ಬೆಂಗಳೂರು: ಅತ್ತೆ ಮನೆಯಲ್ಲಿ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಕೊಪಗೊಂಡು ಅತ್ತಿಗೆ ಗಂಡನಿಗೆ ಚಾಕು ಇರಿದ (knife attack) ಘಟನೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ನಡೆದಿದೆ. ಜ.15ರಂದು ಹಳೇ ಬೈಯಪ್ಪನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಆರೋಪಿ ಸುನಿಲ್ನನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು (Karnataka police) ಬಂಧಿಸಿದ್ದಾರೆ (Arrest). ರಾಕೇಶ್ ಎಂಬಾತನಿಗೆ ಚಾಕು ಇರಿದಿದ್ದ ಆತನ ನಾದಿನಿಯ ಗಂಡ ಸುನೀಲ್, ಅತ್ತೆ ಮನೆಯಲ್ಲಿ ತನಗಿಂತಲೂ ರಾಕೇಶನಿಗೆ ಮರ್ಯಾದೆ ಜಾಸ್ತಿ ಎಂದು ರೊಚ್ಚಿಗೆದ್ದಿದ್ದ. ಜ.15ರಂದು ರಾಕೇಶ್ ಪತ್ನಿಯೊಂದಿಗೆ ತನ್ನ ಬರ್ತ್ ಡೇ ಸಂಭ್ರಮದಲ್ಲಿದ್ದ. ಈ ವೇಳೆ ಬಾಬು ಎಂಬಾತನ ಜೊತೆ ಏಕಾಏಕಿ ರಾಕೇಶ್ ಮನೆಗೆ ಬಂದು ಸುನಿಲ್ ಕಿರಿಕ್ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ರಾಕೇಶ್ ಹೊಟ್ಟೆಗೆ ಚಾಕು ಇರಿದು ಸುನಿಲ್ ಪರಾರಿಯಾಗಿದ್ದ.
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿ ರಾಕೇಶ್ ಆಸ್ಪತ್ರೆಗೆ ದಾಖಲಾಗಿದ್ದ. ಸುನಿಲ್ ವಿರುದ್ಧ ಬೈಯ್ಯಪ್ಪನಹಳ್ಳಿ ಠಾಣೆಗೆ ರಾಕೇಶ್ ಪತ್ನಿ ಜ್ಯೋತಿಕಾ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಇಂದು ಆರೋಪಿ ಸುನಿಲ್ ಅನ್ನು ಬಂಧಿಸಿದ್ದಾರೆ.
ಮನೆಗಳವು ಮಾಡುತ್ತಿದ್ದ ಓರ್ವ ಹಾಗೂ ವಾಹನಗಳವು ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ
ಚಂದ್ರಾಲೇಔಟ್ ಪೊಲೀಸರ ಕಾರ್ಯಾಚರಣೆ ವೇಳೆ ಮನೆಗಳವು ಮಾಡುತ್ತಿದ್ದ ಓರ್ವ ಹಾಗೂ ವಾಹನಗಳವು ಮಾಡುತ್ತಿದ್ದ ಮೂವರು ಆರೋಪಿಗಳು ಸೆರೆಸಿಕ್ಕಿದ್ದಾರೆ. ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವೆಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ದ್ವಿಚಕ್ರವಾಹನ ಹಾಗೂ ಆಟೋ ಕಳ್ಳತನ ವೆಸಗುತ್ತಿದ್ದ ಆರೋಪಿಗಳ ಬಂಧನ. ಸದ್ಯ ಬಂಧಿತರಿಂದ 4.50 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, 5 ಲಕ್ಷ ಮೌಲ್ಯದ 6 ದ್ವಿಚಕ್ರವಾಹನ ಒಂದು ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರವಾರ: ಅಕ್ರಮ ಮದ್ಯದ ಅಡ್ಡೆ ಹುಡುಕಿ ಗ್ರಾಮದ ಮಹಿಳೆಯರಿಂದ ನಾಶ
ಪೊಲೀಸರು, ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆ ಅಕ್ರಮ ಮದ್ಯದ ಅಡ್ಡೆ ಹುಡುಕಿ ಗ್ರಾಮದ ಮಹಿಳೆಯರು ನಾಶ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಕೋಳಿಕೇರಿಯ ದೇಶಪಾಂಡೆ ನಗರದಲ್ಲಿ ನಡೆದಿದೆ. ಅಕ್ರಮ ಮದ್ಯದ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಮಾಹಿತಿ ನೀಡಿದರು ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಮಹಿಳೆಯದರು ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.
ನೆಲಮಂಗಲ: ಕಾರು-ಲಾರಿ ನಡುವೆ ಅಪಘಾತ; ಸ್ಥಳದಲ್ಲೇ ಒರ್ವ ಸಾವು,ಮೂವರ ಸ್ಥಿತಿ ಗಂಭೀರ
ಬೆಂಗಳೂರು: ನೆಲಮಂಗಲದ ಬಿನ್ನಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿಗೆ ಕಾರು ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಲಗ್ಗೆರೆ ನಿವಾಸಿ ಮುಷಾಪೀರ್(14) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಭತ್ತ ಕಟಾವು ಮಾಡುವ ಯಂತ್ರ ಕದ್ದಿದ್ದ ಆರೋಪಿ ಬಂಧನ; 25 ಲಕ್ಷ ರೂ. ಮೌಲ್ಯದ ಯಂತ್ರ ಪೊಲೀಸ್ ವಶಕ್ಕೆ
ಕುಲ್ಗಾಂವ್ನಲ್ಲಿ ಭದ್ರತಾ ಪಡೆಗಳು-ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ; ಪೊಲೀಸ್ ಹುತಾತ್ಮ, ಉಗ್ರ ಸಾವು
Published On - 7:16 pm, Mon, 17 January 22