Bengaluru News: ಚುರುಕುಗೊಂಡ ರಾಜಕಾಲುವೆ ಒತ್ತುವರಿ ತೆರವು ಕಾರ್ಯ: ಅಧಿಕಾರಿಗಳಿಗೆ ಗಡುವು ನೀಡಿದ ಬಿಬಿಎಂಪಿ ಆಯುಕ್ತ

|

Updated on: Jun 16, 2023 | 6:49 PM

ಆಮೆಗತಿಯಲ್ಲಿ ಸಾಗುತ್ತಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಇದೀಗ ವೇಗ ದೊರೆತಿದೆ. 571 ಕಡೆ ಬೆಂಗಳೂರಿನಲ್ಲಿ ಅಕ್ರಮ ಒತ್ತುವರಿ ವರದಿ ಹಿನ್ನಲೆ ಬಿಬಿಎಂಪಿ ಎಚ್ಚುತ್ತುಕೊಂಡಿದ್ದು, 15 ದಿನಗಳ ಒಳಗಾಗಿ ಎಲ್ಲ ಒತ್ತುವರಿ ತೆರವು ಕಾರ್ಯ ಮುಗಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​​ ಸೂಚನೆ ನೀಡಿದ್ದಾರೆ.

Bengaluru News: ಚುರುಕುಗೊಂಡ ರಾಜಕಾಲುವೆ ಒತ್ತುವರಿ ತೆರವು ಕಾರ್ಯ: ಅಧಿಕಾರಿಗಳಿಗೆ ಗಡುವು ನೀಡಿದ ಬಿಬಿಎಂಪಿ ಆಯುಕ್ತ
ರಾಜಾಕಾಲುವೆ
Follow us on

ಬೆಂಗಳೂರು: ಕಳೆದ ವರ್ಷ ಮಳೆಯಿಂದಾಗ ಭಾಗಶಃ ಬೆಂಗಳೂರು (Bengaluru) ಮುಳುಗಡೆ ಹಂತಕ್ಕೆ ತಲುಪಿತ್ತು. ಮನೆಗಳಲ್ಲಿ ನೀರು ಹೊಕ್ಕು ನಿವಾಸಿಗರು ಪರದಾಡಿದರು. ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದರು. ಕೆಲವು ಬಡಾವಣೆಗಳು ಅಕ್ಷರಶಃ ಕೆರೆಯಂತಾಗಿದ್ದವು. ಈ ಸಮಸ್ಯೆಗೆ ಅನೇಕ ಕಾರಣಗಳಲ್ಲಿ ರಾಜಕಾಲುವೆ (Rajakaluve) ಅಕ್ರಮ ಒತ್ತುವರಿಯೂ ಒಂದು ಕಾರಣ ಎಂಬ ಅಂಶ ಬಹಿರಂಗೊಂಡ ಮೇಲೆ ಅಂದಿನ ಬಿಜೆಪಿ (BJP) ಸರ್ಕಾರ ಅಕ್ರಮ ಒತ್ತುವರಿ ತೆರವು ಕಾರ್ಯ ಮಾಡಲು ಆರಂಭಿಸಿತು. ಇದಾದ ನಂತರ ಒತ್ತುವರಿ ತೆರವು ಕಾರ್ಯ ಆಮೆಗತಿಯಲ್ಲಿ ನಡೆದಿದ್ದು, ಇದೀಗ ಇದಕ್ಕೆ ವೇಗ ದೊರೆಯುತ್ತಿದೆ.

ಹೌದು ಕೆಆರ್​​ಪುರಂ ವ್ಯಾಪ್ತಿಯ ಹೊಯ್ಸಳ ನಗರದ ರಾಜಕಾಲುವೆ ಮೇಲೆ ಅಕ್ರಮವಾಗಿ ನಿರ್ಮಾಣವಾಗಿದ್ದ ಕಟ್ಟಡ ಕೌಂಪೌಂಡ್ ಗೊಡೆಯನ್ನು ಮಹಾನಗರ ಪಾಲಿಕೆ ತೆರವು ಮಾಡಿದೆ. ಇಂದು (ಜೂ.16) ಕೆಆರ್​ಪುರಂ ಹಾಗೂ ಮಹಾದೇವಪುರ ವ್ಯಾಪ್ತಿಯಲ್ಲಿ ತೆರವು ಕಾರ್ಯಚರಣೆ ನಡೆದಿದ್ದು, ನಾಳೆಯಿಂದ ವಿವಿಧಡೆ ತೆರವು ಕಾರ್ಯಾಚರಣೆ ನಡೆಯಲಿದೆ.

