ಕಿಡ್ನ್ಯಾಪ್ ಮಾಡಿ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಅರೆಸ್ಟ್!
ಬಂಧಿತ ಆರೋಪಿಗಳು ಸಾಯಿ ಫುಡ್ ಪ್ರೈವೇಟ್ ಲಿಮಿಟೆಡ್ನ ಒಂದು ವಾಹನ ಹಾಗು ಇಬ್ಬರು ನೌಕರರನ್ನು ಕಿಡ್ನ್ಯಾಪ್ ಮಾಡಿದ್ದರು. ಸಾಯಿ ಫುಡ್ ವಾಹನವನ್ನು ಅಡ್ಡಹಾಕಿ ಲೋನ್ ಕಟ್ಟಬೇಕು ಅಂತ ಹೇಳಿ ಇಬ್ಬರು ಸಿಬ್ಬಂದಿಯನ್ನ ಕರೆದುಕೊಂಡು ಹೋಗುತ್ತಾರೆ.
ಬೆಂಗಳೂರು: ಕಿಡ್ನ್ಯಾಪ್ (Kidnap) ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್ ಚಾನಲ್ವೊಂದರ ವರದಿಗಾರ ಸಂತೋಷ್, ರೌಡಿಶೀಟರ್ ಕುಳ್ಳ ರಮೇಶ್, ದುರ್ಗೇಶ್, ಹರೀಶ್, ವಿವೇಕ್, ಅರವಿಂದ್ ಬಂಧಿತ ಆರೋಪಿಗಳು. ಲೋನ್ ಕಟ್ಟಬೇಕು ಅಂತ ಹೇಳಿ ಇಬ್ಬರನ್ನು ಕಿಡ್ನ್ಯಾಪ್ ಮಾಡಿದ್ದ ಅರೋಪಿಗಳು ಸುಮಾರು ಇಪ್ಪತ್ತು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸದ್ಯ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಸಾಯಿ ಫುಡ್ ಪ್ರೈವೇಟ್ ಲಿಮಿಟೆಡ್ನ ಒಂದು ವಾಹನ ಹಾಗು ಇಬ್ಬರು ನೌಕರರನ್ನು ಕಿಡ್ನ್ಯಾಪ್ ಮಾಡಿದ್ದರು. ಸಾಯಿ ಫುಡ್ ವಾಹನವನ್ನು ಅಡ್ಡಹಾಕಿ ಲೋನ್ ಕಟ್ಟಬೇಕು ಅಂತ ಹೇಳಿ ಇಬ್ಬರು ಸಿಬ್ಬಂದಿಯನ್ನ ಕರೆದುಕೊಂಡು ಹೋಗುತ್ತಾರೆ. ನಂತರ ಕಂಪನಿ ಮಾಲೀಕ ಶ್ರೀನಿವಾಸ್ಗೆ ಹಣ ಕೊಡಿ. ಇಲ್ಲದಿದ್ದರೆ ವಾಹನ ಹಾಗು ನೌಕರರನ್ನು ಬಿಡುವುದಿಲ್ಲ ಅಂತ ಹೆದರಿಸುತ್ತಾರೆ. ಗಾಬರಿಯಾಗಿದ್ದ ಮಾಲೀಕ ಶ್ರೀನಿವಾಸ್ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ದೂರು ನೀಡಿದರು.
ಪೊಲೀಸರಿಗೆ ದೂರು ನೀಡಿರುವುದು ತಿಳಿಯುತ್ತಿದ್ದಂತೆ ಮೆಜೆಸ್ಟಿಕ್ ಬಳಿ ಸಿಬ್ಬಂದಿಯನ್ನು ಬಿಟ್ಟು ಆರೋಪಿಗಳು ಪರಾರಿಯಾಗುತ್ತಾರೆ. ಆದರೆ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಖಾಕಿಪಡೆ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿಸಿದ ಬಳಿಕ ಕೆಲ ಮಾಹಿತಿಗಳು ಬಯಲಿಗೆ ಬಂದಿದೆ. ಅರೋಪಿಗಳು ಮೊದಲು ಮಾಡಿದ್ದ ಪ್ಲಾನ್ ಬೇರೆ, ಆಗಿದ್ದೆ ಬೇರೆಯಾಗಿತ್ತು. ಫುಡ್ ಕಂಪನಿಗೆ ಬ್ಲ್ಯಾಕ್ಮೇಲ್ ಮಾಡುವುದಕ್ಕೆ ಮೊದಲು ಪ್ಲ್ಯಾನ್ ಮಾಡಿದ್ದರು. ಅವಧಿ ಮುಗಿದ ಆಹಾರ ಪದಾರ್ಥವನ್ನು ಮಾರಾಟ ಮಾಡುತ್ತೀರಾ ಅಂತ ಆರೋಪಿಸಿ ಫುಡ್ ಕಂಪನಿ ಮಾಲೀಕನಿಗೆ ಬೆದರಿಸಲು ಯೋಚಿಸಿದ್ದರು. ಆದರೆ ಇದು ಸಾಧ್ಯವಾಗದ ಕಾರಣ ಕಿಡ್ನ್ಯಾಪ್ ಮಾಡಿದ್ದಾರೆ ಅಂತ ತಿಳಿದುಬಂದಿದೆ.
ಇದನ್ನೂ ಓದಿ
ಜಮೀನಿನ ಬೌಂಡರಿ ಲೈನ್ ಫಿಕ್ಸ್ ಮಾಡಲು 70 ಲಕ್ಷ ಲಂಚಕ್ಕೆ ಬೇಡಿಕೆ: ಎಸಿಬಿ ದಾಳಿ, ಹಿರಿಯ ರೆವೆನ್ಯೂ ಅಧಿಕಾರಿ ಅರೆಸ್ಟ್
(Police have arrested the accused for kidnapping and demanding Rs 20 lakh in Bengaluru)