Power Cut: ಬೆಂಗಳೂರಿನ ಬನಶಂಕರಿ, ವೈಟ್​ಫೀಲ್ಡ್​, ಯಶವಂತಪುರ ಸೇರಿ ಹಲವೆಡೆ ಇಂದು ಕರೆಂಟ್ ಇರಲ್ಲ

Bengaluru Power Cut: ಬೆಂಗಳೂರಿನ ಜಯನಗರ, ಇಸ್ರೋ ಲೇಔಟ್, ಬನಶಂಕರಿ, ಕತ್ರಿಗುಪ್ಪೆ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ವೈಟ್‌ಫೀಲ್ಡ್ ಏರಿಯಾಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.

Power Cut: ಬೆಂಗಳೂರಿನ ಬನಶಂಕರಿ, ವೈಟ್​ಫೀಲ್ಡ್​, ಯಶವಂತಪುರ ಸೇರಿ ಹಲವೆಡೆ ಇಂದು ಕರೆಂಟ್ ಇರಲ್ಲ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 05, 2022 | 6:02 AM

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಇಂದು (ಫೆ. 5) ಮತ್ತು ನಾಳೆ (ಫೆ. 6) ಪವರ್ ಕಟ್ ಇರಲಿದೆ. ಇನ್ನೆರಡು ದಿನ ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ಬೆಂಗಳೂರಿನ ಜಯನಗರ, ಇಸ್ರೋ ಲೇಔಟ್, ಬನಶಂಕರಿ, ಕತ್ರಿಗುಪ್ಪೆ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ವೈಟ್‌ಫೀಲ್ಡ್ ಏರಿಯಾಗಳಲ್ಲಿ ಇಂದು ಕರೆಂಟ್ (Power Cut) ಇರುವುದಿಲ್ಲ.

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಆರ್ ರಸ್ತೆ, ಜಯನಗರ 8ನೇ ಬ್ಲಾಕ್, ವಿನಾಯಕನಗರ, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಜೆಪಿ ನಗರ 1ನೇ ಹಂತ, ಸಾರಕ್ಕಿ ಮಾರುಕಟ್ಟೆ, ತ್ಯಾಗರಾಜನಗರ ಮುಖ್ಯರಸ್ತೆ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಬಡಾವಣೆ, ಬನಶಂಕರಿ 3ನೇ ಬ್ಲಾಕ್ ಪೀಡಿತ ಪ್ರದೇಶಗಳು. ಅಚ್ಚುಕಟ್ಟು, ಕತ್ರಿಗುಪ್ಪೆ, ಕಾಕತಿಯನಗರ, ಮಾರತಹಳ್ಳಿ, ಹೊಂಗಸಂದ್ರ, ಬೊಮ್ಮನಹಳ್ಳಿ, ಸಂತೃಪ್ತಿ ನಗರ, ನೃಪತುಂಗನನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೋಗೂರಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪ್ರಕಾಶನಗರ, ರಾಮಮೋಹನಪುರ, ವೈಯಾಲಿಕಾವಲ್, ಯಶವಂತಪುರ, ಮಾಡೆಲ್ ಕಾಲೋನಿ, ಗುರುಮೂರ್ತಿ ರೆಡ್ಡಿ ಕಾಲೋನಿ, ಅಂಬೇಡ್ಕರ್ ನಗರ, ಪೈಪ್ ಲೈನ್ ರಸ್ತೆ, ನ್ಯೂ ಬಿಇಎಲ್ ರಸ್ತೆ, ಆದಿತ್ಯ ನಗರ, ಎಂಎಸ್ ಪಾಳ್ಯ, ಅಕ್ಷಯನಗರ, ದೊಡ್ಡಬೆಟಹಳ್ಳಿ, ತಿಂಡ್ಲು ಮುಖ್ಯರಸ್ತೆ, ರಾಘವೇಂದ್ರ ಬಿ ಕಾಲೋನಿ, ಕೆ.ಈ.ಡಿ.ಬಿ. ನಗರ, ಜಕ್ಕೂರು ಮುಖ್ಯ ರಸ್ತೆ ಮತ್ತು ಕಲಾಸ್ತ್ರೀನಗರದಲ್ಲಿ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಸ್ತೂರಿ ನಗರ, ಟಿಸಿ ಪಾಳ್ಯ ರಸ್ತೆ, ಆರ್‌ಕೆ ಮಠದ ರಸ್ತೆ, ಹಲಸೂರು ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬೆಳ್ಳಾಳಿ ಗ್ರಾಮ, ಕಾಫಿ ಬೋರ್ಡ್ ಲೇಔಟ್, ಅಂಬೇಡ್ಕರ್ ನಗರ ಗುಟ್ಟ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಗುಂಜೂರು, ಗುಂಜೂರು ಮುಖ್ಯರಸ್ತೆ, ಅಯ್ಯಪ್ಪನಗರ, ಗೋಕುಲ ವಿಸ್ತರಣೆ ಮತ್ತು ಹೂಡಿಯಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸುಬ್ಬಣ್ಣ ಗಾರ್ಡನ್, ವಿಎಚ್‌ಬಿಸಿಎಸ್, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಕಿರ್ಲೋಸ್ಕರ್ ಕಾಲೋನಿ 1 ನೇ ಹಂತ, ಹಾವನೂರು ವೃತ್ತ, ಮಂಜುನಾಥನಗರ, ಶಾರದ ಕಾಲೋನಿ, ಮೀನಾಕ್ಷಿನಗರ, ಸುಂಕದಕಟ್ಟೆ, ರಾಜೀವ್ ಗಾಂಧಿ ನಗರ, ಬೈರವೇಶ್ವರ ನಗರ, ಪ್ರಶಾಂತ ನಗರ, ಮುದಲಪಾಳ್ಯ, ಮುದಲಪಾಳ್ಯ ಉಳ್ಳಾಲ ನಗರ, ದೊಡ್ಡ ಬಸ್ತಿ ಮುಖ್ಯರಸ್ತೆ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾಬಸ ರಸ್ತೆ ಮತ್ತು ಭವಾನಿನಗರದಲ್ಲಿ ಪವರ್ ಕಟ್ ಇರಲಿದೆ.

