AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕೆದಾಟು ಕುರಿತ ಸಂಸದ ಪ್ರಜ್ವಲ್​ ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಲೋಕಸಭೆ

ಮೇಕೆದಾಟು ಯೋಜನೆಯ ಈಗಿನ ಸ್ಥಿತಿಗತಿಯ ಬಗ್ಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆಗೆ ಪ್ರಶ್ನೆ ಕೇಳಿದ್ದರು. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಲೋಕಸಭೆಯಲ್ಲಿ ಉತ್ತರ ನೀಡಲಾಗಿದೆ.

ಮೇಕೆದಾಟು ಕುರಿತ ಸಂಸದ ಪ್ರಜ್ವಲ್​ ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಲೋಕಸಭೆ
ಪ್ರಜ್ವಲ್ ರೇವಣ್ಣ
TV9 Web
| Updated By: preethi shettigar|

Updated on: Feb 08, 2022 | 10:39 AM

Share

ಬೆಂಗಳೂರು: ಮೇಕೆದಾಟು ಯೋಜನೆಯ ಈಗಿನ ಸ್ಥಿತಿಗತಿಯ ಬಗ್ಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ(prajwal Revanna) ಲೋಕಸಭೆಗೆ ಪ್ರಶ್ನೆ ಕೇಳಿದ್ದರು. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಲೋಕಸಭೆಯಲ್ಲಿ(Lok sabha) ಉತ್ತರ ನೀಡಲಾಗಿದೆ. ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಅಂದಾಜು 65-66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ರಾಜ್ಯದ ಉದ್ದೇಶ. ಆದರೆ ಈ ಯೋಜನೆ ಬಗ್ಗೆ ವಿರೋಧ ಪಕ್ಷಗಳು ಖ್ಯಾತೆ ತೆಗೆದಿವೆ.  ರಾಮನಗರ ಜಿಲ್ಲೆಯ  ಮೇಕೆದಾಟು(Mekedatu) ಅಣೆಕಟ್ಟು ಯೋಜನೆಗೆ ಪರಿಸರ ತೆರವು ವಿಚಾರವಾಗಿ ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನೆ ಮಾಡಿದ್ದರು. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಲೋಕಸಭೆಯಲ್ಲಿ ಕೇಂದ್ರ ಸಚಿವರು ಉತ್ತರ ನೀಡಿದ್ದಾರೆ.

ಪ್ರಜ್ವಲ್​ ರೇವಣ್ಣ ಎತ್ತಿರುವ ಪ್ರಶ್ನೆಗಳೇನು?

ಕರ್ನಾಟಕದಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಪರಿಸರ ಇಲಾಖೆ ಅನುಮೋದಿಸಲಾಗಿದೆಯೇ? ಒಂದು ವೇಳೆ ಅನುಮೋದನೆ ದೊರೆತಿದ್ದಲ್ಲಿ ಅದರ ವಿವರಗಳು ಮತ್ತು ಇಲ್ಲದಿದ್ದರೆ, ಅದಕ್ಕೆ ಕಾರಣಗಳು?

ಅರಣ್ಯ ಪ್ರದೇಶ ಮತ್ತು ಹಳ್ಳಿಗಳ ವಿವರಗಳು, ಈ ಯೋಜನೆಯಿಂದ ನೀರಿನಲ್ಲಿ ಮುಳುಗುವ ಅಥವಾ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆಯೇ? ಈ ಯೋಜನೆ ಎಷ್ಟು ಜನರ ಮೇಲೆ ಪರಿಣಾಮ ಬೀರಲಿದೆ?

ಪರಿಸರ ಇಲಾಖೆ ಅನುಮತಿಯನ್ನು ಅನುಮೋದಿಸುವ ಸಾಧ್ಯತೆಯಿರುವ ಸಮಯ ಮತ್ತು ಮೇಕೆದಾಟುಗೆ ತ್ವರಿತ ಪರಿಸರ ತೆರವಿಗೆ ಸರ್ಕಾರ ಕೈಗೊಂಡ ಕ್ರಮ ಯಾವುದು?

ಲೋಕಸಭೆಯಲ್ಲಿ ನೀಡಿದ ಉತ್ತರ

ಪರಿಸರ ಇಲಾಖೆಯ ಉಲ್ಲೇಖದ ನಿಯಮಗಳ (TOR) ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಮತ್ತು ಇಐಎ(EIA) ಅಧ್ಯಯನಕ್ಕೆ ಸಂಬಂಧಿಸಿದಂತೆ ಕರ್ನಾಟಕದ ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆ, ಪೂರ್ವ ಪರಿಸರ ಅನುಮತಿ (EC) ಪಡೆಯಲು ಸಚಿವಾಲಯಕ್ಕೆ 20.06.2019 ರಂದು ಅರ್ಜಿ ಸಲ್ಲಿಸಲಾಗಿದೆ.

