ನಮ್ಮ ಬೇಡಿಕೆ ಈಡೇರಿಲ್ಲ ಅಂದ್ರೆ 42 ಸಾವಿರ ಕಾರ್ಯಕರ್ತೆಯರು ಕೂಡ ಲಗ್ಗೆ ಇಡುತ್ತೇವೆ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಆಶಾ ಕಾರ್ಯದರ್ಶಿ ನಾಗಲಕ್ಷ್ಮೀ

ನಮ್ಮ ಬೇಡಿಕೆ ಈಡೇರಿಲ್ಲ ಅಂದ್ರೆ 42 ಸಾವಿರ ಕಾರ್ಯಕರ್ತೆಯರು ಕೂಡ ಲಗ್ಗೆ ಇಡುತ್ತೇವೆ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಆಶಾ ಕಾರ್ಯದರ್ಶಿ ನಾಗಲಕ್ಷ್ಮೀ
ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಆಶಾ ಕಾರ್ಯಕರ್ತೆಯರು ಕೋವಿಡ್​ನಂತಹ ಸಮಯದಲ್ಲಿ ಜನರ ಸೇವೆ ಮಾಡಿದೀರಿ. ಆದ್ರೆ ನಿಮಗೆ ಸಿಗಬೇಕಾದ ಸವಲತ್ತು ಸಿಗ್ತಿಲ್ಲ. ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗ್ತಿದೇನೆ. ನಿಮ್ಮೊಂದಿಗೆ ನಾನು ಇರ್ತೇನೆ ಎಂದು ಸಂತೋಷ್ ಹೆಗ್ಡೆ ಭರವಸೆ ನೀಡಿದರು.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 17, 2022 | 2:27 PM

ಬೆಂಗಳೂರು: ಇವತ್ತು ನಮ್ಮ ಪ್ರತಿಭಟನೆ ಆರಂಭವಾಗಿದೆ ಅಷ್ಟೇ. ನಮ್ಮ ಬೇಡಿಕೆ ಈಡೇರಿಲ್ಲ ಅಂದ್ರೆ 42 ಸಾವಿರ ಕಾರ್ಯಕರ್ತೆಯರು ಕೂಡ ಲಗ್ಗೆ ಇಡುತ್ತೇವೆ ಎಂದು ಸರ್ಕಾರಕ್ಕೆ ಆಶಾ ಕಾರ್ಯಕರ್ತೆ ಕಾರ್ಯದರ್ಶಿ ನಾಗಲಕ್ಷ್ಮೀ ಎಚ್ಚರಿಕೆ ಕೊಟ್ಟಿದ್ದಾರೆ. ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಸುತ್ತಿದ್ದೇವೆ. 42 ಸಾವಿರ ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿ ಕೆಲಸ ಮಾಡುತ್ತಾರೆ. ದುಡಿಯುವ ಸೇವೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಸಹಾಯಧನ ಹೆಚ್ಚಳ ಆಗಿದೆ ಆದ್ರೆ, 3 ತಿಂಗಳ ಸಂಬಳ ಆಗಿಲ್ಲ. ಕೇಂದ್ರ ಸರ್ಕಾರದ ಆರ್​ಸಿಎಚ್​ (RCH) ಪೋರ್ಟಲ್​ನಿಂದ ಸಮಸ್ಯೆ ಜಾಸ್ತಿ ಆಗಿದೆ. RCH ಪೋರ್ಟಲ್​ನಲ್ಲಿ ತಾಂತ್ರಿಕ ದೋಷ ಇದೆ. 5 ರಿಂದ 6 ಸಾವಿರ ಸಹಾಯಧನದಷ್ಟು ಕೆಲಸ ಮಾಡೋದ್ರೆ ಕೇವಲ ಆಶಾ ಅವರ ಕೈ ಸೇರೋದು 1 ಸಾವಿರ ರೂ. ಮಾತ್ರ 2 ರಿಂದ ಮೂರು ಗಂಟೆ ಕೆಲಸ ಅಂತ ಸರ್ಕಾರ ಹೇಳುತ್ತಾರೆ. ಆದ್ರೆ ನಮ್ಮ ಮುಂದೆ 32ಕ್ಕೂ ಹೆಚ್ಚು ಕೆಲಸ ನೀಡಿದ್ದಾರೆ. ಆದ್ರೆ ನಮ್ಮ ಬಳಿ 11 ರಿಂದ 12 ಗಂಟೆ ಕೆಲಸ ಮಾಡಿಸುತ್ತಾರೆ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರು ಕೋವಿಡ್​ನಂತಹ ಸಮಯದಲ್ಲಿ ಜನರ ಸೇವೆ ಮಾಡಿದೀರಿ. ಆದ್ರೆ ನಿಮಗೆ ಸಿಗಬೇಕಾದ ಸವಲತ್ತು ಸಿಗ್ತಿಲ್ಲ. ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗ್ತಿದೇನೆ. ನಿಮ್ಮೊಂದಿಗೆ ನಾನು ಇರ್ತೇನೆ ಎಂದು ಸಂತೋಷ್ ಹೆಗ್ಡೆ ಭರವಸೆ ನೀಡಿದರು. ಸರಿ ಸಮಾನತೆಯ ವೇತನ ಸಿಗ್ಬೇಕು ಅನ್ನೋದು ಸಂವಿಧಾನದ ಹಕ್ಕು. ಆದರೆ ಸರ್ಕಾರ ಬರೀ ಬಾಯಿಮಾತಿಗಷ್ಟೆ ಹೇಳಿ ಭರವಸೆ ಈಡೇರಿಸುತ್ತಿಲ್ಲ. ನಾನು ರಾಜಕಾರಣಿ ಅಲ್ಲ, ರಾಜಕೀಯಕ್ಕೆ ಸೇರಿದವನಲ್ಲ. ಆದರೂ ನಾನು ಮೂರೂ ಪಕ್ಷದವರ ಕಾರ್ಯ ಗಮನಿಸಿದ್ದೇನೆ. ಸರ್ಕಾರಿ ನೌಕರರು ನಿಗದಿ ಸಮಯದಷ್ಟೇ ಕೆಲಸ ಮಾಡುತ್ತಾರೆ. ಆದ್ರೆ ಆಶಾ ಕಾರ್ಯಕರ್ತೆಯರು ಎಡೆಬಿಡದೆ ಕೆಲಸ ಮಾಡುತ್ತಿದ್ದರೂ ಸರ್ಕಾರ ಸುಮ್ಮನಾಗಿದೆ. ಸಮಸ್ಯೆ ಉದ್ಭವ ಆಗುವ ಮೊದಲೇ ಸರ್ಕಾರ ಆಶಾ ಕಾರ್ಯಕರ್ತೆಯರ ಸಮಸ್ಯೆಗೆ ಪರಿಹಾರ ಒದಗಿಸಬೇಕಿತ್ತು ಎಂದು ಹೇಳಿದ್ದಾರೆ.

