ಬೆಂಗಳೂರಿನಲ್ಲಿ ಕೊವಿಡ್ ಸಾವುಗಳ ಸಂಖ್ಯೆ ದಿನೇದಿನೆ ಏರಿಕೆ, ಸರ್ಕಾರ ತಪ್ಪು ಲೆಕ್ಕ ನೀಡ್ತಿದ್ಯಾ ಎಂಬ ಅನುಮಾನ
ಸರ್ಕಾರ ನೀಡ್ತಿರೋ ಸಾವಿನ ಸಂಖ್ಯೆಗೂ ಚಿತಾಗಾರದಲ್ಲಿ ಅಂತ್ಯಸಂಸ್ಕಾರಗೊಳ್ತಿರೋ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ. ಹಾಗಾಗಿ ಸರ್ಕಾರ ಸಾವಿನ ಸಂಖ್ಯೆ ತಪ್ಪು ಕೊಡ್ತಾಯಿದೆಯಾ?

ಬೆಂಗಳೂರು: ಬೆಂಗಳೂರಿನಲ್ಲಿ ಕೊವಿಡ್ ಸಾವುಗಳ ಸಂಖ್ಯೆ ದಿನೇದಿನೆ ಏರುಗತಿಯದಲ್ಲಿದೆ. ಆದರೆ ಈ ಮಧ್ಯೆ, ರಾಜ್ಯ ಸರ್ಕಾರ ನೀಡುತ್ತಿರುವ ಸಾವಿನ ಸಂಖ್ಯೆ ಬಗ್ಗೆ ಅನುಮಾನ ವ್ಯ್ತವಾಗಿದೆ. ಬೆಂಗಳೂರಿನಲ್ಲಿ ಒಂದು ದಿನದಲ್ಲಿ ಕೊವಿಡ್ ಸೋಂಕಿತರ ಸಾವಿನ ಸಂಖ್ಯೆಗೂ ಚಿತಾಗಾರಗಳಲ್ಲಿ ಶವಸಂಸ್ಕಾರವಾಗ್ತಿರುವ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಹೀಗಾಗಿ ಸರ್ಕಾರ ತಪ್ಪು ಲೆಕ್ಕ ನೀಡ್ತಿದ್ಯಾ ಎಂಬ ಅನುಮಾನ ಮೂಡಿದೆ.
ಏಪ್ರಿಲ್ 24ರಂದು ರಿಲೀಸ್ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ 149 ಜನ ಮೃತಪಟ್ಟಿದ್ದರು. ಆದರೆ ಚಿತಾಗಾರಗಳಲ್ಲಿ ಶವಸಂಸ್ಕಾರಗಳ ಸಂಖ್ಯೆ 226 ರಷ್ಟಿತ್ತು. ಏಪ್ರಿಲ್ 26 ರ ಹೆಲ್ತ್ ಬುಲೆಟಿನ್ ಪ್ರಕಾರ 105 ಜನ ಸಾವಿಗೀಡಾಗಿದ್ದರು. ಆದರೆ ಚಿತಾಗಾರಗಳಲ್ಲಿ ಶವಸಂಸ್ಕಾರಗಳ ಸಂಖ್ಯೆ 248 ಆಗಿತ್ತು. ಕೊವಿಡ್ ಸಾವಿನ ಸಂಖ್ಯೆಯಲ್ಲಿ ಈ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿದೆ. ಸರ್ಕಾರ ನೀಡ್ತಿರೋ ಸಾವಿನ ಸಂಖ್ಯೆಗೂ ಚಿತಾಗಾರದಲ್ಲಿ ಅಂತ್ಯಸಂಸ್ಕಾರಗೊಳ್ತಿರೋ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ. ಹಾಗಾಗಿ ಸರ್ಕಾರ ಸಾವಿನ ಸಂಖ್ಯೆ ತಪ್ಪು ಕೊಡ್ತಾಯಿದೆಯಾ?

ಸರ್ಕಾರ ನೀಡ್ತಿರೋ ಸಾವಿನ ಸಂಖ್ಯೆಗೂ ಚಿತಾಗಾರದಲ್ಲಿ ಅಂತ್ಯಸಂಸ್ಕಾರಗೊಳ್ತಿರೋ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ.
