AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಜ್ಯೋತಿಷಿ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ಪ್ರಕರಣ; ದರೋಡೆಗೆ ಸುಪಾರಿ ನೀಡಿದ್ದ ಜ್ಯೋತಿಷಿ ಮಹಿಳಾ ಪಿಎ ಅರೆಸ್ಟ್!

ಜ್ಯೋತಿಷಿ ಪಿಎ ಮೇಘನಾ ತಮಿಳುನಾಡಿನ ಮೂವರಿಗೆ ಸುಪಾರಿ ನೀಡಿದ್ದಳು. ಮೇಘನಾ ಜು.10ರಂದು ಜ್ಯೋತಿಷಿ ಜೊತೆ ಕಚೇರಿಯಲ್ಲಿದ್ದಳು. ಈ ವೇಳೆ ಆಕೆ ಕಳುಹಿಸಿದ್ದ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು.

ಬೆಂಗಳೂರಿನಲ್ಲಿ ಜ್ಯೋತಿಷಿ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ಪ್ರಕರಣ; ದರೋಡೆಗೆ ಸುಪಾರಿ ನೀಡಿದ್ದ ಜ್ಯೋತಿಷಿ ಮಹಿಳಾ ಪಿಎ ಅರೆಸ್ಟ್!
ಜ್ಯೋತಿಷಿ ಪ್ರಮೋದ್, ನಾಲ್ವರು ದುಷ್ಕರ್ಮಿಗಳ ಚಲನವಲನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
TV9 Web
| Edited By: |

Updated on:Jul 13, 2022 | 9:48 AM

Share

ಬೆಂಗಳೂರು: ಜ್ಯೋತಿಷಿ (Astrologer) ಪ್ರಮೋದ್ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ್ದ (Robbery) ಆರೋಪಿಗಳನ್ನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕಿಂಗ್ ಪಿನ್ ಮಹಿಳೆಯೊಬ್ಬಳು ಭಾಗಿಯಾಗಿರುವುದು ತಿಳಿದುಬಂದಿದೆ. ಜ್ಯೋತಿಷಿ ಮನೆ ದರೋಡೆಗೆ ಸುಪಾರಿ ನೀಡಿದ್ದ ಮೇಘನಾ ಮತ್ತು ದರೋಡೆ ಮಾಡಿದ್ದ ಗ್ಯಾಂಗ್ನ ಪೊಲೀಸರು ತಮಿಳುನಾಡಿನ ಸೇಲಂನಲ್ಲಿ ಬಂಧಿಸಿ ಕರೆತಂದಿದ್ದಾರೆ. ಮೇಘನಾ ಜ್ಯೋತಿಷಿ ಪಿಎ ಆಗಿ ಕೆಲಸ ಮಾಡಿಕೊಂಡಿದ್ದಳು. ಸಾಲ ನೀಡದಿದ್ದಕ್ಕೆ ಜ್ಯೋತಿಷಿ ಸುಲಿಗೆಗೆ ಪ್ಲ್ಯಾನ್ ಮಾಡಿದ್ದಳು. ಅದರಂತೆ ಮೂವರಿಗೆ ಸುಪಾರಿ ನೀಡಿದ್ದಳು.

ಜ್ಯೋತಿಷಿ ಪಿಎ ಮೇಘನಾ ತಮಿಳುನಾಡಿನ ಮೂವರಿಗೆ ಸುಪಾರಿ ನೀಡಿದ್ದಳು. ಮೇಘನಾ ಜು.10ರಂದು ಜ್ಯೋತಿಷಿ ಜೊತೆ ಕಚೇರಿಯಲ್ಲಿದ್ದಳು. ಈ ವೇಳೆ ಆಕೆ ಕಳುಹಿಸಿದ್ದ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ಮೇಘನಾಳ ಕೈಕಾಲು ಕಟ್ಟಿ ಜ್ಯೋತಿಷಿ ಪ್ರಮೋದ್ಗೆ ಥಳಿಸಿದ್ದರು. ಹಲ್ಲೆ ಮಾಡಿ ಮನೆಯಲ್ಲಿದ್ದ 250 ಗ್ರಾಂ ಚಿನ್ನಾಭರಣ, 5 ಲಕ್ಷ ನಗದು ದೋಚಿದ್ದರು. ಬಳಿಕ ಬೆಂಗಳೂರಿನ ಮನೆಯೊಂದರಲ್ಲಿ ಚಿನ್ನಾಭರಣ ಬಚ್ಚಿಟ್ಟಿದ್ದರು. ಪೊಲೀಸರು ಬಂದಾಗಲೂ ಏನೂ ಆಗದಂತೆ ಮೇಘನಾ ನಟಿಸಿದ್ದಳು. ಬಳಿಕ ಮೇಘನಾ ಮತ್ತು ಆಕೆ ಟೀಂ ಸೇಲಂಗೆ ಪರಾರಿಯಾಗಿತ್ತು.

