ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ ಹೇಳಿಕೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​ಗೆ ಲೀಗಲ್ ನೋಟಿಸ್​

ಪಾಕ್ ಅಧಿಕಾರಿಗಳ ಜೊತೆ ಬಿಜೆಪಿ ನಾಯಕ ರಾಮ್ ಮಾಧವ್ ಗೌಪ್ಯ ಸಭೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಬಿಎನ್‌ಎಸ್ ಸೆಕ್ಷನ್ 356ರ ಅಡಿಯಲ್ಲಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಕೊಲಂಬೋ ಹಾಗೂ ಲಂಡನ್​ನಲ್ಲಿ 4 ಸಭೆಗಳನ್ನು ಮಾಡಿದ್ದಾರೆ. ​​ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂಬ ಬಗ್ಗೆ ಅವರು ಸ್ಪಷ್ಟ ಪಡಿಸಬೇಕು ಎಂದು ಹರಿಪ್ರಸಾದ್​​ ಆಗ್ರಹಿಸಿದ್ದರು.

ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ ಹೇಳಿಕೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​ಗೆ ಲೀಗಲ್ ನೋಟಿಸ್​
ಬಿ.ಕೆ.ಹರಿಪ್ರಸಾದ್​​
Image Credit source: Tv9 Kannada
Edited By:

Updated on: Jul 06, 2026 | 3:40 PM

ಮುಖ್ಯಾಂಶಗಳು

  • ರಾಮ್ ಮಾಧವ್ ಹೆಸರಿಗೆ ಕಳಂಕ ತರಲು ಯತ್ನ ಆರೋಪ
  • ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​​ಗೆ ಲೀಗಲ್​​ ನೋಟಿಸ್​​
  • ರಾಮ್ ಮಾಧವ್​ಗೆ ಕ್ಷಮೆ ಕೇಳಬೇಕೆಂದು ನೋಟಿಸ್​ನಲ್ಲಿ ಉಲ್ಲೇಖ

ಬೆಂಗಳೂರು, ಜುಲೈ 06: ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ (KPCC) ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ಗೆ (B K Hariprasad) ಲೀಗಲ್ ನೋಟಿಸ್​ ನೀಡಲಾಗಿದೆ. ರಾಮ್ ಮಾಧವ್ (Ram Madhav) ಹೆಸರಿಗೆ ಕಳಂಕಗೊಳಿಸಲು ಪ್ರಯತ್ನಿಸಿರುವುದಲ್ಲದೆ ಅವರ ಇಮೇಜ್ ಮತ್ತು ಖ್ಯಾತಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಎನ್​ಎಸ್​ ಸೆಕ್ಷನ್ 356ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೆ, ಹರಿಪ್ರಸಾದ್​​ ರಾಮ್ ಮಾಧವ್​ಗೆ ಕ್ಷಮೆ ಕೇಳಬೇಕೆಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಬಿ.ಕೆ. ಹರಿಪ್ರಸಾದ್​ ಏನು ಹೇಳಿದ್ದರು?

GBA ಚುನಾವಣಾ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ಪಾಕ್ ಅಧಿಕಾರಿಗಳ ಜೊತೆ ಗೌಪ್ಯಸಭೆ ನಡೆಸಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದರು. ಕೊಲಂಬೋ ಹಾಗೂ ಲಂಡನ್​ನಲ್ಲಿ 4 ಸಭೆಗಳನ್ನು ಮಾಡಿದ್ದಾರೆ. ​​ಹಿಲ್ಟನ್ ಹೋಟೆಲ್​ನಲ್ಲಿ ರಾಮ್ ಮಾಧವ್ ಸಭೆ ನಡೆಸಿದ್ದಾರೆ. ಪಾಕ್​​ ISI ಮಾಜಿ ಮೇಜರ್ ಜನರಲ್ ಜೊತೆ ರಹಸ್ಯ ಮೀಟಿಂಗ್​​ ನಡೆಸಿದ್ದು, ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂದು ಸ್ಪಷ್ಟ ಪಡಿಸಬೇಕು ಎಂದು ಹರಿಪ್ರಸಾದ್​​ ಆಗ್ರಹಿಸಿದ್ದರು. ಪಾಕ್ ಜೊತೆ ಚರ್ಚಿಸುವಂತೆ RSS​​ ಮುಖ್ಯಸ್ಥ ಮೋಹನ್​​ ಭಾಗವತ್ ಹೇಳಿದ್ದಾರೆ ಅಂತಲೂ ದೂರಿದ್ದರು.

ಇದನ್ನೂ ಓದಿ: ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್

ಆಪರೇಷನ್ ಸಿಂಧೂರ್ ಆಗಿ ಕೆಲ ತಿಂಗಳುಗಳು ಆಗಿಲ್ಲ. ಆಗಲೇ ಲಂಡನ್​​​ಗೆ ಹೋಗಿ ರಾಮ್ ಮಾಧವ್​ 4 ಸಭೆ ನಡೆಸಿದ್ದಾರೆ. ನಾನು ಬಿಜೆಪಿ ನಾಯಕ ರಾಮ್ ಮಾಧವ್​​​​​​ಗೆ ಕೇಳುತ್ತೇನೆ, ನೀವು ಬೆಂಗಳೂರಿಗೆ ಬರುವಾಗ ಇದಕ್ಕೆ ಉತ್ತರ ಕೊಡಬೇಕು. ರಹಸ್ಯ ಸಭೆ ನಡೆಸಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ವಿದೇಶಾಂಗ ಸಚಿವಾಲಯ ಸಭೆ ಮಾಡಬೇಕು. ಇವರು ವಿದೇಶಾಂಗ ಸಚಿವಾಲಯದಲ್ಲಿ ಮಂತ್ರಿ ಕೂಡ ಅಲ್ಲ.
ಎಂಎಲ್ಎ ಅಲ್ಲ, ಎಂಪಿ ಅಲ್ಲ, ಕೇವಲ ಆರ್‌ಎಸ್‌ಎಸ್ ಪ್ರಚಾರಕ. ಹೀಗಿರುವಾಗ ಇವರಿಗೆ ಸಭೆ ಮಾಡೋಕೆ ಅಧಿಕಾರ ಕೊಟ್ಟರು ಯಾರು ಎಂದು ಬಹಿರಂಗಪಡಿಸಲಿ ಎಂದು ಹರಿಪ್ರಸಾದ್​​ ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:33 pm, Mon, 6 July 26

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us