ಶಿವಮೊಗ್ಗ: ಚಾಕು ಇರಿದು ಪರಾರಿಯಾದ ಆರೋಪಿಗಳನ್ನು ಬೆನ್ನಟ್ಟಿ ಹಿಡಿದ ಪೊಲೀಸರು; ಐವರ ವಿರುದ್ಧ ಎಫ್ಐಆರ್ ದಾಖಲು
ಕಾಲುವೆಗೆ ಹಾರಿ ಪರಾರಿಯಾಗಿದ್ದ ಕುಖ್ಯಾತ ದರೋಡೆಕೋರ ಆನಂದ ಮತ್ತು ನಾಲ್ವರು ಸಹಚರರನ್ನು ಬಂಧಿಸಿದ್ದಾರೆ. ಕರ್ಫ್ಯೂ ನಡುವೆ ವಿನೋಬನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಶಿವಮೊಗ್ಗದ: ಚಾಕು ಇರಿದು ಪರಾರಿಯಾದ ಆರೋಪಿಗಳನ್ನು (Accuse) ಪೊಲೀಸರು ಬೆನ್ನಟ್ಟಿ ಹಿಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಶರಾವತಿನಗರದ ತುಂಗಾ ಕಾಲುವೆ ಬಳಿ ನಡೆದಿದೆ. ಕಳೆದ ವಾರ ಬಿಹಾರದ ಕಾರ್ಮಿಕರಾದ ಮಿಥುನ್, ಅನಿಲ್ ಮೇಲೆ ದಾಳಿ ಮಾಡಿ, ಚಾಕು ಇರಿದು 13 ಸಾವಿರ ರೂಪಾಯಿ ನಗದು ಮತ್ತು ಮೊಬೈಲ್ ಕಸಿದು ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನು ವಿನೋಬನಗರ ಠಾಣೆ ಪೊಲೀಸರು (Karnataka police) ಬೆನ್ನಟ್ಟಿದ್ದು, ಕಾಲುವೆಗೆ ಹಾರಿ ಪರಾರಿಯಾಗಿದ್ದ ಕುಖ್ಯಾತ ದರೋಡೆಕೋರ ಆನಂದ ಮತ್ತು ನಾಲ್ವರು ಸಹಚರರನ್ನು ಬಂಧಿಸಿದ್ದಾರೆ. ಕರ್ಫ್ಯೂ (Weekend curfew) ನಡುವೆ ವಿನೋಬನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ದರೋಡೆಕೋರ ಆನಂದನನ್ನು ಮಲ್ಲಪ್ಪ, ಸುರೇಶ್ ಬೆನ್ನಟ್ಟಿ ಹಿಡಿದಿದ್ದಾರೆ.
ಕೊಪ್ಪಳ: ವೀಕೆಂಡ್ ಕರ್ಫ್ಯೂ ಮಧ್ಯೆ ಅಕ್ರಮವಾಗಿ ಕೋಳಿ ಜೂಜಾಟ
ವೀಕೆಂಡ್ ಕರ್ಫ್ಯೂ ಮಧ್ಯೆ ಅಕ್ರಮವಾಗಿ ಕೋಳಿ ಜೂಜಾಟ ನಡೆಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು ಕ್ಯಾಂಪಿನಲ್ಲಿ ಕೋಳಿ ಜೂಜಾಟದಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಳ್ಳೂರು ಕ್ಯಾಂಪಿನ ಹೊರವಲಯದಲ್ಲಿ ಕೋಳಿ ಜೂಜಾಟ ನಡೆಯುತ್ತಿದೆ. ಕೊರೊನಾ ಮೂರನೇ ಅಲೆಯ ಆತಂಕ ಮರೆತು ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಜೂಜಾಟದಲ್ಲಿ ಜನರು ಭಾಗಿಯಾಗಿದ್ದಾರೆ.
