ಖಾಸಗಿ ಶಾಲೆಗಳ ಫೀಸ್ ಫೈಟ್: ಮುಂದಿನ ಶೈಕ್ಷಣಿಕ ವರ್ಷದ ಕನ್ಪರ್ಮೇಷನ್ ಫೀಸ್ ಕಟ್ಟುವಂತೆ ಪೋಷಕರಿಗೆ ಟಾರ್ಚರ್!

ಶಿಕ್ಷಣ ಸಚಿವರೋ 2 ದಿನದೊಳಗೆ ಸಭೆ ಮಾಡ್ತಿವಿ ಅಂದು ವಾರವೇ ಕಳೆದಿದೆ. ಈಮಧ್ಯೆ ಖಾಸಗಿ ಶಾಲೆಗಳು 2021-2022ನೇ ಸಾಲಿನ ಅಡ್ಮಿಷನ್​ಗೆ ಕನ್ಪರ್ಮೇಷನ್ ಫೀಸ್ ಕಟ್ಟಲು ಟಾರ್ಚರ್ ಮಾಡ್ತಿವೆಯಂತೆ

ಖಾಸಗಿ ಶಾಲೆಗಳ ಫೀಸ್ ಫೈಟ್: ಮುಂದಿನ ಶೈಕ್ಷಣಿಕ ವರ್ಷದ ಕನ್ಪರ್ಮೇಷನ್ ಫೀಸ್ ಕಟ್ಟುವಂತೆ ಪೋಷಕರಿಗೆ ಟಾರ್ಚರ್!
ಸಂಗ್ರಹ ಚಿತ್ರ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Mar 08, 2021 | 10:33 AM

ಬೆಂಗಳೂರು: ಕೊರೊನಾ ಕಂಟಕ ಎದುರಾಗಿರುವ ಸಂದರ್ಭದಲ್ಲೇ ಫೀಸ್ ಕಿರಿಕ್ ಜೋರಾಗಿದೆ. ಈ ವರ್ಷದ ಫೀಸ್ ಅನ್ನೇ ಇನ್ನೂ ಕಟ್ಟೊಕಾಗ್ತಿಲ್ಲ. ಅಂತಹದ್ರಲ್ಲಿ ಮುಂದಿನ ವರ್ಷದ ಫೀಸ್ ಕಟ್ಟಿ ಅನ್ನೋ ಒತ್ತಡ ಹೆಚ್ಚಾಗ್ತಿದೆಯಂತೆ. ಪ್ರಸ್ತುತ ಶೈಕ್ಷಣಿಕ ವರ್ಷದ ಖಾಸಗಿ ಶಾಲೆಗಳ ಶುಲ್ಕ ವಿಚಾರ ಗೊಂದಲದ ಗೂಡಾಗಿದೆ. ಆದೇಶವನ್ನು ಪುನರ್ ಪರಿಶೀಲಿಸಿ ಅಂತಾ ಶಿಕ್ಷಣ ಸಚಿವರಿಗೆ ಖಾಸಗಿ ಶಾಲೆಗಳು ಆಗ್ರಹಿಸಿದ್ರೆ, ಅತ್ತ ಪೋಷಕರು ಯಥಾವತ್ತಾಗಿ ಜಾರಿಗೆ ತನ್ನಿ ಅಂತಿದ್ದಾರೆ. ಈ ಮಧ್ಯೆ ಖಾಸಗಿ ಶಾಲೆಗಳ ಮತ್ತೊಂದು ಮುಖ ಅನಾವರಣವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದ ಕನ್ಪರ್ಮೇಷನ್ ಫೀಸ್ ಕಟ್ಟಿ ಎಂದು ಟಾರ್ಚರ್ ಮಾಡೋಕೆ ಶುರುಮಾಡಿವೆಯಂತೆ.

ಇನ್ನೂ ಬಗೆಹರಿದಿಲ್ಲ ಫೀಸ್ ಫೈಟ್..! ಕೊರೊನಾ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ಜನವರಿಯಿಂದ ಆರಂಭವಾಗಿ ಅದಾಗಲೇ 2 ತಿಂಗಳು ಕಳೆದಿದೆ. ಆದ್ರೆ ಶುಲ್ಕ ವಿಚಾರ ಮಾತ್ರ ಬಗೆಹರಿದಿಲ್ಲ. ಸರ್ಕಾರ ಆದೇಶಿಸಿದ್ರೂ ಖಾಸಗಿ ಶಾಲೆಗಳು ಆದೇಶಕ್ಕೆ ಸೆಡ್ಡು ಹೊಡೆದಿವೆ. ಇದರ ಜೊತೆಗೆ ಆದೇಶ ಪುನರ್ ಪರಿಶೀಲಿಸಿ ಅಂತಿವೆ. ಪೋಷಕರು ಆದೇಶ ಯಥಾವತ್ತಾಗಿ ಜಾರಿಗೆ ತನ್ನಿ ಅಂತಿದ್ದಾರೆ. ಹೀಗಾಗಿ ಶಿಕ್ಷಣ ಸಚಿವರೋ 2 ದಿನದೊಳಗೆ ಸಭೆ ಮಾಡ್ತೀವಿ ಎಂದು ಹೇಳಿ ವಾರವೇ ಕಳೆದಿದೆ. ಈ ಮಧ್ಯೆ ಖಾಸಗಿ ಶಾಲೆಗಳು 2021-2022ನೇ ಸಾಲಿನ ಅಡ್ಮಿಷನ್​ಗೆ ಕನ್ಪರ್ಮೇಷನ್ ಫೀಸ್ ಕಟ್ಟಲು ಟಾರ್ಚರ್ ಮಾಡ್ತಿವೆಯಂತೆ.

