Operation Sindoor​​: ಉಗ್ರರನ್ನು ಸೆದೆಬಡಿದಿದ್ದು ಬೆಂಗಳೂರಿನ ಸೂಸೈಡ್​ ಡ್ರೋನ್​ಗಳು

ಸದ್ಯ ವಿಶ್ವಾದಾದ್ಯಂತ ಆಪರೇಷನ್ ಸಿಂದೂರ್ ಬಗ್ಗೆಯೇ ಚರ್ಚೆಯಾಗುತ್ತಿದೆ. ಆಪರೇಷನ್​ ಸಿಂದೂರ್​ ಹೆಸರಿನಲ್ಲಿ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರನ್ನು ಸೆದೆಬಡಿಯುವ ಮೂಲಕ ಭಾರತೀಯ ಸೇನೆ ತನ್ನ ಶಕ್ತಿ ಮತ್ತು ಸಾಮರ್ಥ್ಯ ತೋರಿಸಿದೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ನಮ್ಮ ಬೆಂಗಳೂರಿನ ಕೊಡುಗೆಯೂ ಕೂಡ ಇದೆ. ಏನದು ಕೊಡುಗೆ? ಇಲ್ಲಿದೆ ಮಾಹಿತಿ

Operation Sindoor​​: ಉಗ್ರರನ್ನು ಸೆದೆಬಡಿದಿದ್ದು ಬೆಂಗಳೂರಿನ ಸೂಸೈಡ್​ ಡ್ರೋನ್​ಗಳು
ಆಪರೇಷನ್​ ಸಿಂದೂರ್​ನಲ್ಲಿ ಬಳಕೆಯಾಗಿರುವ ಬೆಂಗಳೂರಿನ ಡ್ರೋನ್​ಗಳು
Edited By: ವಿವೇಕ ಬಿರಾದಾರ

Updated on: May 16, 2025 | 9:21 PM

ಬೆಂಗಳೂರು, ಮೇ 16: ಜಮ್ಮು ಮತ್ತು ಕಾಶ್ಮೀರದಲ್ಲಿನ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ (Pahalgam Terror Attack) ಪ್ರತೀಕವಾಗಿ ಭಾರತೀಯ ಆಪರೇಷನ್​ ಸಿಂದೂರ್​ (Operation Sindoor) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದೆ. ಉಗ್ರರನ್ನು ಸಂಹಾರ ಮಾಡುವಲ್ಲಿ ಭಾರತೀಯ ಸೇನೆ (Indian Army) ಯಶಸ್ವಿಯಾಗಿದೆ. ಆಪರೇಷನ್​ ಸಿಂದೂರ್​ ಕಾರ್ಯಾಚರಣಗೆ ಬೆಂಗಳೂರಿನಲ್ಲಿ ತಯಾರಾದ ಡ್ರೋನ್​ಗಳು ಬಳಕೆಯಾಗಿವೆ.

ಆಲ್ಫಾ ಡಿಸೈನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿ (ADTL) ತಯಾರಿಸಿದ ಸೂಸೈಡ್ ಡ್ರೋನ್​ಗಳು ​ಮೇಕ್ ಇನ್ ಇಂಡಿಯಾ ಶಕ್ತಿ ಏನು ಎಂಬುವುದನ್ನು ಇಡೀ ಜಗತ್ತಿಗೆ ಗೊತ್ತಾಗುವಂತೆ ಮಾಡಿವೆ. ಸ್ಕೈ ಸ್ಟ್ರೈಕರ್ ಅಂತ ಕರೆಯುವ ಈ ಸೂಸೈಡ್ ಡ್ರೋನ್​ಗಳು ಉಗ್ರರನ್ನು ಸೆದೆಬಡಿದಿವೆ. ಈ ಸೂಸೈಡ್ ಡ್ರೋನ್​ಗಳು​ ಆಪರೇಷನ್ ಸಿಂದೂರ್​ನಲ್ಲಿ ತಮ್ಮ ಪವರ್ ತೋರಿಸಿವೆ.

Loading...

