ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ವಾರವಿಡೀ ಪವರ್ ಕಟ್ (Power Cut) ಘೋಷಿಸಲಾಗಿತ್ತು. ಈ ವಾರದ ಆರಂಭದಿಂದಲೇ ಸಿಲಿಕಾನ್ ಸಿಟಿಯಲ್ಲಿ ಮತ್ತೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ. ನಿನ್ನೆ ಕೂಡ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಕರೆಂಟ್ ಇರಲಿಲ್ಲ. ಇಂದು ಬೆಂಗಳೂರಿನ ಬಾಲಾಜಿ ಲೇಔಟ್, ಗೌಡನಪಾಳ್ಯ ಸೇರಿದಂತೆ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ಬಹುತೇಕ ಜನರಿಗೆ ವರ್ಕ್ ಫ್ರಂ ಹೋಂ (Work from Home) ಇರುವುದರಿಂದ ಪವರ್ ಕಟ್ನಿಂದ ಜನರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಮುಂಚಿತವಾಗಿಯೇ ವಿದ್ಯುತ್ ವ್ಯತ್ಯಯದ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ.
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಕರಗಪ್ಪ ಕಾಂಪೌಂಡ್ (2), ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈ.ವಿ. ಅಣ್ಣಯ್ಯ ರಸ್ತೆ, ಕನಕ ಲೇಔಟ್, ಗೌಡನಪಾಳ್ಯ, ಎಸ್9 ಕಚೇರಿ, ರಿಂಗ್ ರಸ್ತೆ, ಯಾರಬ್ ನಗರ ಮುಖ್ಯ ರಸ್ತೆಯಲ್ಲಿ ಪವರ್ ಕಟ್ ಇರಲಿದೆ.
ಬೆಂಗಳೂರಿನ ಉತ್ತರ ವಲಯದಲ್ಲಿ ಇಂದು ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಕರೆಂಟ್ ಇರುವುದಿಲ್ಲ. ಸಿಲಿಕಾನ್ ಸಿಟಿಯ ಬಿ.ಕೆ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ನ್ಯೂ ಬೆಲ್ ರಸ್ತೆ, ಸೀನಪ್ಪ ಲೇಔಟ್, ವೈಷ್ಣವಿ ಲೇಔಟ್, ಸ್ವಿಮ್ಮಿಂಗ್ ಫೂಲ್ ರಸ್ತೆ, ಶ್ರೀ ರಾಮ್ ಅಪಾರ್ಟ್‌ಮೆಂಟ್ ಲೇಔಟ್, ಶ್ರೀನಿಧಿ ಲೇಔಟ್, ಬಾಲಾಜಿ ಲೇಔಟ್ನಲ್ಲಿ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Power Cut: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದಿನಿಂದ 3 ದಿನ ಪವರ್ ಕಟ್