ರೋಡ್ ಹಂಪ್‌ಗಳ ಬಗ್ಗೆ ಸದನದಲ್ಲಿ ವ್ಯಗ್ರರಾದ ಶಾಸಕ ರಮೇಶ್ ಕುಮಾರ್; ಬೇಜವಾಬ್ದಾರಿ ಅಧಿಕಾರಿಗಳ ಸಸ್ಪೆಂಡ್‌ ಮಾಡಿ ಅಂದರು

| Updated By: ಆಯೇಷಾ ಬಾನು

Updated on: Sep 20, 2021 | 12:41 PM

ಹಳ್ಳಿ ರಸ್ತೆಯಿಂದ ಮುಖ್ಯ ರಸ್ತೆಗೆ ಬರಬೇಕಾದ್ರೆ ಹಂಪ್ ಇರಲಿ. ಆದರೆ ಮುಖ್ಯ ರಸ್ತೆಯಲ್ಲಿ ಸ್ಪೀಡ್ ಹಂಪ್‌ಗಳನ್ನು ಹಾಕ್ತಾರೆ. ಬೇಜವಾಬ್ದಾರಿ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಬೇಕು ಎಂದು ರಮೇಶ್ ಕುಮಾರ್ ಪ್ರಶ್ನೆ ಎತ್ತಿದ್ರು.

ರೋಡ್ ಹಂಪ್‌ಗಳ ಬಗ್ಗೆ ಸದನದಲ್ಲಿ ವ್ಯಗ್ರರಾದ ಶಾಸಕ ರಮೇಶ್ ಕುಮಾರ್; ಬೇಜವಾಬ್ದಾರಿ ಅಧಿಕಾರಿಗಳ ಸಸ್ಪೆಂಡ್‌ ಮಾಡಿ ಅಂದರು
ರಮೇಶ್ ​ಕುಮಾರ್
Follow us on

ಬೆಂಗಳೂರು: ಅವೈಜ್ಞಾನಿಕ ರೋಡ್ ಹಂಪ್‌ಗಳು ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಸದನದಲ್ಲಿ ಶಾಸಕ ರಮೇಶ್ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ. ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಹೋಗುವುದಿಲ್ಲ. ಒಬ್ಬ ಜೆಇ, ಇಇ ಯಾರೂ ಸ್ಥಳ ಪರಿಶೀಲನೆ ಮಾಡಲ್ಲ. ಬೇಕಾಬಿಟ್ಟಿಯಾಗಿ ರೋಡ್ ಹಂಪ್‌ಗಳನ್ನ ಹಾಕಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಇಂದು ನಡೆದ ಸದನದಲ್ಲಿ ರಮೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಮಾತನಾಡುತ್ತ ಅವರು, ಹಳ್ಳಿ ರಸ್ತೆಯಿಂದ ಮುಖ್ಯ ರಸ್ತೆಗೆ ಬರಬೇಕಾದ್ರೆ ಹಂಪ್ ಇರಲಿ. ಆದರೆ ಮುಖ್ಯ ರಸ್ತೆಯಲ್ಲಿ ಸ್ಪೀಡ್ ಹಂಪ್‌ಗಳನ್ನು ಹಾಕ್ತಾರೆ. ಬೇಜವಾಬ್ದಾರಿ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಬೇಕು ಎಂದು ರಮೇಶ್ ಕುಮಾರ್ ಪ್ರಶ್ನೆ ಎತ್ತಿದ್ರು. ಇನ್ನು ಈ ವೇಳೆ ರಮೇಶ್ ಕುಮಾರ್ ಪ್ರಶ್ನೆಗೆ ಸ್ಪೀಕರ್ ಪ್ರತಿಕ್ರಿಯೆ ನೀಡಿದ್ರು.

ಎಲ್ಲಾ ಕಡೆ ಸಮಸ್ಯೆ ಇದೆ, ನಾನು ಕೂಡ ಹಂಪ್ ಸಮಸ್ಯೆ ಬಗ್ಗೆ ಕೆಲವು ಅಧಿಕಾರಿಗಳನ್ನು ಕೇಳಿದೆ. ಹಳ್ಳಿ ಜನ, ಶಾಸಕರು ಒತ್ತಾಯ ಮಾಡಿದ್ದಕ್ಕೆ ಹಾಕಿದ್ದೇವೆ ಅಂತಾ ಹೇಳಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರೆಂರು ಸ್ಪೀಕರ್ ಕಾಗೇರಿ ಉತ್ತರಿಸಿದರು.

ಬಳಿಕ ಮತ್ತೆ ಪ್ರಶ್ನೆ ಮಾಡಿದ ಶಾಸಕ ರಮೇಶ್ ಕುಮಾರ್ ಯಾರೋ ಹೇಳಿದ ಮಾತು ಅಧಿಕಾರಿಗಳು ಏಕೆ ಕೇಳಬೇಕು? ಎಂದು ವಿಧಾನಸಭೆಯಲ್ಲಿ ಶಾಸಕ ರಮೇಶ್ ಕುಮಾರ್ ಮರುಪ್ರಶ್ನೆ ಮಾಡಿದ್ದಾರೆ. ನಾನು ನಾಲ್ಕು ಜನರ ತಲೆ ತೆಗೆಯಿರಿ ಅಂತೇನೆ ಕೇಳ್ತಾರಾ ಎಂದು ಅಧಿಕಾರಿಗಳ ಮೇಲೆ ರಮೇಶ್ ಕುಮಾರ್ ಗರಂ ಆಗಿದ್ದಾರೆ.

