ಹಣ ಡಬಲ್ ಮಾಡಿಕೊಡುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ ಸೆರೆ; 20 ಕೋಟಿ ಮೊತ್ತದ ನಕಲಿ ನೋಟು, 2 ಕಾರುಗಳು ವಶಕ್ಕೆ
ನಕಲಿ ನೋಟಿನ ಕಂತೆ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಹೂಡಿಕೆದಾರರಿಗೆ ತೋರಿಸಿ ಆಫರ್ ನೀಡುತ್ತಿದ್ದ ಆರೋಪಿಗಳು, ಕೆಲವೇ ದಿನಗಳಲ್ಲಿ ಹಣ ಡಬಲ್ ಮಾಡಿಕೊಡುವುದಾಗಿ ಹೇಳುತ್ತಿದ್ದರು. ಇದನ್ನು ನಂಬಿ ಹೂಡಿಕೆದಾರರು ಹಣ ಕೊಡಲು ಹೋದಾಗ ಕಸಿದು ಪರಾರಿಯಾಗುತ್ತಿದ್ದರು.
ಬೆಂಗಳೂರು: ಹಣ ಡಬಲ್ ಮಾಡಿಕೊಡುವುದಾಗಿ ವಂಚಿಸುತ್ತಿದ್ದ ಗುಂಪನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು(Karnataka Police) ಬಂಧಿಸಿದ್ದಾರೆ. ನಟರಾಜ್, ಬಾಲಾಜಿ, ವೆಂಕಟೇಶ, ರಾಕೇಶ್ ಬಂಧಿತ ಆರೋಪಿಗಳು. ನಕಲಿ ನೋಟಿನ ಕಂತೆ ಮೊಬೈಲ್‌ನಲ್ಲಿ(Mobile) ವಿಡಿಯೋ ಮಾಡಿ ಹೂಡಿಕೆದಾರರಿಗೆ ತೋರಿಸಿ ಆಫರ್ ನೀಡುತ್ತಿದ್ದ ಆರೋಪಿಗಳು, ಕೆಲವೇ ದಿನಗಳಲ್ಲಿ ಹಣ(Money) ಡಬಲ್ ಮಾಡಿಕೊಡುವುದಾಗಿ ಹೇಳುತ್ತಿದ್ದರು. ಇದನ್ನು ನಂಬಿ ಹೂಡಿಕೆದಾರರು ಹಣ ಕೊಡಲು ಹೋದಾಗ ಕಸಿದು ಪರಾರಿಯಾಗುತ್ತಿದ್ದರು. ಸದ್ಯ ಆರೋಪಿಗಳಿಂದ 20 ಕೋಟಿ ಮೊತ್ತದ ನಕಲಿ ನೋಟು, 2 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು. ಸೈಟ್ ತೋರಿಸ್ತೀನಿ ಅಂತ ಕಿಡ್ನಾಪ್ ಮಾಡಿ ಹೆದರಿಸಿ 10 ಲಕ್ಷ ತಗೊಂಡು ಹೋಗಿದ್ದರು. ನಟರಾಜ್ ಎಂಬಾತ ಗುಂಪು ಕಟ್ಟಿಕೊಂಡು ಕೃತ್ಯ ಮಾಡಿದ್ದ. ಆರೋಪಿಗಳು ಸಿಕ್ಕ ಬಳಿಕ ನಕಲಿ ನೋಟು ಜಾಲ ಪತ್ತೆ ಆಗಿದೆ. ಬ್ಯಾಗ್ ಮೇಲ್ಬಾದಲ್ಲಿ ಒರಿಜಿನಲ್ ನೋಟು ಇಡುತ್ತಿದ್ದರು. ಕೆಳಗಡೆ ನಕಲಿ ನೋಟು ಇಟ್ಟು ಕೋಟ್ಯಾಂತರ ರೂಪಾಯಿ ಹಣ ಇದೆ ಅಂತ ನಂಬಿಸುತ್ತಿದ್ದರು. ಒಂದು ಲಕ್ಷ ಕೊಟ್ಟರೇ ಒಂದು ವಾರದಲ್ಲಿ ಎರಡು ಲಕ್ಷ ಕೊಡ್ತೀವಿ ಅಂತ ಹಣ ಪಡೀತಾ ಇದ್ರು. ಸಾಕಷ್ಟು ಬಿಸಿನೆಸ್ ಇದೆ ಹಣ ಹೂಡಿಕೆ ಮಾಡಿ ಅಂತ ಹಣ ಪಡೀತಾ ಇದ್ರು ಎಂದು ಡಿಸಿಪಿ ಅನೂಪ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಇದರ ಜೊತೆಗೆ ಒಂದು ಲಕ್ಷ ಹಣ ಕೊಟ್ಟರೇ 3ರಿಂದ 5 ಲಕ್ಷ ನಕಲಿ ನೋಟು ಸಹ ನೀಡುತ್ತಿದ್ದರು. ಮೂವಿ ಶೂಟಿಂಗ್ಗೆ ಬಳಸೋ ನೋಟುಗಳು ಸಿಕ್ಕಿದೆ. ತನಿಖೆ ಮುಂದುವರೆದಿದೆ. ಕೆಲವರಿಗೆ ಕೋಟಾ ನೋಟು ಕೊಡೊದಾಗಿ ಸಹ ಹೇಳಿ ವಂಚನೆ ಮಾಡಿರುವ ಅನುಮಾನ ಇದೆ. ಈ ಬಗ್ಗೆ ಸಹ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ನ್ಯಾಯಮೂರ್ತಿಗಳ ಭೇಟಿ
