Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇನ್ನೆರಡು ದಿನ ಪವರ್ ಕಟ್

| Updated By: ಸುಷ್ಮಾ ಚಕ್ರೆ

Updated on: Feb 03, 2022 | 6:06 AM

Bengaluru Power Cut: ಬೆಂಗಳೂರಿನಲ್ಲಿ ಕೆಲವು ಸಮಯಗಳಿಂದ ಪದೇಪದೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಇದೀಗ ಇನ್ನೆರಡು ದಿನ ಮತ್ತೆ ಕರೆಂಟ್ ಇರುವುದಿಲ್ಲ.

Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇನ್ನೆರಡು ದಿನ ಪವರ್ ಕಟ್
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಿಸ ಬೇಕಾ, ಬೇಡವಾ? ಇಂದಿನಿಂದ ಗ್ರಾಹಕರ ಅಹವಾಲು ಸ್ವೀಕರಿಸಲಿದೆ KERC
Follow us on

ಬೆಂಗಳೂರು: ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ (ಶುಕ್ರವಾರ) ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತಿಳಿಸಿದೆ. ಕೇಬಲ್ ಕನ್ವರ್ಷನ್ ಮತ್ತು ಇತರ ನಿರ್ವಹಣಾ ಕಾರ್ಯಗಳಿಂದಾಗಿ ವಿದ್ಯುತ್ ಅಡಚಣೆಗಳು ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಿಸಿದೆ. ಬೆಂಗಳೂರಿನ (Bangalore) ಅಂಜನಾಪುರ ಕೈಗಾರಿಕಾ ಪ್ರದೇಶ, ಬಾಲಾಜಿ ಲೇಔಟ್ ಸೇರಿದಂತೆ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ (Power Cut) ಇರಲಿದೆ. ಬೆಂಗಳೂರಿನಲ್ಲಿ ಕೆಲವು ಸಮಯಗಳಿಂದ ಪದೇಪದೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಇದೀಗ ಇನ್ನೆರಡು ದಿನ ಮತ್ತೆ ಕರೆಂಟ್ ಇರುವುದಿಲ್ಲ.

ಇಂದು (ಗುರುವಾರ) ಬೆಂಗಳೂರಿನ ವಿರಾಟ್ ನಗರ, ಬಾಲಾಜಿ ಲೇಔಟ್, ಗಾಣಿಗರಪಾಳ್ಯ, ವಾಜರಹಳ್ಳಿ, ಖೋಡೇಸ್-ಪೈಪ್‌ಲೈನ್ ರಸ್ತೆ, ನಾಗೇಗೌಡನ ಪಾಳ್ಯ, ಬಾಂಬೆ ಫ್ಯಾಕ್ಟರಿ, ಕಾಫಿ ಪೌಡರ್ ಫ್ಯಾಕ್ಟರಿ, ಅಂಜನಾಪುರ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ನಾಳೆ (ಶುಕ್ರವಾರ) ಬೆಂಗಳೂರಿನ ಗೊಲ್ಲಹಳ್ಳಿ ಶಾಸಕ ಬಡಾವಣೆ, ನೈಸ್ ರಸ್ತೆ ಸೇತುವೆ, ಚೌಡೇಶ್ವರಿ ಲೇಔಟ್, ಚಾಮುಂಡೇಶ್ವರಿ ಲೇಔಟ್, ರಾಘವನಪಾಳ್ಯ, ವಸಂತವಲ್ಲಭ ನಗರ, ಕೊತ್ತನೂರು ಗ್ರಾಮ, ನಾಗನಾಥಪುರ, ಪರಪ್ಪನ ಅಗ್ರಹಾರ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇದನ್ನೂ ಓದಿ: Power Cut: ಬೆಂಗಳೂರಿನ ಶ್ರೀನಗರ, ಬನಶಂಕರಿ, ಪೀಣ್ಯ ಸೇರಿ ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರೋದಿಲ್ಲ

Power Cut: ಬೆಂಗಳೂರಿನ ಹನುಮಂತನಗರ, ಬನಶಂಕರಿ, ಕೆಂಗೇರಿ ಹಲವೆಡೆ ಇಂದು ಪವರ್ ಕಟ್