ರಸ್ತೆಯಲ್ಲಿ ಬಿದ್ದಿದ್ದ ಕೃತಕ ಕೈ ನೋಡಿ ಬೆಚ್ಚಿಬಿದ್ದ ಜನ, ಬೆಂಗಳೂರಿನ ಜನರಿಗೆ ಶಾಕ್ ಕೊಟ್ಟ ಕಿಡಿಗೇಡಿಗಳು
ಕೃತಕ ಮುಂಗೈ ರಸ್ತೆಯಲ್ಲಿ ಬಿದ್ದಿದ್ದನ್ನು ಕಂಡು ಜನರಿಗೆ ಗಾಬರಿಯಾಗಿದೆ. ಹಂತಕರು ಮನುಷ್ಯನನ್ನು ಕೊಲೆ ಮಾಡಿ ಆತನ ಕೈಯನ್ನು ಕತ್ತರಿಸಿ ಈ ರೀತಿ ರಸ್ತೆಗೆ ಎಸೆದಿದ್ದಾರೆ ಎಂದು ಭಾವಿಸಿ ಜನ ಆತಂಕಕ್ಕೆ ಒಳಗಾಗಿದ್ರು.
ಬೆಂಗಳೂರು: ರಸ್ತೆಯಲ್ಲಿ ಬಿದ್ದಿದ್ದ ಕೃತಕ ಮುಂಗೈ ಕಂಡು ಕೆಲಕಾಲ ಜನರೆಲ್ಲಾ ಆತಂಕಕ್ಕೆ ಒಳಗಾದ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ಕಿಡಿಗೇಡಿಗಳು ರಸ್ತೆಯಲ್ಲಿ ಕೃತಕ ಮುಂಗೈ ಎಸೆದುಹೋಗಿದ್ದಾರೆ. ಇದನ್ನು ಕಂಡ ಜನ ಮನುಷ್ಯರ ಕೈ ಕಟ್ ಮಾಡಿ ಎಸೆದಿದ್ದಾರೆ ಎಂದು ಬೆಚ್ಚಿಬಿದಿದ್ದಾರೆ.
ಕೃತಕ ಮುಂಗೈ ರಸ್ತೆಯಲ್ಲಿ ಬಿದ್ದಿದ್ದನ್ನು ಕಂಡು ಜನರಿಗೆ ಗಾಬರಿಯಾಗಿದೆ. ಹಂತಕರು ಮನುಷ್ಯನನ್ನು ಕೊಲೆ ಮಾಡಿ ಆತನ ಕೈಯನ್ನು ಕತ್ತರಿಸಿ ಈ ರೀತಿ ರಸ್ತೆಗೆ ಎಸೆದಿದ್ದಾರೆ ಎಂದು ಭಾವಿಸಿ ಜನ ಆತಂಕಕ್ಕೆ ಒಳಗಾಗಿದ್ರು. ತಕ್ಷಣ ಕೊಡಿಗೇಹಳ್ಳಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮುಂಗೈ ಕೃತಕ ಎಂಬುದು ಪತ್ತೆ ಮಾಡಿದ್ದಾರೆ. ಸದ್ಯ ಜನರ ಆತಂಕ ದೂರವಾಗಿದೆ.
ಇದನ್ನೂ ಓದಿ: ಅಮ್ರುಲ್ಲಾಹ್ ಸಾಲೆಹ್ಗೆ ನಿಷ್ಠೆ ವ್ಯಕ್ತಪಡಿಸಿ ಪಂಜಶೀರ್ ಕಣಿವೆಯತ್ತ ಧಾವಿಸುತ್ತಿರುವ ಆಫ್ಘನ್ ಸೇನಾ ಪಡೆಗಳು!