ಪಂಚ ರಾಜ್ಯಗಳ ಫಲಿತಾಂಶ ನೋಡಿ ಹುಮ್ಮಸ್ಸು ಹೆಚ್ಚಿಸಿಕೊಂಡ ಆಕಾಂಕ್ಷಿಗಳು; ಬಿಬಿಎಂಪಿ ಎಲೆಕ್ಷನ್ ನಡೆಸುವಂತೆ ಹೈಕಮಾಂಡ್ಗೆ ಮೊರೆ
ಉತ್ತರಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರವನ್ನ ಗೆದ್ದು BJPಜಯದಲ್ಲಿ ತೇಲುತ್ತಿದೆ. ಇದೇ ಗೆಲುವಿನ ವಿಶ್ವಾಸ BBMP ಎಲೆಕ್ಷನ್ ಆಕಾಂಕ್ಷಿಗಳಲ್ಲಿ ಹೆಚ್ಚಾಗಿದ್ದು, ಚುನಾವಣೆ ನಡೆಸುವಂತೆ ಹೈಕಮಾಂಡ್ ಕದ ತಟ್ಟುತ್ತಿದ್ದಾರೆ. ಬಿಬಿಎಂಪಿ ಎಲೆಕ್ಷನ್ ನಡೆಸುವಂತೆ ಟಿಕೆಟ್ ಆಕಾಂಕ್ಷಿಗಳು ಪಟ್ಟು ಹಿಡಿದು ಹೈಕಮಾಂಡ್ ಬಾಗಿಲು ತಟ್ಟಲು ಮುಂದಾಗಿದ್ದಾರೆ.
ಬೆಂಗಳೂರು: ಪಂಚಾಬ್ ಹೊರತು ಪಡಿಸಿ 4 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗೆಲುವಿನ ಲಯದಲ್ಲಿದೆ. ಬಿಜೆಪಿ ಜಯದ ಓಟವನ್ನ ಬಿಬಿಎಂಪಿ (BBMP) ಎಲೆಕ್ಷನ್ನಲ್ಲೂ ಕಾಣಲು ಟಿಕೆಟ್ ಆಕಾಂಕ್ಷಿಗಳು ತುದಿಗಾಲಲ್ಲಿದ್ದಾರೆ. ಚುನಾವಣೆ ನಡೆಸುವಂತೆ ಹೈಕಮಾಂಡ್ ಬಾಗಿಲು ತಟ್ಟಲು ಮುಂದಾಗಿದ್ದಾರೆ. ಬಿಜೆಪಿ ಶಾಸಕರ ವಿರುದ್ಧವೂ ದೂರು ನೀಡಲು ರೆಡಿ ಆಗಿದ್ದಾರೆ.
ಬಿಬಿಎಂಪಿ ಎಲೆಕ್ಷನ್ ವಿಳಂಬ, ಹೈಕಮಾಂಡ್ನತ್ತ ಆಕಾಂಕ್ಷಿಗಳ ಮುಖ ಉತ್ತರಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರವನ್ನ ಗೆದ್ದು BJPಜಯದಲ್ಲಿ ತೇಲುತ್ತಿದೆ. ಇದೇ ಗೆಲುವಿನ ವಿಶ್ವಾಸ BBMP ಎಲೆಕ್ಷನ್ ಆಕಾಂಕ್ಷಿಗಳಲ್ಲಿ ಹೆಚ್ಚಾಗಿದ್ದು, ಚುನಾವಣೆ ನಡೆಸುವಂತೆ ಹೈಕಮಾಂಡ್ ಕದ ತಟ್ಟುತ್ತಿದ್ದಾರೆ. ಬಿಬಿಎಂಪಿ ಎಲೆಕ್ಷನ್ ನಡೆಸುವಂತೆ ಟಿಕೆಟ್ ಆಕಾಂಕ್ಷಿಗಳು ಪಟ್ಟು ಹಿಡಿದು ಹೈಕಮಾಂಡ್ ಬಾಗಿಲು ತಟ್ಟಲು ಮುಂದಾಗಿದ್ದಾರೆ. ಆದ್ರೆ ಬೆಂಗಳೂರಿನ ಬಿಜೆಪಿ ಶಾಸಕರು ಎಲೆಕ್ಷನ್ ನಡೆಸದಂತೆ ಪಟ್ಟು ಹಿಡಿದಿದ್ದಾರೆ. ಬಿಜೆಪಿ ಶಾಸಕರ ಹಠದಿಂದಾಗಿ 2 ವರ್ಷದ ಹಿಂದೆ ನಡೆಯಬೇಕಿದ್ದ ಎಲೆಕ್ಷನ್ಗೆ ಕಾಲ ಕೂಡಿ ಬರ್ತಿಲ್ಲ.
