ಬೆಂಗಳೂರು, ಜೂ.16: ತೈಲ ದರ ಏರಿಕೆ(petrol and diesel price) ವಿರುದ್ಧ ರಾಜ್ಯದೆಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದು, ಕಿವಿಯಲ್ಲಿ ದಾಸವಾಳ ಹಾಗೂ ಕೈಯಲ್ಲಿ ತೆಂಗಿನ ಚಿಪ್ಪು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ರಾಜ್ಯದ ಜನರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆಯಿದೆ. ಹೌದು, ಓಲಾ-ಉಬರ್ ಹಾಗೂ ಹೋಟೆಲ್ ಮಾಲೀಕರೂ ಬೆಲೆ ಏರಿಕೆಗೆ ಚಿಂತನೆ ನಡೆಸಿದ್ದಾರೆ.
ರಾಜ್ಯ ಸರ್ಕಾರದ ನಡೆಗೆ ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದು, ಆಹಾರದ ಬೆಲೆ ಏರಿಕೆಯ ಬಗ್ಗೆ ಪ್ಲಾನ್ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ರಾಜ್ಯ ಹೋಟೆಲ್ ಮಾಲೀಕರ ಸಂಘಟನೆಯ ರಾಜ್ಯಧ್ಯಕ್ಷ ಚಂದ್ರಶೇಖರ್ ಹೆಬ್ಬಾರ, ‘ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದು, ಒಂದು ತಿಂಗಳ ಬಳಿಕ ಸಾಧಕ ಬಾಧಕ ನೋಡಿ ಬೆಲೆ ಏರಿಕೆಯ ಕುರಿತು ಪ್ಲಾನ್ ಮಾಡುತ್ತೇವೆ. ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಪರೋಕ್ಷ ಬಿಸಿ ತಟ್ಟುತ್ತೆ. ತರಕಾರಿ, ಗೂಡ್ಸ್ ಸೇರಿದ್ದಂತೆ ಸಾರಿಗೆ ವೆಚ್ಚ ಹೆಚ್ಚಾಗುತ್ತದೆ.
ಸರ್ಕಾರ ಉಚಿತ ಸ್ಕೀಂ ಬಗ್ಗೆ ನಾವು ಮಾತನಾಡಲ್ಲ, ಆದ್ರೆ, ಸರ್ಕಾರ ಈ ಸಮಯದಲ್ಲಿ ಹೀಗೆ ಮಾಡಬಾರದು ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ದರ ಏರಿಕೆ: ಕಿವಿಗೆ ಹೂ, ಕೈಯಲ್ಲಿ ಚಿಪ್ಪು ಹಿಡಿದು ಸರ್ಕಾರದ ವಿರುದ್ಧ ಸಿಟಿ ರವಿ ಪ್ರತಿಭಟನೆ
ಇನ್ನು ಈ ಕುರಿತು ಓಲಾ- ಉಬರ್ ಮಾಲೀಕರು ಮತ್ತು ಡ್ರೈವರ್ಸ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷ್ ಮಾತನಾಡಿ, ‘
ಪೆಟ್ರೋಲ್, ಡಿಸೇಲ್ ಮೇಲಿನ ದರ ಏರಿಕೆಯಿಂದ ನಮಗೆ ದೊಡ್ಡ ಮಟ್ಟದಲ್ಲಿ ಎಫೆಕ್ಟ್ ಆಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರಂತರವಾಗಿ ಟೋಲ್ ಮತ್ತು ಹೊಸ ವಾಹನಗಳ ಮೇಲಿನ ದರ ಏರಿಕೆ ಮಾಡುತ್ತಿದೆ. ಸರ್ಕಾರ ವಾಣಿಜ್ಯ ಚಾಲಕರ ಮೇಲೆ ಕರುಣೆ ತೋರಬೇಕು. ದರ ಏರಿಕೆ ಮಾಡುವ ಮುನ್ನ ಚಾಲಕರ ಮತ್ತು ಮಾಲೀಕರ ಬಗ್ಗೆ ಪರಿಶೀಲನೆ ಮಾಡಬೇಕಿತ್ತು ಎಂದರು.
ಇದೀಗ ವಾಣಿಜ್ಯ ವಾಹನಗಳಿಗೆ ಯಾವುದಾದರೂ ರೀತಿಯಲ್ಲಿ ಸರ್ಕಾರ ಸಬ್ಸಿಡಿ ನೀಡಬೇಕು. ವಾಣಿಜ್ಯ ವಾಹನಗಳಿಗೆ ಟ್ಯಾಕ್ಸ್ ನಿಂದ ವಿನಾಯಿತಿ ನೀಡಿ. ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗಿದೆ ಎಂದು ನಾವು ಪ್ರಯಾಣಿಕರ ಬಳಿ ಹೆಚ್ಚಿನ ದರ ವಸೂಲಿ ಮಾಡಿದ್ರೆ, ಪ್ರಯಾಣಿಕರು ಆಟೋ, ಮೆಟ್ರೋ ಮತ್ತು ಬಿಎಂಟಿಸಿ ಬಸ್ ಗಳತ್ತ ಮುಖ ಮಾಡುತ್ತಾರೆ. ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಚಾಲಕರ ಬಗ್ಗೆ ಕರುಣೇ ತೋರಿ ದರವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