. ಇಂತಹ ಅಭ್ಯಾಸವು ಕಾನೂನಿನಲ್ಲಿ ಅನುಮತಿಸಲಾಗುವುದಿಲ್ಲ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ನೋಟಿಸ್ ನೀಡುವುದು ಶಾಸನಬದ್ಧ ಅವಶ್ಯಕತೆಗಳನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆಡುಗೋಡಿ ಪೊಲೀಸರು ಬಿಎನ್‌ಎಸ್‌ಎಸ್, 2023 ರ ಕಲಂ 35 (3) ರ ಅಡಿಯಲ್ಲಿ ನೀಡಿದ ನೋಟಿಸ್‌ನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡಿನ ಪವನ್ ಕುಮಾರ್ ಎಂಬಾತನಿಗೆ ಆಡುಗೋಡಿ ಪೊಲೀಸರು ವಾಟ್ಸಾಪ್‌ ಮೂಲಕ ಐಟಿ ಕಾಯ್ದೆ ಸೆ.66(C), 66(D)ರಡಿ ನೋಟಿಸ್ ನೀಡಿದ್ದರು. ಆದರೆ ವಾಟ್ಸಾಪ್‌ ಮೂಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಹೈಕೋರ್ಟ್ ಆದೇಶ ನೀಡಿದೆ.

ಇದನ್ನೂ ಓದಿ: ಕಲರ್ ನೋಡಿ​ ಮರುಳಾಗದಿರಿ: ಮಾರುಕಟ್ಟೆಗೆ ಬಂದ ಕೆಮಿಕಲ್​ ಕಲ್ಲಂಗಡಿ, ಪತ್ತೆ ಮಾಡುವುದ್ಹೇಗೆ?

ಇದನ್ನೂ ಓದಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕೋರ್ಟ್​ ತಡೆಯಾಜ್ಞೆ ಮಧ್ಯೆ ಚುನಾವಣೆ: ಕೈ ತೆಕ್ಕೆಗೆ ಗದಗ-ಬೆಟಗೇರಿ ನಗರಸಭೆ

ಅರ್ಜಿದಾರರ ಪರ ವಕೀಲ ಜ್ಞಾನೇಶ ಎನ್​​ ಐ ವಾದ ಮಂಡಿಸಿದ್ದು, ಈ ನೋಟಿಸ್ ಕಾನೂನು ನಿಬಂಧನೆಗಳಿಗೆ ಅನುಗುಣವಾಗಿಲ್ಲ. ಹಾಗಾಗಿ ಅಮಾನ್ಯವಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯ ಪರವಾಗಿ ಹೆಚ್ಚುವರಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ (ಎಎಸ್​​ಪಿಪಿ) ಶ್ರೀಮತಿ ರಶ್ಮಿ ಜಾಧವ್ ವಾದ ಮಂಡಿಸಿದ್ದು, ಕಾನೂನು ಜಾರಿಯಲ್ಲಿ ದಕ್ಷತೆಗಾಗಿ ವಾಟ್ಸಾಪ್ ಸೇರಿದಂತೆ ಡಿಜಿಟಲ್ ಸಂವಹನ ವಿಧಾನಗಳನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರ ಪೀಠ ವಾಟ್ಸಾಪ್‌ ಮೂಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಮಂಡ್ಯ ಡಿಸಿಸಿ ಬ್ಯಾಂಕ್​ನಲ್ಲಿ ಭ್ರಷ್ಟಾಚಾರ: ಕೇಳಿಬಂತು ಜಿಲ್ಲಾ ಉಸ್ತುವಾರಿ ಸಚಿವರ ಹೆಸರು!

ಇನ್ನು ಇತ್ತೀಚೆಗೆ ಸತೇಂದರ್ ಕುಮಾರ್ ಆಂಟಿಲ್ ಕೇಸ್‌ನಲ್ಲಿ ಕೂಡ ವಾಟ್ಸಾಪ್‌ ಮೂಲಕ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಸುಪ್ರೀಂಕೋರ್ಟ್ ಸಿಆರ್​​ಪಿಸಿ, ಬಿಎನ್​​ಎಸ್​ಎಸ್​ ಕಾಯ್ದೆಯಲ್ಲಿ ಸೂಚಿಸಿರುವಂತೆ ನೋಟಿಸ್ ನೀಡಬೇಕು ಸೂಚನೆ ನೀಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:11 pm, Fri, 28 February 25