ಬೆಂಗಳೂರಿನಲ್ಲಿ ಈ ಟೈಮಿನಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಾಕಾಶ

ಹಸಿರು ಪಾಟಕಿಗಳ ಮೇಲೆ ಕ್ಯೂ ಆರ್ ಕೋಡ್ ಇರತ್ತೆ ಅದನ್ನು ಸ್ಲ್ಯಾನ್ ಮಾಡುವ ಮೂಲಕ ಪತ್ತೆ ಮಾಡಬಹುದು. ಅಗ್ನಿಶಾಮಕ ಇಲಾಖೆ ಮೂಲಕ ಮಾಹಿತಿ ಪಡೆದು ಪಟಾಕಿ ಮಾರಾಟಕ್ಕೆ ಲೈಸೆನ್ಸ್​ ನೀಡಲಾಗಿದೆ. ಎಲ್ಲೆಲ್ಲಿ ಮಳಿಗೆ ಹಾಕಬೇಕೆಂದು ಬಿಬಿಎಂಪಿ ಅನುಮತಿ ನೀಡಲಿದೆ. ಬೆಂಗಳೂರಲ್ಲಿ ಒಟ್ಟು 62 ಮೈದಾನದಲ್ಲಿ ಮಳಿಗೆ ಹಾಕಲು ಅನುಮತಿ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಹೇಳಿದರು.

ಬೆಂಗಳೂರಿನಲ್ಲಿ ಈ ಟೈಮಿನಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಾಕಾಶ
ಪೊಲೀಸ್​ ಆಯುಕ್ತ ದಯಾನಂದ್​​
Updated By: ವಿವೇಕ ಬಿರಾದಾರ

Updated on: Nov 10, 2023 | 1:23 PM

ಬೆಂಗಳೂರು ನ.10: ನಗರದಲ್ಲಿ ಹಸಿರು ಪಟಾಕಿ (Green Firecrackers) ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಸುಪ್ರೀಂಕೋರ್ಟ್ (Supreme Court) ಆದೇಶದಂತೆ ಹಸಿರು ಪಟಾಕಿ ಮಾತ್ರ ಬಳಸಬೇಕು. ಬೇರೆ ಪಟಾಕಿ ತರದಂತೆ ಚೆಕ್​​ಪೋಸ್ಟ್​ನಲ್ಲಿ ಪರಿಶೀಲನೆ ಮಾಡುತ್ತೇವೆ. ಸಾರ್ವಜನಿಕರು ಹಸಿರು ಪಟಾಕಿ ಪರಿಶೀಲನೆ ಮಾಡಿ ಬಳಸಬೇಕು. ರಾತ್ರಿ 8 ಗಂಟೆಯಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಸಿಡಿಸಬೇಕು. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದರೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ (B Dayananda) ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಸಿರು ಪಾಟಕಿಗಳ ಮೇಲೆ ಕ್ಯೂ ಆರ್ ಕೋಡ್ ಇರತ್ತೆ ಅದನ್ನು ಸ್ಲ್ಯಾನ್ ಮಾಡುವ ಮೂಲಕ ಪತ್ತೆ ಮಾಡಬಹುದು. ಅಗ್ನಿಶಾಮಕ ಇಲಾಖೆ ಮೂಲಕ ಮಾಹಿತಿ ಪಡೆದು ಪಟಾಕಿ ಮಾರಾಟಕ್ಕೆ ಲೈಸೆನ್ಸ್​ ನೀಡಲಾಗಿದೆ. ಎಲ್ಲೆಲ್ಲಿ ಮಳಿಗೆ ಹಾಕಬೇಕೆಂದು ಬಿಬಿಎಂಪಿ ಅನುಮತಿ ನೀಡಲಿದೆ. ಬೆಂಗಳೂರಲ್ಲಿ ಒಟ್ಟು 62 ಮೈದಾನದಲ್ಲಿ ಮಳಿಗೆ ಹಾಕಲು ಅನುಮತಿ ನೀಡಲಾಗಿದೆ. 964 ಜನರು ಪಟಾಕಿ ಮಾರಾಟದ ಲೈಸೆನ್ಸ್​ಗಾಗಿ ಅರ್ಜಿ ಸಲ್ಲಿಸಿದ್ದರು. 320 ಪಟಾಕಿ ಅಂಗಡಿಗಳನ್ನು ಹಾಕಲು ಪರವಾನಿಗೆ ನೀಡಲಾಗಿದೆ. ಈ ಪೈಕಿ 263 ಜನರಿಗೆ ಲಾಟರಿ ಮೂಲಕ ಲೈಸೆನ್ಸ್ ನೀಡಲಾಗಿದೆ ಎಂದರು.

ಇದನ್ನೂ ಓದಿ: ಪಟಾಕಿ ಮಾರಾಟಕ್ಕೆ ರಾಜ್ಯ ಪೊಲೀಸ್ ಇಲಾಖೆಯಿಂದ ಸುತ್ತೋಲೆ

ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುವವರನ್ನು ಪತ್ತೆ ಹಚ್ಚಲು ಪೊಲೀಸ್, ಅಗ್ನಿಶಾಮಕ, ಬಿಬಿಎಂಪಿ ಸಹಯೋಗದಲ್ಲಿ ಟಾಸ್ಕ್​ಫೋರ್ಸ್​ ರಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