ಇವತ್ತು ಆಶಾ ಕಾರ್ಯಕರ್ತೆಯರು ನ್ಯಾಯ ಪೂರ್ಣ ಬೇಡಿಕೆ ಇಟ್ಟಿದ್ದಾರೆ. ಇವರು ಫ್ರಾಂಟ್ ಲೈನ್ ವಾರಿಯರ್ಸ್. ಕೊರೊನ ಸಮಯದಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಸರ್ಕಾರ ಇವರ ಕೆಲಸಕ್ಕೆ ನ್ಯಾಯ ಒದಗಿಸಬೇಕು. ಸರ್ಕಾರ ಕಣ್ಣು ತೆಗೆಯಬೇಕು ಎಂದು ನಗರದಲ್ಲಿ ಎಸ್. ಆರ್ ಹಿರೇಮಠ್ ಹೇಳಿಕೆ ನೀಡಿದ್ದಾರೆ.  ಆರೋಗ್ಯ ಸೇವೆ ಕೊಡುವ ಇವರ ಬೇಡಿಕೆ ಈಡೇರಿಕೆ ಮಾಡಬೇಕು. ಮಿನಿಮಮ್ wage ಕೊಡಬೇಕು. ದೇಶದ ಸಂಪತ್ತು ಎಲ್ಲಿ ಹೋಗುತ್ತಿದೆ ಅಂತ ವಿಚಾರ ಮಾಡಬೇಕು. ಆರ್ಟಿಕಲ್ 39 ಹೇಳೋ ಸಂಪತ್ತು ಕೇವಲ ಕೆಲವರ ಕೈ ಮಾತ್ರ ಸೇರಬಾರದು ಎಂದರು.

ಇನ್ನೂ ಇದೇ ವೇಳೆ ಜೋರು ಮಳೆ ಆರಂಭವಾದರೂ ಮಳೆ ಮಧ್ಯೆಯೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮುಂದುವರೆಸಿದರು. ಕೊಡೆ ಹಿಡಿದು ಪ್ರತಿಭಟಿಸಿದರು. ಇತ್ತ ಪ್ರತಿಭಟನೆ ಹಾಗೂ ಮಳೆ ಹಿನ್ನಲೆ ಟ್ರಾಫಿಕ್​ನಲ್ಲಿ ವಾಹನ ಸವಾರರು ಸಿಲುಕಿದ್ದಾರೆ. ಎನ್ಎಚ್ಎಂ ಡೈರೆಕ್ಟರ್ ಪ್ರಭುಗೌಡ( ಆಶಾ ಪ್ರೋಗ್ರಾಮ್ ಡೈರೆಕ್ಟರ್) ಸ್ಥಳಕ್ಕೆ ಬಂದಿದ್ದು, ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada