ವಾಹನಗಳಿಂದ ವಾಕ್​ ಮಾಡಲು ಕಷ್ಟ ಆಗುತ್ತೆ ಎಂದು ರಸ್ತೆಯನ್ನೇ ಬಂದ್ ಮಾಡಿದ ನಿವೃತ್ತ, ಹಾಲಿ IAS, IPS ಅಧಿಕಾರಿಗಳು

ಬೆಳಗ್ಗೆ ಹೊತ್ತು ವಾಕ್​ಗೆ ಹೋಗುವಾಗ ವಾಹನ ದಟ್ಟಣೆ ಕಿರಿಕಿರಿಯಾಗುತ್ತಿದೆ ಎಂದು ಹೆಚ್ಎಸ್ಆರ್ ಲೇಔಟ್​ನ 6ನೇ ಸೆಕ್ಟರ್​ನಲ್ಲಿರುವ ನಿವೃತ್ತ & ಹಾಲಿ IAS, IPS ಅಧಿಕಾರಿಗಳು ಸಿಲ್ಕ್ ಬೋರ್ಡ್ ಸಮೀಪ‌ ಇರುವ ಸರ್ವಿಸ್ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದಾಗಿ ವಾಹನ ಸವಾರರು ನಾಲ್ಕೈದು ಕಿ.ಮೀ. ಸಂಚರಿಸಿ ಸಾಗಬೇಕಾಗಿದೆ. ವಾಹನ ಸವಾರರಿಗೆ ಕಿರಿಕಿರಿಯಾಗಿದೆ.

ವಾಹನಗಳಿಂದ ವಾಕ್​ ಮಾಡಲು ಕಷ್ಟ ಆಗುತ್ತೆ ಎಂದು ರಸ್ತೆಯನ್ನೇ ಬಂದ್ ಮಾಡಿದ ನಿವೃತ್ತ, ಹಾಲಿ IAS, IPS ಅಧಿಕಾರಿಗಳು
ರಸ್ತೆ ಬಂದ್ ಮಾಡಿದ ನಿವೃತ್ತ, ಹಾಲಿ IAS, IPS ಅಧಿಕಾರಿಗಳು
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Mar 06, 2024 | 7:11 AM

ಬೆಂಗಳೂರು, ಮಾರ್ಚ್.06: ವಾಹನ ದಟ್ಟಣೆಯಿಂದ ತಮ್ಮ ವಾಯುವಿಹಾರಕ್ಕೆ ಸಮಸ್ಯೆ ಆಗುತ್ತೆ ಎಂದು ನಿವೃತ್ತ & ಹಾಲಿ IAS, IPS ಅಧಿಕಾರಿಗಳೇ ಸೇರಿಕೊಂಡು ರಸ್ತೆ ಬಂದ್ (Road Close) ಮಾಡಿರುವ ಆರೋಪ ಕೇಳಿ ಬಂದಿದೆ. ವಾಹನ ದಟ್ಟಣೆ ಆಗುತ್ತೆ ಎಂದು ಕಾನೂನು ಬಾಹಿರ ಕ್ರಮ‌ ತಗೊಂಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್​ನ 6ನೇ ಸೆಕ್ಟರ್​ನಲ್ಲಿ ಸಿಲ್ಕ್ ಬೋರ್ಡ್ ಸಮೀಪದ ಎಡಭಾಗದ ಸರ್ವಿಸ್ ರಸ್ತೆ ಬಂದ್ ಮಾಡಲಾಗಿದೆ. ನಿವೃತ್ತ & ಹಾಲಿ IAS, IPS ಅಧಿಕಾರಿಗಳು ಸೇರಿಕೊಂಡು ರಸ್ತೆಗೆ ಮರದ ದಿಮ್ಮಿಗಳು, ವಿದ್ಯುತ್ ಕಂಬ, ಸ್ಯಾನಿಟರಿ ಪೈಪ್ ಇಟ್ಟು ಬಂದ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ವಾಹನಗಳು ಸಂಚರಿಸುವುದರಿಂದ ತಮಗೆ ವಾಕ್ ಮಾಡಲು ಸಮಸ್ಯೆ ಆಗುತ್ತೆ ಎಂದು ಸ್ವತಃ ರಸ್ತೆ ಕ್ಲೋಸ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಹೆಚ್ಎಸ್ಆರ್ ಲೇಔಟ್ 6 ನೇ ಸೆಕ್ಟರ್ ನಲ್ಲಿ ಬಹುತೇಕ ನಿವೃತ್ತ ಹಾಗೂ ಹಾಲಿ ಐಎಎಸ್, ಐಪಿಎಸ್ ಅಧಿಕಾರಿಗಳೇ ಇದ್ದಾರೆ. ಇವರೆಲ್ಲರಿಗೆ ಬೆಳಗ್ಗೆ ವಾಕ್ ಮಾಡಲು ಸಮಸ್ಯೆ ಆಗುತ್ತೆ ಎಂದು ಸರ್ಕಾರ, ಬಿಬಿಎಂಪಿಯ ಅನುಮತಿಯನ್ನೂ ಪಡೆಯದೇ ತಾವೆ ರಸ್ತೆ ಬಂದ್ ಮಾಡಿದ್ದಾರೆ.

ಹೆಚ್ಎಸ್ಆರ್ ಲೇಔಟ್ 6 ನೇ ಸೆಕ್ಟರ್​ ರಸ್ತೆಗೆ ಸಂಪರ್ಕ‌ ಕಲ್ಪಿಸೊ, ಸಿಲ್ಕ್ ಬೋರ್ಡ್ ಸಮೀಪ‌ ಇರುವ ಸರ್ವಿಸ್ ರಸ್ತೆ ಬಂದ್ ಮಾಡಿದ್ದಾರೆ. ದೊಡ್ಡ ದೊಡ್ಡ ಗಾತ್ರದ ಮರದ ದಿಮ್ಮಿಗಳು ಅಡ್ಡ ಹಾಕಿ ಸಂಚಾರ ಅಡಚಣೆ ಮಾಡಿದ್ದಾರೆ. ಎಲ್ಲಾ ಗೊತ್ತಿದ್ರು ಏನು ಮಾಡಲಾಗದ ಪರಿಸ್ಥಿತಿ ಹೆಚ್ಎಸ್ಆರ್ ಲೇಔಟ್ ಟ್ರಾಫಿಕ್ ಪೊಲೀಸರದ್ದಾಗಿದೆ. ಇದೊಂದು ರಸ್ತೆ ಬಂದ್ ನಿಂದ ವಾಹನ ಸವಾರರು 4 ಕಿ.ಮೀ ಸುತ್ತಾಡಬೇಕಿದೆ. ಅಗ್ನಿಶಾಮಕ ವಾಹನ, ಌಂಬುಲೆನ್ಸ್​ಗಳು ಓಡಾಡಲು ಆಗದ ಪರಿಸ್ಥಿತಿ ಇದೆ. ಡೆಲಿವರಿ ಬಾಯ್ಸ್, ಟ್ಯಾಕ್ಸಿ ಚಾಲಕರಿಗೂ ಪ್ರತಿ ನಿತ್ಯ ನರಕ ದರ್ಶನವಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕದ ಐದು ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳನ್ನು ನೇಮಿಸಿ ರಾಜ್ಯಪಾಲ ಆದೇಶ

ವ್ಹೀಲಿಂಗ್​ ಮಾಡ್ತಿದ್ದ 20 ಜನ ಅರೆಸ್ಟ್

ಬೆಂಗಳೂರು ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವೀಲಿಂಗ್ ಶೂರರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಅಪಾಯಕಾರಿ ವೀಲಿಂಗ್ ಮಾಡುತ್ತಿದ್ದ 20 ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ . ಪೀಣ್ಯ , ರಾಜಾಜಿನಗರ , ಯಶವಂತಪುರ, ಆರ್ ಟಿ ನಗರ ಸೇರಿದಂತೆ ಹಲವು ಠಾಣೆಯಲ್ಲಿ 26 ಪ್ರಕರಣ ದಾಖಲಾಗಿತ್ತು . ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