ಉದ್ಯಮಿ ಶ್ರೀನಿವಾಸ್​ ನಾಯ್ಡು ಕಾರಿಗೆ ಬೆಂಕಿ ಪ್ರಕರಣ; ಮುತ್ತಪ್ಪ ರೈ ಮಗ ಸೇರಿ 8 ಜನರ ವಿರುದ್ಧ ಚಾರ್ಜ್​ಶೀಟ್

ಉದ್ಯಮಿ ಶ್ರೀನಿವಾಸ್ ನಾಯ್ಡುಗೆ ಸೇರಿದ ಕೋಟ್ಯಾಂತರ ರೂ ಬೆಲೆ ಬಾಳುವ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿ ನಾಶ ಮಾಡಲಾಗಿತ್ತು. ಈ ಸಂಬಂಧ ಪ್ರಕರಣದಲ್ಲಿ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮತ್ತು ಆತನ ತಂಡದ ಸದಸ್ಯರ ಮೇಲೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಉದ್ಯಮಿ ಶ್ರೀನಿವಾಸ್​ ನಾಯ್ಡು ಕಾರಿಗೆ ಬೆಂಕಿ ಪ್ರಕರಣ; ಮುತ್ತಪ್ಪ ರೈ ಮಗ ಸೇರಿ 8 ಜನರ ವಿರುದ್ಧ ಚಾರ್ಜ್​ಶೀಟ್
ಆಯೇಷಾ ಬಾನು

Updated on: May 23, 2023 | 10:21 AM

ಬೆಂಗಳೂರು: ಉದ್ಯಮಿ ಶ್ರೀನಿವಾಸ್​ ನಾಯ್ಡು(Srinivas Naidu) ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಸದಾಶಿವನಗರ ಠಾಣೆ ಪೊಲೀಸರು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಮುತ್ತಪ್ಪ ರೈ ಮಗ ರಿಕ್ಕಿ ರೈ(Rikki Rai) ಸೇರಿದಂತೆ 8 ಜನರ ಮೇಲೆ ಪ್ರಕರಣ ಸಂಬಂಧ 188 ಪುಟಗಳ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. ಆರೋಪಿಗಳಾದ ರಿಕ್ಕಿ ರೈ, ನಾರಾಯಣಸ್ವಾಮಿ, ಅಭಿನಂದನ್​, ಮುನಿಯಪ್ಪ,ಗಣೇಶ್​​, ಶಶಾಂಕ್​, ನಿರ್ಮಲ್​​, ರೋಹಿತ್​​, ರಾಕೇಶ್​​ ಸೇರಿ 8 ಜನರ ಹೆಸರುಗಳನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

2021ರ ಅಕ್ಟೋಬರ್‌ನಲ್ಲಿ ಸದಾಶಿವನಗರದ ಸಪ್ತಗಿರಿ ಅಪಾರ್ಟ್ಮೆಂಟ್‌ನಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಡುಗೆ ಸೇರಿದ ಕೋಟ್ಯಾಂತರ ರೂ ಬೆಲೆ ಬಾಳುವ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿ ನಾಶ ಮಾಡಲಾಗಿತ್ತು. ಈ ಸಂಬಂಧ ಪ್ರಕರಣದಲ್ಲಿ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮತ್ತು ಆತನ ತಂಡದ ಸದಸ್ಯರ ಮೇಲೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: 13 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು, 7000 ಪಡೆಯುವಾಗ ತಗ್ಲಾಕೊಂಡ ಪೊಲೀಸ್ ಕಾನ್ಸಟೇಬಲ್

ರಿಕ್ಕಿ ರೈ ಮತ್ತು ಶ್ರೀನಿವಾಸ್ ನಾಯ್ಡು ಇಬ್ಬರೂ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಮಾಜಿ ಡಾನ್ ಮುತ್ತಪ್ಪ ರೈ ನಿಧನದ ನಂತರ ರೈ ಗ್ರೂಪ್‌ನಿಂದ ಶ್ರೀನಿವಾಸ್ ನಾಯ್ಡು ಹೊರ ಬಂದಿದ್ದರು. ನಾಯ್ಡು ಹೊರ ಬಂದಿದ್ದಕ್ಕೆ ರಿಕ್ಕಿ ರೈಗೆ ಕೋಪ ಬಂದಿತ್ತು, ದ್ವೇಷ ಹುಟ್ಟಿಕೊಂಡಿತ್ತು. ಹೀಗಾಗಿ ಶ್ರೀನಿವಾಸ್ ನಾಯ್ಡು ಬಳಸುತ್ತಿದ್ದ ಬ್ಲಾಕ್ ಕಲರ್ ರೇಂಜ್ ರೋವರ್ ಕಾರನ್ನು ನೋಡಿದ ರಿಕ್ಕಿ ರೈ ಘಟನೆಗೂ ಮೂರು ತಿಂಗಳು ಮೊದಲು ಶ್ರೀನಿವಾಸ್ ನಾಯ್ಡುಗೆ ವಾರ್ನ್ ಮಾಡಿದ್ದ. ಈ ಕಾರಲ್ಲಿ ಓಡಾಡಿಕೊಂಡು ನನ್ನ ಮುಂದೆ ಎಷ್ಟು‌ ದಿನ ಮೆರೆಯುತ್ತೀಯಾ ಮೆರಿ. ಎಷ್ಟು ದಿನ ಈ ಕಾರಲ್ಲಿ ಓಡಾಡ್ತಿಯಾ ನೋಡ್ತೀನಿ. ‌ಈ ಕಾರನ್ನು ಬೂದಿ ಮಾಡ್ತೀನಿ ಎಂದು ಹೇಳಿದ್ದ.

ಅದರಂತೆ ನಾರಾಯಣ ಸ್ವಾಮಿ ಎಂಬಾತನ ಮೂಲಕ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದು ಮೊದಲಿಗೆ ಶ್ರೀನಿವಾಸ್ ನಾಯ್ಡು ಸ್ನೇಹಿತ ಸುಪ್ರೀತ್‌ ಮೇಲೆ ಹಲ್ಲೆ ನಡೆಸಿ ಬಳಿಕ ಶ್ರೀನಿವಾಸ್ ನಾಯ್ಡು ಫ್ಲ್ಯಾಟ್‌ಗೆ ನುಗ್ಗಿ ಹಲ್ಲೆಗೆ ಯತ್ನಿಸಲಾಗಿತ್ತು. ಈ ಪ್ಲಾನ್ ಮಿಸ್ ಆದಾಗ ಕಾರಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬುಲೆಟ್ ಮತ್ತು ಕಾರಿನಿಂದ ಪೆಟ್ರೋಲ್ ಎಳೆದಿದ್ದ ಆರೋಪಿಗಳು ಕಾರಿಗೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us