ಬಿಎಂಟಿಸಿ ಬಸ್‌ನಲ್ಲಿ 6 ರೂ. ಬದಲು 60 ಸಾವಿರ ರೂ ಫೋನ್ ಪೇ ಮಾಡಿದ ಪ್ರಯಾಣಿಕ, ಮುಂದೇನಾಯ್ತು ನೋಡಿ
ಒಬ್ಬ ಪ್ರಯಾಣಿಕರು BMTC ಬಸ್‌ನಲ್ಲಿ ₹6 ರೂಪಾಯಿ ಟಿಕೆಟ್‌ಗೆ PhonePe ಮೂಲಕ ತಪ್ಪಾಗಿ ₹60,000 ಪಾವತಿಸಿದ್ದಾರೆ. ಕೆಲಸದ ಒತ್ತಡ ಅಥವಾ ಅಜಾಗರೂಕತೆಯಿಂದ ಇಂತಹ ತಪ್ಪುಗಳು ಆಗಬಹುದು. ಕಂಡಕ್ಟರ್ ಮತ್ತು ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಹಣ ಮರುಪಾವತಿಗೆ ಪ್ರಯತ್ನ ನಡೆದಿದೆ. ಡಿಜಿಟಲ್ ಪಾವತಿ ಮಾಡುವಾಗ, ವಿಶೇಷವಾಗಿ ಜನದಟ್ಟಣೆ ಅಥವಾ ಚಲಿಸುವಾಗ, ಮೊತ್ತವನ್ನು ಎರಡು ಬಾರಿ ಪರಿಶೀಲಿಸುವುದು ಅತ್ಯಗತ್ಯ. ಯುಪಿಐ ಪಾವತಿಗಳಲ್ಲಿ ತಪ್ಪುಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸಿ.

ಬೆಂಗಳೂರು, ಜ.22: ಫೋನ್ ಪೇ ಮಾಡುವಾಗ ಸ್ವಲ್ಪ ಗಮನ ನೀಡಬೇಕು ಎನ್ನುವುದು ಇದೇ ಕಾರಣಕ್ಕೆ ನೋಡಿ, ಇಲ್ಲೊಬ್ಬ ವ್ಯಕ್ತಿ ಬಿಎಂಟಿಸಿಯಲ್ಲಿ (BMTC fare mistake) 6 ರೂ ಬದಲು 60 ಸಾವಿರ ಫೋನ್ ಪೇ ಮಾಡಿದ್ದಾರೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದೆ. ಕೆಲವೊಂದು ಬಾರಿ ಫೋನ್ ಪೇ ಮಾಡುವಾಗ ತಪ್ಪಿ ಸೊನ್ನೆ ಹೆಚ್ಚು ಹಾಕಿ ಪಜೀತಿಗೆ ಸಿಲುಕಿಕೊಂಡಿರುವ ಘಟನೆಗಳು ಆಗ್ಗಾಗೆ ನಡೆಯುತ್ತಿರುತ್ತದೆ. ಕೆಲಸದ ಒತ್ತಡದಿಂದ ಅಥವಾ ಕೈ ತಪ್ಪಿಯು ಹೀಗೆ ಆಗಬಹುದು. ಹಾಗಾಗಿ ಎಚ್ಚರಿಕೆಯಿಂದ ಫೋನ್ ಪೇ ಮಾಡಬೇಕು. ಬಿಎಂಟಿಸಿಯಲ್ಲಿ ಪ್ರಯಾಣಿಕರೊಬ್ಬರ ಎಡವಟ್ಟಿನಿಂದ 60 ಸಾವಿರ ಖಾತೆಯಿಂದ ಹೋಗಿದೆ.
