TV9 Reality Check: ಬೆಂಗಳೂರಿನಲ್ಲಿ ಸಂಜೆ 7 ಗಂಟೆ ನಂತರ ಬಿಎಂಟಿಸಿ ಬಸ್ಗಳಿಗೆ ಬರ! ಟಿವಿ9 ಕ್ಯಾಮೆರಾದಲ್ಲಿ ಅಸಲಿಯತ್ತು ಬಯಲು
ಜನರು ಕಾಲೇಜು, ಆಫೀಸ್ ಮುಗಿಸಿ ಮನೆಗೆ ಹೋಗುವ ಸಮಯ ಅಂದರೆ ಅದು ಸಂಜೆ ಹೊತ್ತು. ಈ ಸಮಯದಲ್ಲೇ ಬಿಎಂಟಿಸಿ ಬಸ್ಗಳು ಸೇವೆ ನೀಡದೆ ತಮ್ಮ ಪಾಡಿಗೆ ತಾವು ನಿಲ್ಲುತ್ತಿವೆ. ಹೀಗಾಗಿ ಮನೆಗೆ ಹೋಗಲು ಜನರು ಪರದಾಡುತ್ತಿದ್ದಾರೆ.
ಬೆಂಗಳೂರು: ಬೃಹತ್ ನಗರವಾಗಿರುವ ಬೆಂಗಳೂರಿಗೆ ಜನರು ವಿದ್ಯಾಭ್ಯಾಸ, ಕೆಲಸಕ್ಕೆಂದು ಆಗಮಿಸುತ್ತಾರೆ. ಹೀಗೆ ಬೆಂಗಳೂರಿನಲ್ಲಿ (Bengaluru) ಕಾಲೇಜು, ಆಫೀಸಿಗೆ ಹೋಗಲು ಜನರು ಬಿಎಂಟಿಸಿ (BMTC) ಬಸ್ಗಳನ್ನೆ ನಂಬಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಬೇರೆ ಏರಿಕೆಯಾಗಿದೆ. ಇಂಧನ ದರ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಹೀಗಾಗಿ ಬಸ್ಗಳಲ್ಲೆ ಹೋಗುವುದು ಬೆಸ್ಟ್ ಅಂತಾರೆ. ಆದರೆ ಬಡವರ ಬಂಧು ಅಂತ ಅನಿಸಿಕೊಂಡಿದ್ದ ಬಿಎಂಟಿಸಿ ಲಾಭಕ್ಕೆ ಒತ್ತು ಕೊಡುತ್ತಿದೆಯಾ? ಎಂಬ ಅನುಮಾನ ಮೂಡಿದೆ.
ಟಿವಿ9 ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಬಿಎಂಟಿಸಿಗೆ ಸಂಬಂಧಿಸಿದ ಕಟು ಸತ್ಯವೊಂದು ಬಯಲಾಗಿದೆ. ಇದೇನಾ ದೇಶದ ನಂಬರ್ ಓನ್ ಸಾರಿಗೆ ಸಂಸ್ಥೆಯ ಬದ್ಧತೆ? ಪ್ರಯಾಣಿಕರ ಹಿತವೇ ನಮಗೆ ಮುಖ್ಯ ಅಂತಿರೋ ನಿಗಮ, ಹಿತದ ಬದಲು ಲಾಭಕ್ಕೆ ಒತ್ತು ಕೊಡುತ್ತಿದೆಯಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ನಗರದಲ್ಲಿ ಆರೂವರೆ ಸಾವಿರ ಬಿಎಂಟಿಸಿ ಬಸ್ಗಳು ಓಡಾಟ ನಡೆಸುತ್ತವೆ. ಆದರೆ ಸಂಜೆಯಾಗುತ್ತಿದ್ದಂತೆ ತನ್ನ ಕೆಲಸ ನಿಲ್ಲಿಸಿ ಗೂಡು ಸೇರುತ್ತಿವೆ. ಸಂಜೆ 7 ಗಂಟೆಗೆ ಬಿಎಂಟಿಸಿಬಸ್ ಸೇವೆ ಸ್ಥಬ್ಧವಾಗುತ್ತಿದೆ. ಕೊರೊನಾ ಬಳಿಕ ಸಂಜೆಯಾಗುತ್ತಿದ್ದಂತೆ ಬಿಎಂಟಿಸಿ ಬಸ್ಗಳೂ ಸಂಚಾರ ನಡೆಸದೆ ಸ್ಟಾಪ್ ಆಗುತ್ತಿವೆ. ಈ ಎಲ್ಲಾ ದೃಶ್ಯಗಳು ಟಿವಿ9 ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜನರು ಕಾಲೇಜು, ಆಫೀಸ್ ಮುಗಿಸಿ ಮನೆಗೆ ಹೋಗುವ ಸಮಯ ಅಂದರೆ ಅದು ಸಂಜೆ ಹೊತ್ತು. ಈ ಸಮಯದಲ್ಲೇ ಬಿಎಂಟಿಸಿ ಬಸ್ಗಳು ಸೇವೆ ನೀಡದೆ ತಮ್ಮ ಪಾಡಿಗೆ ತಾವು ನಿಲ್ಲುತ್ತಿವೆ. ಹೀಗಾಗಿ ಮನೆಗೆ ಹೋಗಲು ಜನರು ಪರದಾಡುತ್ತಿದ್ದಾರೆ. ಹಗಲು, ರಾತ್ರಿ ಎನ್ನದೆ ಬೆಂಗಳೂರಿನಲ್ಲಿ 24 ಗಂಟೆಯೂ ವಹಿವಾಟು ನಡೆಯುತ್ತದೆ. ಹೀಗಿರುವಾಗ ಸಂಜೆ 7 ರ ಬಳಿಕ ಬಿಎಂಟಿಸಿ ಬಸ್ಗೆ ಬರ ಬಂದತಾಗಿದೆ. ನಷ್ಟದ ನೆಪ ಹೇಳಿ ಬಸ್ ಸಂಖ್ಯೆ ಇಳಿಮುಖ ಮಾಡಿರುವ ಬಿಎಂಟಿಸಿ, ನೌಕರರ ಶಿಫ್ಟ್ ಬದಲಾಯಿಸಿದೆ.
ಸಂಜೆ 7 ರ ಬಳಿಕ ಬಸ್ ಹತ್ತೋಕೆ ಜನರು ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಕೊವಿಡ್ಗೂ ಮೊದಲು ಬಿಎಂಟಿಸಿ ನೌಕರರಿಗೆ 5 ಪಾಳಿ ಇತ್ತು. ಈಗ ಬಿಎಂಟಿಸಿ 5ರಿಂದ 2 ಶಿಫ್ಟ್ಗೆ ಇಳಿಸಿದೆ. ಬೆಳಿಗ್ಗೆ ಪಾಳಿ ಮತ್ತು ಜನರಲ್ ಶಿಫ್ಟ್ ಮುಗಿಸಿ ನೌಕರರು ಮನೆ ಸೇರುತ್ತಾರೆ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಬಸ್ಗಳು ಡಿಪೋ ಸೇರಿಕೊಳ್ಳುತ್ತಿವೆ. ಬಸ್ಗಳ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ. ಜೊತೆಗೆ ಬಿಎಂಟಿಸಿ ವರ್ತನೆಯಿಂದ ಹಿಡಿ ಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ
ಕನ್ನಡ ಬಿಡಿ ಎಂದು ಅಮಿತ್ ಶಾ ಎಲ್ಲಿಯೂ ಹೇಳಿಲ್ಲ; ಸಿದ್ದರಾಮಯ್ಯ ಮಾತಿಗೆ ಸಿ ಟಿ ರವಿ ತಿರುಗೇಟು
Published On - 3:46 pm, Sat, 30 April 22