ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 161 ಜೀವಾವಧಿ ಶಿಕ್ಷಾ ಬಂದಿಗಳಿಗೆ ಬಿಡುಗಡೆ ಭಾಗ್ಯ
ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಒಟ್ಟು 161 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. 161 ಸಜಾ ಬಂಧಿಗಳಲ್ಲಿ 13 ಮಹಿಳೆಯರು ಹಾಗು 148 ಪುರುಷ ಕೈದಿಗಳಿದ್ದಾರೆ.
ಬೆಂಗಳೂರು: ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲಾಗಿದೆ. ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಒಟ್ಟು 161 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. 161 ಸಜಾ ಬಂಧಿಗಳಲ್ಲಿ 13 ಮಹಿಳೆಯರು ಹಾಗು 148 ಪುರುಷ ಕೈದಿಗಳಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 4 ಮಹಿಳೆಯರು ಹಾಗೂ 46 ಪುರುಷ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಎರಡು ವರ್ಷದಿಂದ ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆ ಆಗಿರಲಿಲ್ಲ. ಕಳೆದ ಬಾರಿ 92 ಜನರ ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿತ್ತು. ಅದರಲ್ಲಿ 14 ಸಜಾಬಂಧಿಗಳನ್ನು ಬಿಡುಗಡೆ ಮಾಡಿ 88 ಕೈದಿಗಳನ್ನು ರಿಜೆಕ್ಟ್ ಮಾಡಲಾಗಿತ್ತು. ಈ ಬಾರಿ ಕಳೆದ ಬಾರಿ ತಿರಸ್ಕಾರಗೊಂಡಿದ್ದ 88 ಕೈದಿಗಳನ್ನೂ ಸೇರಿಸಿ ಒಟ್ಟು 161 ಸಜಾಬಂಧಿಗಳ ಬಿಡುಗಡೆ ಭಾಗ್ಯ ಸಿಕ್ಕಿದೆ. 10 ವರ್ಷ ಶಿಕ್ಷೆ ಪೂರ್ಣಗೊಳಿಸಿರುವ ಕೈದಿಗಳು ಬಿಡುಗಡೆಯಾಗುತ್ತಿದ್ದಾರೆ.
ಕಲಬುರಗಿಯಲ್ಲಿ 18 ಕೈದಿಗಳಿಗೆ ಬಿಡುಗಡೆ ಭಾಗ್ಯ ಇನ್ನು ಮತ್ತೊಂದೆಡೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸನ್ನಡತೆ ಹೊಂದಿದ್ದ ಓರ್ವ ಮಹಿಳೆ ಸೇರಿ 18 ಕೈದಿಗಳ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ. ಕಲಬುರಗಿ ಜಿಲ್ಲಾ ನ್ಯಾಯಾಲಯದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಸುಬ್ರಹ್ಮಣ್ಯರಿಂದ ಬಿಡುಗಡೆ ಪ್ರಮಾಣ ಪತ್ರ ಹಸ್ತಾಂತರ ಮಾಡಿದ್ದಾರೆ.
ಡಾ.ಸೂರಜ್ ರೇವಣ್ಣಗೆ ಹೈಕೋರ್ಟ್‌ನಿಂದ ಸಮನ್ಸ್ ಜಾರಿ ಬೆಂಗಳೂರು: ಡಾ.ಸೂರಜ್ ರೇವಣ್ಣ(Suraj Reavanna) ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅಸಿಂಧು ಕೋರಿ ಹೈಕೋರ್ಟ್ಗೆ(High court) ಅರ್ಜಿ ಸಲ್ಲಿಸಲಾಗಿತ್ತು. ಎಲ್.ಹನುಮೇಗೌಡ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಇಂದು(ಮಾರ್ಚ್ 11, ಶುಕ್ರವಾರ) ನಡೆದಿದೆ. ಅಸಮರ್ಪಕ ಮಾಹಿತಿಯುಳ್ಳ ನಾಮಪತ್ರ ಸಲ್ಲಿಕೆ ಆರೋಪ ಮಾಡಿದ್ದು, ವಿಚಾರಣೆ ನಂತರ ಡಾ.ಸೂರಜ್ ರೇವಣ್ಣಗೆ ಹೈಕೋರ್ಟ್‌ನಿಂದ ಸಮನ್ಸ್( summons) ಜಾರಿ ಮಾಡಿದೆ.
ವಿವಾಹದ ಮಾಹಿತಿ ಮುಚ್ಚಿಟ್ಟ ಆರೋಪ, ಪತ್ನಿಯ ಆಸ್ತಿ, ಆಭರಣದ ಮಾಹಿತಿ ನೀಡದ ಆರೋಪ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ (ಮೇಲ್ಮನೆ) ಆಯ್ಕೆಯಾಗಿದ್ದನ್ನು ಅಸಿಂಧು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಈ ಕುರಿತು ಹೈಕೋರ್ಟ್ ವಿಚಾರಣೆ ನಡೆಸಿದ್ದು, ಸಮನ್ಸ್ ಜಾರಿ ಮಾಡಿದೆ. ವಿಧಾನ ಪರಿಷತ್ ಸದಸ್ಯರಾಗಿ ಜನವರಿ 28 ಸೂರಜ್ ರೇವಣ್ಣ ಪ್ರಮಾಣವಚನ ಸ್ವೀಕರಿಸಿದ್ದರು.
ಇದನ್ನೂ ಓದಿ: Suraj Reavanna: ಡಾ.ಸೂರಜ್ ರೇವಣ್ಣಗೆ ಹೈಕೋರ್ಟ್‌ನಿಂದ ಸಮನ್ಸ್ ಜಾರಿ
ಬೇಟೆಗಾರ ಸಿಂಹ ಖುದ್ದು ಬೇಟೆಗೊಳಗಾಗಿ ಜೀವ ಉಳಿಸಿಕೊಳ್ಳಲು ಮರ ಹತ್ತಿದ!
Published On - 9:14 pm, Fri, 11 March 22