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ವರದಿ ಟಿವಿ9ನಲ್ಲಿ ಪ್ರಕಟವಾದ ಹಿನ್ನೆಲೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ನ್ಯಾಯಮೂರ್ತಿಗಳು ಭೇಟಿಯಾಗಿದ್ದಾರೆ. ಹೈಕೋರ್ಟ್ನ ನ್ಯಾ.ಬಿ.ವೀರಪ್ಪ, ನ್ಯಾ.ದಿನೇಶ್ ಕುಮಾರ್ ಸೆಂಟ್ರಲ್ ಜೈಲಿಗೆ ಭೇಟಿಯಾಗಿದ್ದಾರೆ. ಜೈಲಿನ ಅಧಿಕಾರಿಗಳಿಂದ ನ್ಯಾಯಮೂರ್ತಿಗಳು ವರದಿ ಪಡೆಯುತ್ತಿದ್ದು, ಪರಿಶೀಲನೆ ನಡೆಸಿದ್ದಾರೆ. ದುಡ್ಡು ಕೊಟ್ಟರೆ ಜೈಲಿನಲ್ಲಿ ಏನುಬೇಕಾದರೂ ಸಿಗುತ್ತೆ ಎಂದು ಟಿವಿ9 ವರದಿ ವೀಕ್ಷಿಸಿದ ಬಳಿಕ ಜೈಲಿಗೆ ನ್ಯಾಯಮೂರ್ತಿಗಳು ಭೇಟಿ ನೀಡಿದ್ದಾರೆ.
ಸೆಲೆಬ್ರೆಟಿಗಳಿಗೂ ಮಾದಕ ಲೋಕಕ್ಕೂ ನಿಲ್ಲದ ನಂಟು
ಸೆಲೆಬ್ರೆಟಿಗಳಿಗೆ ಮಾದಕ ವಸ್ತು ಮಾರಟ ಮಾಹಿತಿ ಹಿನ್ನಲೆ ಇಬ್ಬರು ವಿದೇಶಿಗಳನ್ನು ಗೊವಿಂದಪುರ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತು ಮಾರಟ ಮಾಡುತಿದ್ದ ವಿದೇಶಿಗರಿಂದ 3 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಕ್ಸ್ಟಸ್ ಹುಚಿಕ್, ಹೆನ್ರಿ ಬಂಧಿತ ಆರೋಪಿಗಳು. ಸೆಲೆಬ್ರಿಟಿಗಳು, ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳಿಗೆ ಮಾರಟ ಮಾಡುತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 1.5 ಕೆಜಿ ಎಂಡಿಎಂಎ ಕ್ರಿಸ್ಟಲ್, 120 ಗ್ರಾಂ ಕಪ್ಪು ಎಂಡಿಎಂಎ, 165 ಕೆಜಿ 2 ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ವಾಟರ್ ಮಿಕ್ಸ್ ಎಂಡಿಎಂಎ, 300 ಗ್ರಾಂ ವೀಡ್ ಆಯಿಲ್ ಹಾಗೂ ಒಂದು ಕಾರ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಹಿನ್ನಲೆ ಉತ್ತಮ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಿಗೆ ರಿವಾರ್ಡ್ ನೀಡಲಾಗಿದೆ. ನಗರ ಪೊಲೀಸ್ ಆಯುಕ್ತರಿಂದ 70 ಸಾವಿರ ರಿವಾರ್ಡ್ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಪ್ರಕರಣ; ಎಎಸ್ಐ ಉಮೇಶಯ್ಯ ಅಪರಾಧಿ ಎಂದು ಕೋರ್ಟ್ ತೀರ್ಪು
ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ! ಹೆಚ್ಚು ಜನರಿರುವ ಸಮಯ ನೋಡಿ ಜೆರಾಕ್ಸ್ ನೋಟು ಕೊಟ್ಟು ಮೋಸ
Published On - 1:52 pm, Sat, 29 January 22