ಕನ್ಪರ್ಮೇಷನ್ ಫೀಸ್ ಕಟ್ಟಿ.. 2021-2022 ಅಂದ್ರೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಶಾಲೆಗಳು ಅರ್ಜಿ ಕರೆದಿವೆ. ಅಲ್ಲದೆ ಈ ತಿಂಗಳ 5ರಂದು ಪೋಷಕರಿಗೆ ಡೆಡ್ಲೈನ್ ಕೊಟ್ಟಿವೆ. 5 ರ ಒಳಗಾಗಿ ಮುಂದಿನ ಶೈಕ್ಷಣಿಕ ವರ್ಷದ ಕನ್ಪರ್ಮೇಷನ್ ಫೀಸ್ ಕಟ್ಟಿ ಅಂತಾ ಟಾರ್ಚರ್ ಮಾಡ್ತಿವೆ. ಪೋಷಕರಿಗೆ ಮೇಲ್, ಮೆಸೇಜ್ ಕಾಲ್ ಮೂಲಕ ಕಟ್ಟುವಂತೆ ಒತ್ತಡ ಹಾಕ್ತಿವೆ. ತಡವಾಗಿ ಕಟ್ಟೋದಾದ್ರೆ ಲೇಟ್ ಫೀಸ್ ಅಡಿ ಶುಲ್ಕ ಕಟ್ಟಬೇಕಾಗುತ್ತೆ. ಫೈನ್ ಕಟ್ಟಬೇಕು ಅಂತಾನೂ ವಾರ್ನ್ ಮಾಡ್ತಿದ್ದಾರಂತೆ.

ಶೇಕಡ 15ರಷ್ಟು ಶುಲ್ಕ ಹೆಚ್ಚಿಸುವ ನಿಯಮವಿದೆ.. ಇನ್ನು ಶಿಕ್ಷಣ ಇಲಾಖೆ ಮುಂದಿನ ಕ್ಯಾಲೆಂಡರ್ ಆಫ್ ಇಯರ್ ಘೋಷಣೆ ಮಾಡಿಲ್ಲ. ಜುಲೈನಿಂದ ಮುಂದಿನ ಶೈಕ್ಷಣಿಕ ವರ್ಷ ಎಂದಷ್ಟೇ ಘೋಷಿಸಿದೆ. ಆದ್ರೆ ಖಾಸಗಿ ಶಾಲೆಗಳು ಮಾತ್ರ ಮಾರ್ಚ್ 5ರೊಳಗಾಗಿ ಕನ್ಪರ್ಮೇಷನ್ ಫೀಸ್ ಕಟ್ಟಿ ಅಂತಿರೋದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿವರ್ಷ ಶೇಕಡ 15ರಷ್ಟು ಶುಲ್ಕ ಹೆಚ್ಚಿಸುವ ನಿಯಮವಿದೆ. ಆದ್ರೆ, ಕೊರೊನಾ ಪರಿಸ್ಥಿತಿಯಲ್ಲಿ ಹೆಚ್ಚಿಸುವ ಆಗಿಲ್ಲ. ಆದ್ರೆ ಇದನ್ನೊಪ್ಪದ ಖಾಸಗಿ ಶಾಲೆಗಳ ಒಕ್ಕೂಟ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡ್ತಿದೆ.

ಒಟ್ನಲ್ಲಿ ಶುಲ್ಕ ಕಡಿತದ ಸಮಸ್ಯೆ ಬಗೆಹರಿಯದ ಗೊಂದಲದ ಗೂಡಾಗಿದೆ. ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷದ ಶುಲ್ಕ ವಿಚಾರವನ್ನೇ ಬಗೆಹರಿಸಲು ವಿಫಲವಾಗಿರೋ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇದಕ್ಕೆ ಬ್ರೇಕ್ ಹಾಕ್ತಾರಾ ಅನ್ನೋದೆ ಬಹುದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ:ಖಾಸಗಿ ಶಾಲಾ ಶುಲ್ಕ ಶೇ. 30ರಷ್ಟು ಕಡಿತ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