ಈ ಘಟನೆ ಜ.14ರಂದು ಬನಶಂಕರಿಯಲ್ಲಿ ನಡೆದಿದೆ. ರಾತ್ರಿ ವೇಳೆ ಈ ವ್ಯಕ್ತಿ ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ಆರು ರೂಪಾಯಿ ಬದಲು ಆರವತ್ತು ಸಾವಿರ ಪೋನ್ ಪೇ ಮಾಡಿದ್ದಾರೆ. ಪ್ರಯಾಣಿಕ 60 ಸಾವಿರ ಫೋನ್ ಪೇ ಮಾಡಿರುವುದನ್ನು ನೋಡಿ ಕಂಡಕ್ಟರ್ ಶಾಕ್ ಆಗಿದ್ದಾರೆ. ಪ್ರಯಾಣಿಕ 6 ರೂ. ಮಾಡುವ ಬದಲು ತಪ್ಪಿ 60 ಸಾವಿರ ರೂ ಮಾಡಿದ್ದಾರೆ. ಇದೀಗ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ದೊಡ್ಡ ಸುದ್ದಿ ಮಾಡಿದೆ. ಈ ಬಗ್ಗೆ ಪ್ರಯಾಣಿಕ ಕಂಡಕ್ಟರ್ ಗೆ ಮಾಹಿತಿ ನೀಡಿದ್ದಾರೆ. ಬಸ್ ನಿರ್ವಾಹಕ ಖಾತೆ ಪರಿಶೀಲಿಸಿದಾಗ 62,316 ರೂ ಹಾಕಿರುವುದು ಗೊತ್ತಾಗಿದೆ.
ಈ ಹಣವನ್ನು ನೋಡಿ ಕಂಡಕ್ಟರ್ ಬೆಚ್ಚಿಬಿದ್ದಿದ್ದಾರೆ. ನಂತರ ಈ ಹಣವನ್ನು ತಕ್ಷಣದಲ್ಲಿ ನೀಡಲು ಸಾಧ್ಯವಿಲ್ಲ. ಮೊದಲು ನಿರ್ವಾಹಕ ಈ ಬಗ್ಗೆ ತನ್ನ ಮೇಲಾಧಿಕಾರಿಗಳಿಗೆ ತಿಳಿಸಿ, ನಂತರ ಅವರ ನಂಬರ್ ಪಡೆದುಕೊಂಡಿದ್ದಾರೆ. ಡಿಪೋ ಮ್ಯಾನೇಜರ್ ಫೋನ್ ನಂಬರ್ ಕೂಡ ನೀಡಲಾಗಿದೆ. ಅವರು ಪರಿಶೀಲನೆ ನಡೆಸಿದ ನಂತರ ಹಣ ಪಡೆಯಬಹುದು. ಹಣ ಪಡೆಯಲು ಡಿಪೋಗೆ ಬರಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ಇನ್ನೂ ಕೂಡ ಹಣ ಪಾವತಿ ಆಗಿಲ್ಲ. ಇವತ್ತು ಅಥವಾ ನಾಳೆಯೊಳಗೆ ಹಣ ಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋಮುದ್ವೇಷದ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಮತ್ತೆ ಎಫ್ಐಆರ್ ದಾಖಲು
ಫೋನ್ ಪೇ ಮಾಡುವ ಮುನ್ನ ಈ ವಿಚಾರ ಗಮನಿಸಲೇಬಬೇಕು:
ಹಣ ಕಳುಹಿಸುವ ಮೊದಲು ಅಮೌಂಟ್ ಸರಿಯಾಗಿದೆಯೇ ಎಂದು ಎರಡು ಬಾರಿ ನೋಡಬೇಕು. ಸಾಮಾನ್ಯವಾಗಿ ದೊಡ್ಡ ಮೊತ್ತವನ್ನು ಪಾವತಿಸುವಾಗ ಹೆಚ್ಚಿನ ಯುಪಿಐ ಆ್ಯಪ್‌ಗಳು ತಪ್ಪು ನೀಡುತ್ತದೆ. ಹಾಗಾಗಿ ಇದನ್ನು ಗಮನಿಸಲೇಬೇಕು. ಬಸ್ ಚಲಿಸುತ್ತಿರುವಾಗ ಅಥವಾ ಜನದಟ್ಟಣೆಯ ಸಮಯದಲ್ಲಿ ಡಿಜಿಟಲ್ ಪಾವತಿ ಮಾಡುವಾಗ ಎಚ್ಚರ ವಹಿಸುವುದು ಅಗತ್ಯವಾಗಿರುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