ಯೋಜನೆ, ಸಾಂಖ್ಯಿಕ ಇಲಾಖೆಯೂ ಸರಿಯಾದ ಲೆಕ್ಕ ನೀಡ್ತಿಲ್ಲ- ಸಿದ್ದರಾಮಯ್ಯ
ರಾಜ್ಯ ಸರ್ಕಾರ ನೀಡುತ್ತಿರುವ ಕೊವಿಡ್ ಸಾವಿನ ಸಂಖ್ಯೆಗೂ, ಚಿತಾಗಾರಗಳಲ್ಲಿನ ಶವಸಂಸ್ಕಾರಗಳ ಸಂಖ್ಯೆಗೂ ವ್ಯತ್ಯಾಸವಿದೆ. ಯೋಜನೆ, ಸಾಂಖ್ಯಿಕ ಇಲಾಖೆಯೂ ಸರಿಯಾದ ಲೆಕ್ಕ ನೀಡ್ತಿಲ್ಲ. ಕೊವಿಡ್ ಸಾವಿನ ಸಂಖ್ಯೆ ಬಗ್ಗೆ ಸರಿಯಾದ ಮಾಹಿತಿ ನೀಡ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಔಷಧ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ, ಆದರೆ ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಜನರು ಸರ್ಕಾರವನ್ನೇ ನಂಬಿ ಕುಳಿತುಕೊಳ್ಳಬಾರದು. ಜನರು ಕೂಡ ತಮ್ಮ ಜವಾಬ್ದಾರಿ ಎಂದು ತಿಳಿಯಬೇಕು ಎಂದು ಹೇಳಿದ ಸಿದ್ದರಾಮಯ್ಯ ಅನಗತ್ಯವಾಗಿ ಹೊರಗಡೆ ಓಡಾಡಬೇಡಿ,ಹೊರಬಂದಾಗ ಮಾಸ್ಕ್ ಧರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಪ್ರತಿನಿತ್ಯ ಕೊರೊನಾಗೆ ಇಬ್ಬರಿಂದ ಮೂವರ ಸಾವು ಯಾದಗಿರಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾದಿಂದ ವ್ಯಕ್ತಿಗಳು ಮೃತಪಟ್ಟರೂ , ಹೆಲ್ತ್ ಬುಲೆಟಿನ್‌ನಲ್ಲಿ ಸಾವಿನ ಸಂಖ್ಯೆ ಮಾತ್ರ ಸೊನ್ನೆ. ಯಾದಗಿರಿ ಜಿಲ್ಲಾ ಆರೋಗ್ಯ ಇಲಾಖೆ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ ಎಂಬ ಅನುಮಾನ ಬಂದಿದೆ. ಯಾದಗಿರಿಯಲ್ಲಿ 10 ದಿನದಲ್ಲಿ 15 ಜನ ಸಾವಿಗೀಡಾಗಿದ್ದಾರೆ ಎಂದು ರೋಗಿಗಳ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಲಭಿಸಿದೆ. ಆದರೆ ದಾಖಲೆಯಲ್ಲಿ ಸಾವಿನ ಸಂಖ್ಯೆ ಕಡಿಮೆ ತೋರಿಸಲಾಗ್ತಿದೆ. ಅಷ್ಟೇ ಅಲ್ಲದೆ ಯಾದಗಿರಿಯಲ್ಲಿ ಸಾವು ಸಂಭವಿಸಿಲ್ಲ ಎಂದು ನಮೂದಾಗಿದೆ. ಹಾಗಾಗಿ ಸಾವಿನ ಸಂಖ್ಯೆಯನ್ನು ಆರೋಗ್ಯ ಇಲಾಖೆ ಮುಚ್ಚಿಡುತ್ತಿದೆ ಎಂಬ ಅನುಮಾನ ದಟ್ಟವಾಗಿದೆ.
ಹಾಸನದಲ್ಲಿ ಶವ ಸಂಸ್ಕಾರದ ಹೆಸರಿನಲ್ಲಿ ಹಗಲು ದರೋಡೆ ಉಚಿತವಾಗಿ ಮಾಡಬೇಕಾದ ಅಂತ್ಯಕ್ರಿಯೆಗೆ ₹4,500 ಫಿಕ್ಸ್? ಬಿಟ್ಟಗೌಡನಹಳ್ಳಿ ಬಳಿಯ ಸ್ಮಶಾನದಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಮೃತರ ಸಂಬಂಧಿಕರು ಆರೋಪ ಮಾಡಿದ್ದಾರೆ.
(number of deaths due to coronavirus deaths not matching with the numbers released by state government in bangalore)
ಕೊರೊನಾ ಎರಡನೇ ಅಲೆ: ಒಂದು ವಾರದಲ್ಲಿ ಪಾಸಿಟಿವಿಟಿ ಮತ್ತು ಮರಣ ಪ್ರಮಾಣ ಎರಡೂ ಹೆಚ್ಚಳ
Published On - 12:31 pm, Tue, 27 April 21