ಇದಕ್ಕೆ ಬರೀ ಉತ್ತರ‌ಕೊಟ್ಟರೇ ಹೇಗೆ?, ಸಂಜೆಯೊಳಗೆ ಅಧಿಕಾರಿಗಳನ್ನು ಸ್ಪಸ್ಪೆಂಡ್ ಮಾಡಿ, ಎಲ್ಲಾ ಹಂಪ್‌ಗಳು ಸೈಡ್‌ಗೆ ಹೋಗ್ತವೆ, ಏನು ಉತ್ತರ ಕೊಡ್ತಾರೆ ಅಧಿಕಾರಿಗಳು? ಅಧಿಕಾರಿಗಳ ಕಣ್ಣಿಗೆ ನಾವೇನು ಬಪೂನ್‌ಗಳ ತರಾ ಕಾಣ್ತೀವಾ?ಯಾರೋ ನಾಲ್ಕೈದು ಜನ ರೌಡಿಗಳು ಬಟನ್ ಬಿಚ್ಕೊಂಡು ಬರ್ತಾರೆ, ಅವರ ಮಾತು ಕೇಳ್ತಾರೆ ಎಂದು ಗರಂ ಆದ್ರು.

ರಸ್ತೆಯಲ್ಲಿ ಸರ್ಕಾರದ ಅನುಮತಿ ಇಲ್ಲದೇ ಹೇಗೆ ಸ್ಪೀಡ್ ಬ್ರೇಕ್ ಹಾಕ್ತಾರೆ?
ಇನ್ನು ರಮೇಶ್ ಕೋಪ ನೋಡಿ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಕೆಲವು ಕಡೆ ಸರ್ಕಾರ ಹಂಪ್ ಹಾಕೋದೇ ಇಲ್ಲ, ಕೆಲವು ಕಡೆಗಳಲ್ಲಿ ಊರಿನವರೇ ಗುತ್ತಿಗೆದಾರರ ಮೂಲಕ ಹಾಕಿಸಿಕೊಳ್ತಾರೆ. ಎಸ್‌ಪಿಗಳ, ಡಿಸಿಗಳ ಮೂಲಕ ವರದಿ ತರಿಸಿಕೊಳ್ತೇನೆ, ಎಲ್ಲರನ್ನೂ ಸಸ್ಪೆಂಡ್ ಮಾಡಿ ಅಂದ್ರೆ ಆಗುವ ಮಾತಲ್ಲ ಎಂದರು.

ರಸ್ತೆಯಲ್ಲಿ ಸರ್ಕಾರದ ಅನುಮತಿ ಇಲ್ಲದೇ ಹೇಗೆ ಸ್ಪೀಡ್ ಬ್ರೇಕ್ ಹಾಕ್ತಾರೆ? ನಾನು ಸದನದ ಸದಸ್ಯನಾಗಿ ಕೇಳುವ ಪ್ರಶ್ನೆಗಳಿಗೆ ಬೆಲೆ ಇಲ್ವಾ? ಅಧಿಕಾರಿಗಳ ಮಾತು ಕೇಳಿಕೊಂಡು ಈ ರೀತಿಯ ಉತ್ತರ ಕೊಟ್ರೆ ಹೇಗೆ? ಈ ರೀತಿ ಹೇಳೋದಾದ್ರೆ ನಾವ್ಯಾಕೆ ಪ್ರಶ್ನೆ ಕೇಳ್ಬೇಕು? ಪ್ರಶ್ನೆಯನ್ನು ವಾಪಸ್ ಪಡೆಯುತ್ತೇನೆ, ಇನ್ಮೇಲೆ ಪ್ರಶ್ನೆಗಳನ್ನೇ ಕೇಳಲ್ಲ ಎಂದು ರಮೇಶ್ ಕುಮಾರ್ ಮತ್ತೆ ಗರಂ ಆದrಉ.

ಇದು ರಮೇಶ್ ಕುಮಾರ್ ಒಬ್ಬರ ಕ್ಷೇತ್ರದ ಸಮಸ್ಯೆ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಇರುವ ಸಮಸ್ಯೆ, ಈಗಾಗಲೇ ಸಚಿವರು ಎಸ್‌ಪಿ, ಡಿಸಿಗಳ ಮೂಲಕ ವರದಿ ತರಿಸಿಕೊಂಡು ಕ್ಲಿಯರ್ ಮಾಡ್ತೇವೆ ಎಂದಿದ್ದಾರೆ, ನಾವು ತಮ್ಮ ಪ್ರಭಾವ ಬಳಸಿ, ಅವೈಜ್ಞಾನಿಕ ಹಂಪ್‌ಗಳನ್ನು ತೆಗೆಸೋಣ ಎಂದು ಸ್ಪೀಕರ್ ಮಾತು ಮುಗಿಸಿದರು.

ಇದನ್ನೂ ಓದಿ: ಮಾನಹಾನಿ ಪ್ರಕರಣ ವಿಚಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್​ನಿಂದ ನೋಟಿಸ್ ಜಾರಿ

Published On - 12:25 pm, Mon, 20 September 21