ಇದನ್ನೂ ಓದಿ: ಬೆಂಗಳೂರಿಗೆ ಜಲಕ್ಷಾಮದ ಭೀತಿ.! ಕೆಆರ್​ಎಸ್​ ಜಲಾಶಯದ ನೀರಿನ ಮಟ್ಟ ಕುಸಿತ‌‌

571 ಕಡೆ ಬೆಂಗಳೂರಿನಲ್ಲಿ ಅಕ್ರಮ ಒತ್ತುವರಿ ವರದಿ ಹಿನ್ನಲೆ ತೆರವು ಕಾರ್ಯ ಆರಂಭವಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ 15 ದಿನಗಳ ಟಾರ್ಗೆಟ್ ನೀಡಿದ್ದಾರೆ. ಈಗಾಗಲೆ ಸಿಲಿಕಾನ್ ಸಿಟಿಯಲ್ಲಿ 100ಕ್ಕೂ ಹೆಚ್ಚು ಕಡೆ ಒತ್ತುವರಿಯನ್ನು ತೆರವು ಮಾಡಲಾಗಿದೆ.

ರಾಜಾಕಾಲುವೆ ಎಂದರೇನು?

ಮಳೆ ನೀರು ಒಂದು ಕರೆಯಿಂದ ಮತ್ತೊಂದು ಕೆರೆಗೆ ಹರಿದು ಹೋಗಲು ಅನುಕೂಲವಾಗುವ ನಿಟ್ಟಿನಲ್ಲಿ ಮಾಡಲಾಗಿರುವ ವ್ಯವಸ್ಥೆ ರಾಜಕಾಲುವೆ. ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 840 ಕಿ. ಮೀ ವ್ಯಾಪ್ತಿಯಲ್ಲಿ ರಾಜಕಾಲುವೆ ಇದೆ. ವೃಷಭಾವತಿ, ಕೋರಮಂಗಳ ಚೆಲ್ಲಘಟ್ಟವ್ಯಾಲಿ ಹಾಗೂ ಹೆಬ್ಬಾಳ ಕಣಿವೆ ಪ್ರಮುಖ ರಾಜಕಾಲುವೆಗಳಾಗಿವೆ. 415 ಕಿ.ಮೀ ಉದ್ದದ ಪ್ರಾಥಮಿಕ ಹಂತದ ಕಾಲುವೆ, 426 ಕಿ.ಮೀ ಉದ್ದದ ದ್ವಿತೀಯ ಹಂತದ ಕಾಲುವೆಯನ್ನು ಹೊಂದಿದೆ.

ನಗರದಲ್ಲಿ ಉಂಟಾಗುವ ಪ್ರವಾಹ ನಿಯಂತ್ರಣ ಮಾಡುವ ಉದ್ದೇಶದಿಂದ 2016ರಲ್ಲಿ ಕಂದಾಯ ಇಲಾಖೆಯಿಂದ ಸಮೀಕ್ಷೆ ಮಾಡಿ 2,626 ಕಡೆ ರಾಜಕಾಲುವೆ ಒತ್ತುವರಿ ಪ್ರಕರಣವನ್ನು ಪತ್ತೆ ಮಾಡಲಾಗಿತ್ತು. ಈ ಪೈಕಿ 2016-17ನೇ ಸಾಲಿನಲ್ಲಿ 428, 2018-19ನೇ ಸಾಲಿನಲ್ಲಿ 1502 ಹಾಗೂ 2020ರಲ್ಲಿ 714 ಒತ್ತುವರಿ ಪ್ರಕರಣ ತೆರವು ಮಾಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