ಯಾದಗಿರಿ: ಭೇಟಿಯಾಗಲು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ
ಭೇಟಿಯಾಗಲು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಬಿಯರ್ ಬಾಟಲಿಯಿಂದ ಮಲ್ಲಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ಬೊಮ್ಮನಹಳ್ಳಿಯಲ್ಲಿ ಮಹಿಳೆ ಮೇಲೆ ವೆಂಕಪ್ಪನಿಂದ ಹಲ್ಲೆ ನಡೆದಿದೆ. 3 ಮಕ್ಕಳ ತಾಯಿ ಮಲ್ಲಮ್ಮ ಹಿಂದೆ ಬಿದ್ದಿದ್ದ ವೆಂಕಪ್ಪ, ಭೇಟಿಯಾಗುವಂತೆ ಪಟ್ಟು ಹಿಡಿದಿದ್ದ ಎಂದು ತಿಳಿದುಬಂದಿದೆ. ಭೇಟಿಯಾಗಲು ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ. ಗಾಯಾಳು ಮಲ್ಲಮ್ಮಗೆ ಶಹಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯ: ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಪೊಲೀಸರಿಂದ ದೌರ್ಜನ್ಯ
ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಪೊಲೀಸರಿಂದ ದೌರ್ಜನ್ಯ ಎಸಗಿದ ಘಟನೆ ಮಂಡ್ಯ ನಗರದ ಸಂಜಯ್ ಸರ್ಕಲ್‌ನಲ್ಲಿ ನಡೆದಿದೆ. ಕೊವಿಡ್ ಕೇರ್ ಸೆಂಟರ್‌ನಿಂದ ತಂದೆಯನ್ನ ಕರೆತರುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ತಂದೆಯನ್ನು ಕರೆತರುತ್ತಿದ್ದ ವೇಳೆ ವ್ಯಕ್ತಿಯ ದ್ವಿಚಕ್ರ ವಾಹನ ತಡೆದಿದ್ದ ಪೊಲೀಸರು ಪ್ರಶ್ನಿಸಿದ್ದಾರೆ. ಆಗ ಅವರು ಕೊವಿಡ್ ಕೇರ್ ಸೆಂಟರ್‌ನಿಂದ ಬರುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿ ಬಿಡುವಂತೆ ಕೇಳಿದ್ದಾರೆ. ಆದರೂ ಪಕ್ಕದಲ್ಲಿ ನಿಲ್ಲುವಂತೆ ಬೈಕ್ ಸವಾರನಿಗೆ ಸೂಚನೆ ಕೊಟ್ಟಿದ್ದಾರೆ. ಈ ವೇಳೆ ಪೊಲೀಸರನ್ನು ಪ್ರಶ್ನೆ ಮಾಡಿದ್ದ ಬೈಕ್ ಸವಾರ, ದೊಡ್ಡವರನ್ನು ಬಿಟ್ಟು ಕಳಿಸುತ್ತೀರಿ, ನಮ್ಮನ್ನ ಏಕೆ ಬಿಡಲ್ಲ ಎಂದು ಕೇಳಿದ್ದಾರೆ. ನಮ್ಮಂತಹವರಿಗೆ ಏಕೆ ಹೀಗೆ ಮಾಡುತ್ತೀರಿ ಎಂದು ಗರಂ ಆಗಿದ್ದಾರೆ. ಇದಕ್ಕೆ ಪ್ರತಿಯಾಗಿ ಸವಾರನನ್ನು ಠಾಣೆಗೆ ಕರೆದೊಯ್ದ ಪೊಲೀಸರು ಸವಾರನ ತಂದೆಯನ್ನು ರಸ್ತೆಯಲ್ಲೇ ಬಿಟ್ಟಿದ್ದಾರೆ. ಪೊಲೀಸರ ಕೃತ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಅಕ್ಕನ ಸಂಸಾರ ಸರಿ ಮಾಡಲು ದರೋಡೆ ಸ್ಕೆಚ್, ತಾನೇ ಖಾರದಪುಡಿ ಎರಚಿಕೊಂಡು ಹೈಡ್ರಾಮಾ ಮಾಡಿದ ಕಿಲಾಡಿ ಅರೆಸ್ಟ್
Crime News: ಹಿಟಾಚಿ ಹರಿದು ಮಗು ಮೃತ್ಯು, ಮನೆಗೆಲಸದ ಯುವತಿ ಅನುಮಾನಾಸ್ಪದ ಸಾವು, ಮೂವರು ದರೋಡೆಕೋರರ ಬಂಧನ
Published On - 3:34 pm, Sun, 16 January 22