ಇದನ್ನೂ ಓದಿ: ‘ಸಾರಿ ಕರ್ಮ ರಿಟರ್ನ್ಸ್​’: 11 ವರ್ಷದಲ್ಲಿ ರಾಗಿಣಿ ದ್ವಿವೇದಿ ತೆಗೆದುಕೊಂಡ ರಿಸ್ಕ್​ ಏನು?

ಇದನ್ನೂ ಓದಿ
Image
Sexual Abuse: ಲೈಂಗಿಕ ದೌರ್ಜನ್ಯಕ್ಕೆ ಹುಡುಗಿಯರ ಫ್ಯಾಷನ್ ಕಾರಣ; ಇದು ಬೆಂಗಳೂರಿನ ಬಹುತೇಕ ಪೋಷಕರ ಅಭಿಪ್ರಾಯ
Image
ಸುಳ್ಳು ಹೇಳಿ ಮುಸ್ಲಿಮರ ಬಗ್ಗೆ ದ್ವೇಷ, ಭಯ ಹುಟ್ಟಿಸಬೇಡಿ; ಬಿಜೆಪಿ ಸರ್ಕಾರದ ವಿರುದ್ಧ ಓವೈಸಿ ಆಕ್ರೋಶ
Image
‘ಸಾರಿ ಕರ್ಮ ರಿಟರ್ನ್ಸ್​’: 11 ವರ್ಷದಲ್ಲಿ ರಾಗಿಣಿ ದ್ವಿವೇದಿ ತೆಗೆದುಕೊಂಡ ರಿಸ್ಕ್​ ಏನು?
Image
ಸಿದ್ದರಾಮೋತ್ಸವಕ್ಕೆ ಡಿ.ಕೆ.ಶಿವಕುಮಾರ್ ಬೆಂಬಲಿಗರಿಂದ ಟಕ್ಕರ್: ಶಿವಕುಮಾರೋತ್ಸವ ಮಾಡುವಂತೆ ಸಿದ್ದರಾಮಯ್ಯಗೆ ಪತ್ರ

ಆರೋಪಿಗಳು ಜ್ಯೋತಿಷ್ಯ ಕೇಳುವ ನೆಪದಲ್ಲಿ ಜುಲೈ 10ಕ್ಕೆ ಮನೆಗೆ ಬಂದಿದ್ದರು. ಈ ವೇಳೆ ಜ್ಯೋತಿಷಿ ಪ್ರಮೋದ್ ಮೇಲೆ ಮಾರಣಾಂತಿಕ ಹಲ್ಲೆಗೈದು ದರೋಡೆ ಮಾಡಿದ್ದರು. ನಾಲ್ವರು ದುಷ್ಕರ್ಮಿಗಳ ಚಲನವಲನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು.

ಮಾದಕ ದಂಧೆಕೋರರನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಜನ: ಮಾದಕ ದಂಧೆಕೋರರನ್ನ ಹಿಡಿದು ಸ್ಥಳೀಯರು ಬೆಂಗಳೂರಿನ ಕೆ.ಆರ್.ಪುರಂ ಪೊಲೀಸರಿಗೊಪ್ಪಿಸಿದ್ದಾರೆ. K.R.ಪುರಂ, ಟಿ.ಸಿ.ಪಾಳ್ಯದಲ್ಲಿ ಮಾದಕ ದಂಧೆಕೋರರ ಹಾವಳಿ ಜೋರಾಗಿತ್ತು. ಖಾಲಿ ಸೈಟ್​ಗಳಲ್ಲಿ ಮಾದಕವಸ್ತು ಇಟ್ಟು ಲೊಕೇಷನ್ ಶೇರ್ ಮಾಡುತ್ತಿದ್ದರು. ನಿನ್ನೆ ರಾತ್ರಿ ಮಾದಕವಸ್ತು ತೆಗೆದುಕೊಳ್ಳಲು ಬಂದಾಗ ​10ಕ್ಕೂ ಹೆಚ್ಚು ಆರೋಪಿಗಳನ್ನ ಹಿಡಿದು ಜನ ಪೊಲೀಸರಿಗೊಪ್ಪಿಸಿದ್ದಾರೆ. ಈವರೆಗೆ 25ಕ್ಕೂ ಹೆಚ್ಚು ಪೆಡ್ಲರ್​​ಗಳು ಪೊಲೀಸರ ವಶದಲ್ಲಿದ್ದಾರೆ.

Published On - 9:36 am, Wed, 13 July 22

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