2022ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ, ಟಿವಿ9ಗೆ ಪ್ರಶಸ್ತಿಯ ಗರಿ, ಖರ್ಗೆಗೆ ವರ್ಷದ ವ್ಯಕ್ತಿ ಪ್ರಶಸ್ತಿ
ಬೆಂಗಳೂರು ಪ್ರೆಸ್ ಕ್ಲಬ್ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ ಈ ಕೆಳಗಿನಂತಿದೆ,
ಬೆಂಗಳೂರು : 2022ನೇ ಸಾಲಿನ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಪ್ರಶಸ್ತಿ (Bangalore Press Club Awards 2022) ಪ್ರಕಟವಾಗಿದೆ. ಟಿವಿ9 ಸುದ್ದಿವಾಹಿನಿಯ (TV9 Kannada ) ಔಟ್‌ಪುಟ್ ಎಡಿಟರ್ ವೈ.ಎಂ.ನಾಗಭೂಷಣ್ ಹಾಗೂ ಚೀಫ್ ಎಕ್ಸಿಕೂಟಿವ್ ಪ್ರೊಡ್ಯೂಸರ್ ವಿಲಾಸ್ ನಾಂದೋಡ್ಕರ್ ಸೇರಿದಂತೆ ಒಟ್ಟು 33 ಜನರು 2022ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಬೆಂಗಳೂರು ಪ್ರೆಸ್ ಕ್ಲಬ್ನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.
2022ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿಗೆ 33 ಜನರನ್ನು ಆಯ್ಕೆ ಮಾಡಲಾಗಿದೆ. ಪ್ರೆಸ್ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಆಯ್ಕೆ ಮಾಡಿದ್ರೆ, ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ವಿಶೇಷ ಪ್ರಶಸ್ತಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಆಯ್ಕೆಯಾಗಿದ್ದಾರೆ. ಡಿಸೆಂಬರ್ 31ರಂದು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ.
ಪ್ರೆಸ್ ಕ್ಲಬ್ ವಾರ್ಷಿಕ ವಿಶೇಷ ಪುರಸ್ಕೃತರ ಪಟ್ಟಿ ಇಂತಿದೆ
* ಬಸವರಾಜು, * ಹನುಮೇಶ್ ಯಾವಗಲ್, * ಹೆಚ್.ಎಸ್. * ಬಲರಾಂ, * ಅಗ್ರಹಾರ ಕೃಷ್ಣಮೂರ್ತಿ, * ಗಂಗಾಧರ, * ಮೊದಲಿಯಾರ್, * ಚೆನ್ನ ನಾಗರಾಜ್ ಎಂ., * ಶ್ರೀಧರ ಬಿ.ಎನ್, * ವಿನಯ್ .ಎಂ, * ಗೌತಮ್ ಮಾಚಯ್ಯ ಎಂ, * ರಾಜಶೇಖರ್ .ಎಸ್., * ಹೆಚ್. ಮೂರ್ತಿ , * ಸಂಗಮ್ ದೇವ್ ಐ.ಹೆಚ್, * ಮುನೀರ್ ಅಹಮದ್ ಅಬದ್, * ಕೆ.ವಿ. ಪರಮೇಶ್ , * ಸಿ.ಎಸ್. ಬೋಪಯ್ಯ, * ಶ್ಯಾಂ ಬೋಜಕ್, * ಭಾಗ್ಯ ಪ್ರಕಾಶ್ .ಕೆ, * ಅನಿಲ್ ವಿ. ಗೆಜ್ಜೆ, * ಗಾಯತ್ರಿ ನಿವಾಸ್, * ಶಿವಣ್ಣ, * ಶೋಭಾ ಎಂ.ಸಿ, * ದಿವಾಕರ್ .ಸಿ, * ನಾಗಭೂಷಣ್ ಮೈ.ಎಂ, * ವಿಲಾಸ್ ನಂದೂಡಕರ್, * ಇ ನಾಗರಾಜು, * ಪಿ. ರಾಜೇಂದ್ರ, * ಶಿವಾನಂದ ತಗಡೂರು ಟಿ.ವಿ., * ಶಿವಪ್ರಕಾಶ್ .ಎಸ್ , * ಓಂಕಾರ ಕಾಕಡೆ, * ಜಯ ಪ್ರಕಾಶ್ ಆರ್. ನರಸಿಂಹ ರಾವ್, * ರಾಘವೇಂದ್ರ ಕೆ. (ತೋಗರ್ಸಿ), * ಗಿರಿಪ್ರಕಾಶ್ ಕೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:43 pm, Mon, 19 December 22