ಇದು ಬಿಜೆಪಿಯಿಂದ ಸ್ಪರ್ಧೆಗೆ ಇಳಿಯಲು ತುದಿಗಾಲಲ್ಲಿ ನಿಂತ ಆಕಾಂಕ್ಷಿಗಳ ಬೇಸರಕ್ಕೆ ಕಾರಣವಾಗಿದೆ. ಸದ್ಯ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇದು ಟಿಕೆಟ್ ಆಕಾಂಕ್ಷಿಗಳ ಎಲೆಕ್ಷನ್ ಆಸೆಯನ್ನ ಮತ್ತಷ್ಟು ಹೆಚ್ಚಿಸಿದ್ದು, ಇವಾಗ ಚುನಾವಣೆ ನಡೆದ್ರೆ ಈಸಿಯಾಗಿ ಗೆಲ್ಲಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ ಇನ್ನೂ 1ವರ್ಷ ಎಲೆಕ್ಷನ್ ನಡೆಸದಂತೆ ಶಾಸಕರು ಹಠ ಹಿಡಿದಿದ್ದು, ಚುನಾವಣೆ ನಡೆಯೋದು ಡೌಟ್ ಆಗಿದೆ. ಈ ಬೆಳವಣಿಗೆಯಿಂದ ಸಿಟ್ಟಾಗಿರೋ ಆಕಾಂಕ್ಷಿಗಳು ಪಕ್ಷದ ಕೆಲ ಮುಖಂಡರನ್ನ ಹೈಕಮಾಂಡ್ಗೆ ಚೂ ಬಿಡುತ್ತಿದ್ದಾರೆ. ದೂರು ನೀಡಿ ಸೇಡು ತೀರಿಸಿಕೊಳ್ತಿದ್ದಾರೆ.
ಬಿಬಿಎಂಪಿ ಚುನಾವಣೆಗೂ ಮುನ್ನ ವಿಧಾನಸಭೆ ಎಲೆಕ್ಷನ್ ನಡೆಸಲು ಶಾಸಕರು ಹಠಹಿಡಿದಿದ್ದಾರೆ. ಆದ್ರೆ ಇತ್ತ ಬಿಬಿಎಂಪಿ ಚುನಾವಣೆ ನಡೆಸುವಂತೆ ಮಾಜಿ ಪಾಲಿಕೆ ಸದಸ್ಯರು ಮನವಿ ಮಾಡ್ತಿದ್ದಾರೆ. ಬಿಜೆಪಿಯ ಕೆಲ ಮುಖಂಡರು ಟಿಕೆಟ್ ಆಕಾಂಕ್ಷಿಗಳಿಗೆ ಸಾಥ್ ಕೊಡ್ತಿದ್ದು, ಬಿಜೆಪಿಯ ಕೆಲ ಶಾಸಕರ ವಿರುದ್ಧ ದೂರು ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.
ವರದಿ: ಮುತ್ತಪ್ಪ ಲಮಾಣಿ, ಟಿವಿ9, ಬೆಂಗಳೂರು
ಇದನ್ನೂ ಓದಿ: ಟೋಲ್ ಶುಲ್ಕ ಕಟ್ಟುವ ವಿಚಾರಕ್ಕೆ ಸಿಬ್ಬಂದಿ ಮೇಲೆ ಹಲ್ಲೆ; ಕಿಡಿಗೆಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ
Published On - 6:39 pm, Fri, 11 March 22