ಫೆಬ್ರವರಿ 6ರಂದು ಪವರ್ ಕಟ್ ಇರುವ ಏರಿಯಾಗಳು: ಬೆಂಗಳೂರಿನ ದಕ್ಷಿಣ ವಲಯದಲ್ಲಿ ಜೆಸಿ ಇಂಡಸ್ಟ್ರಿಯಲ್ ಲೇಔಟ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಉತ್ತರ ವಲಯದ ಅಬ್ಬಿಗೆರೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸುಬ್ಬಣ್ಣ ಗಾರ್ಡನ್, ವಿಎಚ್‌ಬಿಸಿಎಸ್ ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಕಿರ್ಲೋಸ್ಕರ್ ಕಾಲೋನಿ 1 ನೇ ಹಂತ, ಹಾವನೂರು ವೃತ್ತ, ಮಂಜುನಾಥನಗರದ ಕೆಲವು ಭಾಗಗಳು, ಬಸವೇಶ್ವರ ನಗರದ ಕೆಲವು ಭಾಗಗಳು, ಶಾರದ ಕಾಲೋನಿ, ಮೀನಾಕ್ಷಿನಗರ, ಸುಂಕದಕಟ್ಟೆ, ರಾಜೀವ್ ನಗರ, ಬೈರವೇಶ್ವರ ನಗರ, ಟಿ.ಜಿ.ಪಾಳ್ಯ, ವಿಘ್ನೇಶ್ವರ ನಗರ ಮತ್ತು ವೀರಭದ್ರೇಶ್ವರ ನಗರದಲ್ಲಿ ನಾಳೆ ಕರೆಂಟ್ ಇರುವುದಿಲ್ಲ.

ಇದನ್ನೂ ಓದಿ: Power Cut: ಬೆಂಗಳೂರಿನ ಬನಶಂಕರಿ, ಸದಾಶಿವನಗರ ಸೇರಿ ಬಹುತೇಕ ಏರಿಯಾಗಳಲ್ಲಿ ಇಂದು ಪವರ್ ಕಟ್

Power Cut: ಬೆಂಗಳೂರಿನ ಪದ್ಮನಾಭನಗರ, ಡಾಲರ್ಸ್​ ಕಾಲೋನಿ ಸೇರಿ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