ಇಐಎ ಅಧಿಸೂಚನೆ, 2006 ರ ನಿಬಂಧನೆಗಳ ಅಡಿಯಲ್ಲಿ, ತಿದ್ದುಪಡಿ ಮಾಡಲಾಗಿದೆ. ಪ್ರಸ್ತಾವನೆಯನ್ನು ಪರಿಗಣಿಸಿರುವ ಸಚಿವಾಲಯದ ತಜ್ಞರ ಮೌಲ್ಯಮಾಪನ ಸಮಿತಿ (EC) 25 ನೇ ಇಎಸಿ ಸಭೆಯಲ್ಲಿ ಇಸಿ ಅನುದಾನಕ್ಕಾಗಿ ನದಿ ಕಣಿವೆ ಮತ್ತು ಜಲವಿದ್ಯುತ್ ಯೋಜನೆ  ವ್ಯವಸ್ಥೆಗೆ ಒಪ್ಪಿಗೆ ನೀಡಿದೆ.

19.07.2019 ಯೋಜನಾ ಪ್ರಾಧಿಕಾರವು ಸಲ್ಲಿಸಿದ ಯೋಜನೆಯ ಕಾರ್ಯಸಾಧ್ಯತಾ ವರದಿಯ ಪ್ರಕಾರ ಒಟ್ಟು 4996 ಪ್ರದೇಶದಲ್ಲಿ 440 ಹೆಕ್ಟೇರ್ ಪ್ರದೇಶವು ಮುಳುಗುತ್ತದೆ.

ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು 1869.50 ಹೆಕ್ಟೇರ್ ಮೀಸಲು ಅರಣ್ಯದ ಭಾಗವಾಗಿದೆ. ಇನ್ನೂ ಹಳ್ಳಿ ಪ್ರದೇಶವಾದ ಸಂಗಮ, ಕೊಂಗೆದೊಡ್ಡಿ, ಮದವಾಳ, ಮುತ್ತತ್ತಿ, ಬೊಮ್ಮಸಂದ್ರಪಾಳ್ ಮುಳುಗುತ್ತದೆ.

ಪ್ರಸ್ತಾವಿತ ಯೋಜನೆಯ ಅಂತರ ವಿವರವಾದ ಚರ್ಚೆಯ ನಂತರ ಇಎಸಿ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಅಂತರರಾಜ್ಯ ಸಮಸ್ಯೆಗಳ ದೃಷ್ಟಿಯಿಂದ, ಉಭಯ ರಾಜ್ಯಗಳ ನಡುವೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು.

ಉಳಿದ ಎಲ್ಲಾ ಸಮಸ್ಯೆಗಳ ಪರಿಶೀಲನೆಯ ನಂತರ, ಜಲ ಸಚಿವಾಲಯದೊಂದಿಗೆ ಸಮಾಲೋಚಿಸಿ

ಶಕ್ತಿ (MOJS), ಟರ್ಮ್ಸ್ ಆಫ್ ರೆಫರೆನ್ಸ್ (TOR) ಮಂಜೂರು ಪ್ರಸ್ತಾವನೆಯನ್ನು ಪರಿಗಣಿಸಲು ನಿರ್ಧರಿಸಿದೆ

ಜಲಶಕ್ತಿ ಸಚಿವಾಲಯ (MOJS) ಮತ್ತು ಮೇಕೆದಾಟು ಯೋಜನೆಯ ಕರಡು ಪೂರ್ವಭಾವಿ ವರದಿಯನ್ನು (DPR) ಸ್ವೀಕರಿಸಿದ ನಂತರವೇ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಅನುಮತಿ ಸಿಗಲಿದೆ ಎಂದು ಲೋಕಸಭೆಯಲ್ಲಿ ಉತ್ತರ ನೀಡಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ‌ ಸಭೆ ಆರಂಭ

ಅಂತರಾಜ್ಯ ಜಲವಿವಾದಗಳ ಬಗ್ಗೆ ಚರ್ಚಿಸುವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ‌ ಸಭೆ ಆರಂಭ. ದೆಹಲಿಯ ಕರ್ನಾಟಕ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ವಕೀಲರು, ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಮೇಕೆದಾಟು, ಕೃಷ್ಣಾ, ಮಹಾದಾಯಿ ಸೇರಿದಂತೆ ಅಂತರ ರಾಜ್ಯ ಜಲವಿವಾದಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇನ್ನೂ ನದಿ ಜೋಡಣೆ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ಇದನ್ನೂ ಓದಿ:

ಮಹದಾಯಿ ಯೋಜನೆಗೆ ಕರ್ನಾಟಕ ಅರ್ಜಿಯೇ ಹಾಕಿಲ್ಲ: ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನೆಗೆ ಕೇಂದ್ರ ಉತ್ತರ

ಕೇಂದ್ರ ರಾಜಕೀಯ ಮಾಡಿದ್ರೆ ತಮಿಳುನಾಡಿನಲ್ಲಿ ಕಮಲ ಅರಳಬಹುದು, ಆದ್ರೆ ಕರ್ನಾಟಕದಲ್ಲಿ ಕಮಲ ಮುದುಡಲಿದೆ -ಪ್ರಜ್ವಲ್ ರೇವಣ್ಣ