ಸ್ಕೈ ಸ್ಟ್ರೈಕರ್ ಡ್ರೋನ್​ಗಳ ಶಕ್ತಿ-ಸಾಮರ್ಥ್ಯ ಕುರಿತು ಆಲ್ಫಾ ಡಿಸೈನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಚೀಫ್ ಆಫ್ ರೇಟಿಂಗ್ ಆಫೀಸರ್ ರಾಘವೇಂದ್ರ ಆರೂರ್ ಮಾತನಾಡಿ, ಈ ಡ್ರೋನ್​ಗಳು 100 ರಿಂದ 120 ಕಿಮೀವರೆಗೂ ಮೇಲೆ ಹೋಗಿ ಗಾಳಿಯಲ್ಲೇ ರೌಂಡ್ ಹೊಡೆಯುತ್ತವೆ. ಎದುರಾಳಿ ಪಡೆ ಕಂಡ ತಕ್ಷಣ ಟಾರ್ಗೆಟ್ ಫಿಕ್ಸ್ ಮಾಡಿಕೊಂಡು ಅಟ್ಯಾಕ್ ಮಾಡುತ್ತವೆ. ಸುಮಾರು 10 ಮೀಟರ್ ಸುತ್ತಮುತ್ತ ಡ್ಯಾಮೇಜ್ ಮಾಡುತ್ತವೆ. ಈ ಡ್ರೋನ್​ಗಳನ್ನು ಭಾರತೀಯ ಸೇನೆಗೆ ಸರಬರಾಜು ಮಾಡಿದ್ದೇವೆ. ಇನ್ನೂ ಹೆಚ್ಚಿನ ಡ್ರೋನ್​ಗಳನ್ನು ಸರಬರಾಜು ಮಾಡಲು ಸಿದ್ದರಿದ್ದೇವೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಹೆಚ್.ಎಸ್ ಹರಿಪ್ರಸಾದ್ ಅಧ್ಯಕ್ಷ ಮಾತನಾಡಿ, “ಮೇಕ್ ಇನ್ ಇಂಡಿಯಾಗೆ ಪ್ರಧಾನಿ ಮೋದಿಯವರು ಪ್ರೋತ್ಸಾಹಸುತ್ತಿದ್ದರು. ಇವತ್ತು ನಮ್ಮ ಕಂಪನಿಯಲ್ಲಿ ತಯಾರಾಗಿದ್ದ ಡ್ರೋನ್​ಗಳು​ ಆಪರೇಷನ್​ ಸಿಂದೂರ್​ಗೆ ಬಳಕೆಯಾಗಿದ್ದು ನಮಗೆ ಖುಷಿದೆ. ಇನ್ನೂ, ಡ್ರೋನ್​ಗಳನ್ನು ಸರಬರಾಜು ಮಾಡಿರುವುದಕ್ಕೆ ಖುಷಿ ಇದೆ. ಇದು ನಾವೆಲ್ಲರು ಹೆಮ್ಮೆ ಪಡುವ ವಿಷಯ” ಎಂದು ಹೇಳಿದರು.

ಇದನ್ನೂ ಓದಿ: ಪಾಕ್​ಗೆ ಬೆಂಬಲವಾಗಿ ನಿಂತ ಚೀನಾ ಕಳ್ಳಾಟ ಬಟಾಬಯಲು, ಇಲ್ಲಿವೆ 10 ಪ್ರಮುಖ ಸಾಕ್ಷ್ಯಗಳು

ಒಟ್ಟಿನಲ್ಲಿ ಪಾಕಿಸ್ತಾನಕ್ಕೆ ಸಿಂಹದ ಶಂಕ್ತಿ ಏನೂ ಎಂಬುವುದನ್ನು ನಮ್ಮ ಭಾರತದ ಸೇನೆ ತೋರಿಸಿದೆ. ನಮ್ಮ ಸೇನೆಗೆ ಬಲ ತುಂಬಿರುವ ಇಂಥಹ ಡ್ರೋನ್​ಗಳು, ನಮ್ಮ ಬೆಂಗಳೂರಿನ ಕೀರ್ತಿಯನ್ನು ಹೆಚ್ಚಿಸಿವೆ.

Shivaraj
Loading...
Unable to load recommendations.
Follow Us